ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿದ ನವದಂಪತಿ..!
ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳಿವೆ. ಇದರ ಜೊತೆಗೆ ಹೆಚ್ಚಿನ ಪ್ರಮಾಣದ ಅಪಘಾತಗಳೂ ಸಂಭವಿಸುತ್ತಿರುತ್ತವೆ. ಇದಕ್ಕೆ ಕಾರಣ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದು.

ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದಾಗ ಅಪಘಾತ ಸಂಭವಿಸಿದರೆ, ಮೊದಲು ತಲೆಗೆ ಪೆಟ್ಟಾಗುತ್ತದೆ. ಹೆಲ್ಮೆಟ್ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಪ್ರಮಾಣದ ಸುರಕ್ಷತೆಯನ್ನು ನೀಡುತ್ತದೆ.

ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದರೂ ಸಹ ದ್ವಿಚಕ್ರ ವಾಹನ ಸವಾರರು ಅದನ್ನು ಪರಿಗಣಿಸದೇ ಹೆಲ್ಮೆಟ್‍ಗಳನ್ನು ಧರಿಸುವುದೇ ಇಲ್ಲ. ಈ ಮೊದಲು ದ್ವಿ ಚಕ್ರ ವಾಹನ ಸವಾರಿ ಮಾಡುವವರಿಗೆ ಮಾತ್ರ ಕಡ್ಡಾಯವಾಗಿದ್ದ ಹೆಲ್ಮೆಟ್ ಅನ್ನು ನಂತರದ ದಿನಗಳಲ್ಲಿ ಹಿಂಬದಿಯ ಸವಾರರಿಗೂ ಕಡ್ಡಾಯಗೊಳಿಸಲಾಯಿತು.

ದ್ವಿ ಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸಿರುವ ರಾಜ್ಯಗಳಲ್ಲಿ ಕೇರಳವೂ ಒಂದು. ಕೇರಳ ಸರ್ಕಾರದ ಪರವಾಗಿ ಅಲ್ಲಿನ ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕೇರಳ ಸರ್ಕಾರವೂ ಸಹ ಚಿತ್ರ ನಟರ ಸಹಾಯದಿಂದ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಸಿನಿಮಾ ನಟರು ಹೆಲ್ಮೆಟ್ ಧರಿಸದೇ ದ್ವಿ ಚಕ್ರ ವಾಹನದಲ್ಲಿ ಸಂಚರಿಸಿದರೆ ಯಾವ ಪರಿಣಾಮಗಳಾಗ ಬಹುದು ಎಂಬುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಅಲ್ಲಿನ ಸರ್ಕಾರವೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದೆ. ಈ ಕಾರಣಕ್ಕಾಗಿಯೇ ಅಲ್ಲಿನ ಜನರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಇದರ ಜೊತೆಗೆ ನವವಿವಾಹಿತ ಜೋಡಿಯೊಂದು ಈ ಅಭಿಯಾನದಲ್ಲಿ ಪಾಲ್ಗೊಂಡು ವಿಭಿನ್ನವಾಗಿ ಜಾಗೃತಿಯನ್ನು ಮೂಡಿಸಿದೆ. ಮದುವೆಯಲ್ಲಿ ತಮಗೆ ದೊರೆತ ಹಣವನ್ನೆಲ್ಲಾ ಜನರಿಗೆ ಉಚಿತ ಹೆಲ್ಮೆಟ್ ನೀಡಲು ವಿನಿಯೋಜಿಸಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕೇರಳದ ಪಾಲಕ್ಕಾಡ್ ಬಳಿಯ ಚಿಟ್ಟೂರಿನ ದೇವದಾಸಂ ಹಾಗೂ ಶ್ರುತಿ ಎಂಬುವವರ ಮದುವೆಯು ಡಿಸೆಂಬರ್ 13ರಂದು ನೆರವೇರಿದೆ. ಈ ಮದುವೆಯಲ್ಲಿ ಈ ದಂಪತಿಯು ಸುಮಾರು 25 ಸಾವಿರ ರೂಪಾಯಿಗಳನ್ನು ಕಾಣಿಕೆಯಾಗಿ ಪಡೆದಿದ್ದಾರೆ.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಹಣವನ್ನು ದೇವದಾಸಂ ಹಾಗೂ ಶ್ರುತಿರವರು ಹೆಚ್ಚಿನ ಜನರ ಪ್ರಯೋಜನಕ್ಕೆ ಬರುವಂತಹ ಕಾರ್ಯಕ್ಕೆ ಬಳಸಲು ನಿರ್ಧರಿಸಿದರು. ಈ ಕಾರಣಕ್ಕೆ ದ್ವಿ ಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್‍ಗಳನ್ನು ನೀಡಲು ಮುಂದಾದರು.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಸಂಬಂಧ ಮದುವೆಯ ನಂತರ ಪಾಲಕ್ಕಾಡ್‍ನಲ್ಲಿರುವ ಆರ್‍ಟಿಒ ಕಚೇರಿಗೆ ಭೇಟಿ ನೀಡಿದರು. ಆರ್‍ಟಿಒ ಕಚೇರಿಗೆ ಬೈಕಿನಲ್ಲಿ ಬಂದ ಇವರಿಬ್ಬರೂ ಹೆಲ್ಮೆಟ್ ಧರಿಸಿದ್ದು ವಿಶೇಷ. ಇವರ ಈ ಯೋಜನೆಗೆ ಆರ್‍ಟಿಒ ಅಧಿಕಾರಿಗಳೂ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವರದಿಗಳ ಪ್ರಕಾರ ಇಂದು ಪಾಲಕ್ಕಾಡ್‍ನಲ್ಲಿ ನಡೆಯುವ ಸಮಾರಂಭದಲ್ಲಿ ದೇವದಾಸಂ ಹಾಗೂ ಶೃತಿ ದಂಪತಿಗಳು ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್‍ಗಳನ್ನು ಉಚಿತವಾಗಿ ವಿತರಿಸಲಿದ್ದಾರೆ. ನವ ದಂಪತಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications