ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಭಾರತದಲ್ಲಿ ಅದ್ದೂರಿ ಮದುವೆಗಳಿಗೆ ಕೊರತೆಯಿಲ್ಲ. ಭಾರತದಲ್ಲಿ ನಡೆಯುವ ಕೆಲವು ವಿವಾಹಗಳು ಐಷಾರಾಮಿತನದಿಂದ ಕೂಡಿರುತ್ತವೆ. ಕರೋನಾ ವೈರಸ್ ಕಾರಣದಿಂದಾಗಿ ಐಷಾರಾಮಿ ಮದುವೆಗಳಿಗೆ ಕಡಿವಾಣ ಹಾಕಲಾಗಿದೆ.

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಈ ಐಷಾರಾಮಿ ಮದುವೆಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಬಳಸಲಾಗುತ್ತದೆ. ಮದುವೆ ನಂತರ ನವ ವಧು-ವರರನ್ನು ಮನೆಗೆ ಕರೆತರಲು ದುಬಾರಿ ಬೆಲೆಯ ಕಾರುಗಳನ್ನು ಸಿದ್ದಪಡಿಸಲಾಗುತ್ತದೆ. ಕಾರುಗಳ ಅಲಂಕಾರಕ್ಕಾಗಿಯೇ ಹಲವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ. ಬಹು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರನ್ನು ಬಾಡಿಗೆಗೆ ಪಡೆದು ಅದನ್ನು ಮದುವೆಗೆ ಬಳಸುವ ಹಲವು ಮಂದಿಯಿದ್ದಾರೆ.

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ, ಲ್ಯಾಂಬೊರ್ಗಿನಿ ಉರುಸ್, ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಹಾಗೂ ಬಿಎಂಡಬ್ಲ್ಯು 5 ಸೀರಿಸ್ ಕಾರುಗಳನ್ನು ಬಳಸಲಾಗಿತ್ತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಆದರೆ ಈ ಎಲ್ಲ ಐಷಾರಾಮಿ ಕಾರುಗಳಿಗೆ ತದ್ವಿರುದ್ದವಾಗಿ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸುಲೂರ್ ಎಂಬ ಪ್ರದೇಶದಲ್ಲಿ ಬಹಳ ವಿಭಿನ್ನವಾದ ವಿವಾಹವೊಂದು ಜರುಗಿದೆ. ಈ ಮದುವೆ ಸಮಾರಂಭದಲ್ಲಿ ಐಷಾರಾಮಿ ಕಾರುಗಳಿಗೆ ಬದಲಿಗೆ ವಧು-ವರರು ಎತ್ತಿನ ಗಾಡಿಯಲ್ಲಿ ಬಂದಿದ್ದಾರೆ. ಈ ವಿಶಿಷ್ಟ ಮದುವೆ ಎಲ್ಲರ ಗಮನ ಸೆಳೆದಿದೆ.

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಕೊಯಮತ್ತೂರಿನ ಸುಲೂರಿನ ನಿವಾಸಿ ಪಲುಮಕೇಂದ್ರನ್ ರವರು ಎಂ.ಎ ಪದವೀಧರ ಹಾಗೂ ಕಬಡ್ಡಿ ಆಟಗಾರ. ಅವರ ವಿವಾಹ ಕೊಯಮತ್ತೂರಿನ ಎಂ.ಎಸ್ಸಿ ಪದವೀಧರೆ ಸುಕನ್ಯಾರವರ ಜೊತೆಗೆ ಸುಲೂರಿನಲ್ಲಿ ನೆರವೇರಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಮದುವೆಯ ನಂತರ ವಧು ವರರು ಕಾರುಗಳಲ್ಲಿ ಮನೆಗೆ ಹೋಗುವುದು ಸಹಜ. ಆದರೆ ಪಲುಮಕೇಂದ್ರನ್-ಸುಕನ್ಯಾ ದಂಪತಿ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿದ್ದಾರೆ. ಇದೇನು ಅಸಾಮಾನ್ಯ ಸಂಗತಿಯಲ್ಲವಾದರೂ ಎತ್ತಿನ ಗಾಡಿಯಲ್ಲಿ ನವ ವಧು ವರರು ಪ್ರಯಾಣಿಸುವುದು ತೀರಾ ವಿರಳವಾಗಿದೆ.

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಹಳೆಯ ಪರಂಪರೆಯನ್ನು ಪ್ರದರ್ಶಿಸುವ ಸಲುವಾಗಿ ನವ ವಧು-ವರರು ಮದುವೆ ಮೆರವಣಿಗೆಯಲ್ಲಿ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಕನ್ಯಾರವರು, ನಾನು ಈ ಹಿಂದೆ ಯಾವತ್ತೂ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಲಿಲ್ಲ. ಮದುವೆ ನಂತರ ಎತ್ತಿನ ಗಾಡಿಯಲ್ಲಿ ಸಾಗಿದ್ದು ಒಳ್ಳೆಯ ಅನುಭವವನ್ನು ನೀಡಿತು ಎಂದು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮದುವೆ ಮೆರವಣಿಗೆಗೆ ಎತ್ತಿನ ಗಾಡಿ ಬಳಸಿದ ನವ ದಂಪತಿ

ಮದುವೆ ಮೆರವಣಿಗೆಗೆ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವವರ ನಡುವೆ ಹಳೆಯ ಪರಂಪರೆಯನ್ನು ಮುಂದುವರೆಸಲು ಮುಂದಾದ ಈ ದಂಪತಿಯ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನ್ಯೂಸ್ 18 ತಮಿಳು ವರದಿ ಮಾಡಿದೆ.

Most Read Articles

Kannada
English summary
Newly wed couple travels in bullock cart. Read in Kannada.
Story first published: Monday, September 7, 2020, 9:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X