ಹೊಸ ಟಾಟಾ ನೆಕ್ಸಾನ್, 2 ಮಹೀಂದ್ರಾ ಸ್ಕಾರ್ಪಿಯೋ-ಎನ್‌ ವಿತರಣೆ ಸಮಯದಲ್ಲೇ ಅಪಘಾತ: ಇಲ್ಲಿದೆ ಮಾಹಿತಿ

ಹೊಸ ಕಾರುಗಳನ್ನು ವಿತರಣೆ ಪಡೆದ ಕೊಡಲೇ ಅಪಘಾತವಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪ್ರಮುಖವಾಗಿ ಚಾಲನಾ ಅನುಭವದ ಕೊರತೆ ಹಾಗೂ ತರಬೇತಿ ಪಡೆಯದೇ ಅನ್ಯ ಮಾರ್ಗದಿಂದ ಡ್ರೈವಿಂಗ್ ಲೆಸೆನ್ಸ್ ತೆಗೆದುಕೊಳ್ಳುವುದು ಇದಕ್ಕೆ ಕಾರಣವಾಗಿದೆ. ಸದ್ಯ, ಎರಡು ಪ್ರತ್ಯೇಕ ಘಟನೆಯಲ್ಲಿ ಹೊಸ ಟಾಟಾ ನೆಕ್ಸಾನ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋ-ಎನ್‌ ಕಾರುಗಳು ಅಪಘಾತಕ್ಕೆ ತುತ್ತಾಗಿವೆ.

ಮೊದಲ ಘಟನೆಯಲ್ಲಿ ಟಾಟಾ ನೆಕ್ಸಾನ್ ಎಫ್‌ಎಲ್ (Tata Nexon FL) ಎಸ್‌ಯುವಿ ಡೆಲಿವರಿ ತೆಗೆದುಕೊಂಡ ಕೂಡಲೇ ಅಪಘಾತಕ್ಕೆ ಒಳಗಾಗಿದೆ. ಕಾರಿನ ಮೇಲೆ ರಿಬ್ಬನ್ ಇರುವುದನ್ನು ನೋಡಬಹುದು. ನೆಕ್ಸಾನ್, ಫೋರ್ಸ್ ಕ್ರೂಸರ್‌ ಹಿಂಭಾಗಕ್ಕೆ (Force Cruiser) ಡಿಕ್ಕಿ ಹೊಡೆದಿದೆ. ಆದರೆ, ಈ ಅಪಘಾತಕ್ಕೆ ಕಾರಣವೇನು? ಎಲ್ಲಿ ಸಂಭವಿಸಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

New Tata Nexon and 2 Mahindra Scorpio-N crash: two different incidents

ಫೋರ್ಸ್ ಕ್ರೂಸರ್‌, ಬುಲ್ ಬಾರ್‌ ಹೊಂದಿರುವ ಕಾರಣ, ಟಾಟಾ ನೆಕ್ಸಾನ್ ಮುಂಭಾಗಕ್ಕೆ ಹೆಚ್ಚಿನ ಹಾನಿಯಾಗಿದೆ. ಆದಾಗ್ಯೂ, ನೆಕ್ಸಾನ್‌ನಲ್ಲಿದ್ದ ಪ್ರಯಾಣಿಕರು, ಯಾವುದೇ ಗಾಯಗಳಿಲ್ಲದೇ ಸುರಕ್ಷಿತರಾಗಿದ್ದಾರೆ. ಬಹುತೇಕರು ತಮ್ಮ ಕಾರುಗಳಿಗೆ ಬುಲ್ ಬಾರ್‌ಗಳನ್ನು ಅಳವಡಿಸುತ್ತಾರೆ. ಆದರೆ, ಇದರ ಉಪಯೋಗವನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಬುಲ್ ಬಾರ್‌ಗಳು ಹೆಚ್ಚುವರಿ ರಕ್ಷಣೆಯಂತೆ ತೋರುತ್ತಿದ್ದರೂ, ವಾಸ್ತವದಲ್ಲಿ ಅಪಾಯಕಾರಿಯಾಗಿದೆ.

ಒಂದು ವಾಹನ, ಮತ್ತೊಂದು ವಾಹನದೊಂದಿಗೆ ಮುಖಾಮುಖಿಯಾದಾಗ ಬುಲ್ ಬಾರ್‌ಗಳು ಏರ್‌ಬ್ಯಾಗ್ ಸೆನ್ಸಾರ್‌ಗಳಿಗೆ ಅಡ್ಡಿಪಡಿಸುತ್ತವೆ. ಕಾರಿನೊಳಗೆ ಇರುವವರ ಸುರಕ್ಷತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅವೆಲ್ಲ ಒಂದು ಕಡೆಯಾದರೆ, ನವೀಕರಿಸಿದ ಟಾಟಾ ನೆಕ್ಸಾನ್ ಎಸ್‌ಯುವಿ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಅಸಿಸ್ಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ.

New Tata Nexon and 2 Mahindra Scorpio-N crash: two different incidents

ಮತ್ತೊಂದು ಘಟನೆಯಲ್ಲಿ ಎರಡು ನೂತನ ಮಹೀಂದ್ರಾ ಸ್ಕಾರ್ಪಿಯೋ - ಎನ್ (Mahindra Scorpio - N) ಎಸ್‌ಯುವಿಗಳು ವಿತರಣೆಯಾಗುವ ಮುನ್ನವೇ ಅಪಘಾತಕ್ಕೆ ತುತ್ತಾಗಿವೆ. ಶೋರೂಂವೊಂದರ ಸಿಬ್ಬಂದಿ, ಸ್ಟಾಕ್‌ಯಾರ್ಡ್‌ನಿಂದ ಶೋರೂಂಗೆ ಧಂತೇರಸ್‌ ಹಿನ್ನೆಲೆ, ಕಾರುಗಳನ್ನು ಡೆಲಿವರಿ ಕೊಡಲು ಹಿಂದಿರುವಾಗಾಗ ಈ ಅಪಘಾತ ನಡೆದಿದೆ. ಇಬ್ಬರು ಚಾಲಕರು ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಮುಂಭಾಗದಲ್ಲಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ, ಮಹೀಂದ್ರಾ ಸ್ಕಾರ್ಪಿಯೋ -ಎನ್ ಚಾಲಕ ಇದ್ದಕ್ಕಿದಂತೆ ಬ್ರೇಕ್ ಹಾಕಿದ್ದಾನೆ. ಹಿಂದೆ ಬರುತ್ತಿದ್ದ ಮತ್ತೊಂದು ಸ್ಕಾರ್ಪಿಯೋ-ಎನ್ ಚಾಲಕ, ಮೊದಲೇ ವೇಗದಲ್ಲಿದ್ದ ಕಾರಣ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೇ ಈ ಅಪಘಾತ ಸಂಭವಿಸಿದೆ. ಯಾವುದೇ ವಾಹನ ರಸ್ತೆಯಲ್ಲಿ ಹೋಗುವಾಗ ಕನಿಷ್ಠ ಅಂತರವನ್ನು ಕಾಯ್ದುಕೊಂಡರೆ ಮುಂದಾಗಬಹುದಾದ ಅಪಾಯದಿಂದ ಪಾರಾಗಬಹುದು.

New Tata Nexon and 2 Mahindra Scorpio-N crash: two different incidents

ಮಹೀಂದ್ರಾ ಸ್ಕಾರ್ಪಿಯೋ - ಎನ್ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವQರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 22, 2023, 15:06 [IST]
English summary
New tata nexon and 2 mahindra scorpio n crash two different incidents
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+