Tata Nexon: ಗದ್ದೆಯಲ್ಲಿ ಪಲ್ಟಿಯಾದ ಹೊಸ ಟಾಟಾ ನೆಕ್ಸಾನ್, ಪ್ರಯಾಣಿಕರು ಸುರಕ್ಷಿತ.. ಏನು ಗಟ್ಟಿ ರೀ!
ಇತ್ತೀಚಿನ ದಿನಗಳಲ್ಲಿ ಹೊಚ್ಚ ಹೊಸ ಕಾರುಗಳು ಅಪಘಾತಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ, ನೂತನ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (Tata Nexon facelift) ಎಸ್‌ಯುವಿ ಪಲ್ಟಿಯಾಗಿ ಅಪಘಾತವಾಗಿರುವ ಘಟನೆ ವರದಿಯಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿ ಪಾರಾಗಿದ್ದಾರೆ.
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಅಪಘಾತಕ್ಕೆ ತುತ್ತಾಗಿರುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಿಡುತ್ತಿದೆ. ಈ ಘಟನೆ ಎಲ್ಲಿ ಸಂಭವಿಸಿದೆ, ಹೇಗೆ ನಡೆಯಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ವಿಡಿಯೋದಲ್ಲಿ ನೆಕ್ಸಾನ್ ಡೋರ್ ಹ್ಯಾಂಡಲ್ ಹಾಗೂ ಮುಂಭಾಗದ ಬಾನೆಟ್ ಮೇಲಿರುವ ರಿಬ್ಬನ್‌ಗಳನ್ನು ನೋಡಿದರೆ, ಹೊಸ ಕಾರು ಎಂದು ಸುಲಭವಾಗಿ ಗೊತ್ತಾಗುತ್ತದೆ.

ಈ ಕಾರು, ಗದ್ದೆಯೊಂದರ ಸಣ್ಣ ಹಳ್ಳದಲ್ಲಿ ಉರುಳಿ ಬಿದಿದ್ದು, ಗ್ರಾಮಸ್ಥರು ಹಗ್ಗವನ್ನು ಕಟ್ಟಿ ಕಾರನ್ನು ಮೇಲೆತ್ತುತ್ತಿರುವುದನ್ನು ಕಾಣಬಹುದು. ಆ ಬಳಿಕ, ಸ್ಟಾರ್ಟ್ ಆಗದಿರುವ ನೆಕ್ಸಾನ್ ಎಸ್‌ಯುವಿಯನ್ನು ಹಗ್ಗದಿಂದ ಎಳೆಯುತ್ತಿರುವುದನ್ನು ನೋಡಬಹುದು. ಅಪಘಾತವಾದ ರಭಸಕ್ಕೆ ಕಾರಿನ ಎ - ಪಿಲ್ಲರ್ ಮತ್ತು ರೂಫ್ ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ನೆಕ್ಸಾನ್ ಎಸ್‌ಯುವಿಯೊಳಗಿದ್ದವರೂ ಸುರಕ್ಷಿತವಾಗಿ ಅಪಾಯದಿಂದ ಪಾರಾಗದಿದ್ದಾರೆ.
ವಿಶ್ವಾದ್ಯಂತ ಎಸ್‌ಯುವಿಗಳು ಅಪಾರ ಪ್ರಯಾಣದ ಜನಪ್ರಿಯತೆಯನ್ನು ಗಳಿಸಿವೆ. ಆದರೂ ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್‌ಗಳಿಗೆ ಹೋಲಿಸಿದರೆ ಎಸ್‌ಯುವಿಗಳು ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುತ್ತವೆ. ಇದರಿಂದ ವೇಗವಾಗಿ ಹೋಗಬೇಕಾದರೆ, ಮುಖ್ಯವಾಗಿ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗುವ ಸಾಧ್ಯತೆಯಿದ್ದು, ಚಾಲಕರು ರಸ್ತೆಯಲ್ಲಿ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕಾಗಿದೆ. ಆದರೆ, ಈ ಘಟನೆ ಹೀಗೆ ಸಂಭವಿಸಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ.

ಸುರಕ್ಷತೆಯ ದೃಷ್ಟಿಯಿಂದ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಕಾರಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಇದು 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಅಸಿಸ್ಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಈ ಕಾರು, ದೇಶೀಯ ಮಾರುಕಟ್ಟೆಯಲ್ಲಿ ರೂ.8.10 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ನೆಕ್ಸಾನ್, 17.01 - 24.08 kmpl ಮೈಲೇಜ್ ನೀಡುತ್ತದೆ. 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25 - ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ನೆಕ್ಸಾನ್ ಎಲೆಕ್ಟ್ರಿಕ್ ರೂಪದಲ್ಲಿಯೂ ಖರೀದಿಗೆ ಲಭ್ಯವಿದ್ದು, ರೂ.15.52 ಲಕ್ಷ (ದೆಹಲಿ) ಆನ್-ರೋಡ್ ಬೆಲೆಯನ್ನು ಹೊಂದಿದ್ದು, 325 km - 465 km ರೇಂಜ್ ನೀಡುತ್ತದೆ. ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications