ನಿಲ್ಲದ ಗಡ್ಕರಿಯ ಹೆದ್ದಾರಿ ಅಭಿವೃದ್ಧಿ: ಟೋಲ್ ಸಂಗ್ರಹಕ್ಕೆ ಹೊಸ ಪ್ಲಾನ್: ಶೀಘ್ರದಲ್ಲೇ ಟೆಂಡರ್!
ಅಂತರಾಷ್ಟ್ರೀಯ ಮಟ್ಟದ ಹೆದ್ದಾರಿಗಳನ್ನು ಭಾರತದಲ್ಲಿ ಕಾಣಲು ಪಣತೊಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು, ಇದೀಗ ಹೊಸ ಪ್ಲಾನ್ ಅನ್ನು ಬಹಿರಂಗಪಡಿಸಿದ್ದಾರೆ. ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲು ಸಜ್ಜಾಗಿರುವುದಾಗಿ ಗಡ್ಕರಿ ಹೇಳಿದ್ದಾರೆ.
ಹೆದ್ದಾರಿಗಳ ಪ್ರಗತಿಯ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮೀಡಿಯಾಗಳ ಮುಖಾಂತರ ಮಾಹಿತಿ ಹಂಚಿಕೊಳ್ಳುವ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಶೀಘ್ರದಲ್ಲೇ ಟೆಂಡರ್‌ನೊಂದಿಗೆ ಬರಲಿದೆ. ಇದಕ್ಕೆ ಸಂಬಂಧಿಸಿದ ಪ್ರಾಯೋಗಿಕ ಯೋಜನೆಗಳು ಯಶಸ್ವಿಯಾಗಿವೆ ಎಂದು ತಿಳಿಸಿದ್ದಾರೆ.

ನಿತ್ಯ ಹೆದ್ದಾರಿಗಳ ವಿಚಾರವಾಗಿ ಹೊಸ ಟೆಕ್ನಾಲಜಿಯನ್ನು ಪರಿಶೀಲಿಸುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH), ಹೊಸ ಜಿಪಿಎಸ್ ಆಧಾರಿತ ಟೋಲ್ ಸಿಸ್ಟಮ್‌ಗಳ ಪ್ರಾಯೋಗಿಕ ಯೋಜನೆಗಳನ್ನು ಯಶಸ್ವಿಯಾಗಿರುವುದನ್ನು ತಿಳಿಸಿದೆ, ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಶೀಘ್ರದಲ್ಲೇ ಟೆಂಡರ್‌ನೊಂದಿಗೆ ಹೊರಡಲಿದೆ.
''ದೇಶದಲ್ಲಿನ ಟೋಲ್ ಪ್ಲಾಜಾಗಳನ್ನು ಬದಲಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಗಳ ಪ್ರಾಯೋಗಿಕ ಯೋಜನೆಗಳು ಯಶಸ್ವಿಯಾಗಿವೆ... ನಾವು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲು ಟೆಂಡರ್‌ನೊಂದಿಗೆ ಹೊರಡುತ್ತೇವೆ, "ಎಂದು ಕಾರ್ಯಕ್ರಮವೊಂದರಲ್ಲಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಈ ಕ್ರಮವು ಸಾಕಷ್ಟು ಪ್ರಯೋಜನಗಳನ್ನು ತಂದುಕೊಡಲಿದೆ, ಪ್ರಯಾಣಿಕರಿಗೆ ಅನುಕೂಲಕರವಾದ ಪ್ರಯಾಣಕ್ಕಾಗಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರವಾದ ದೂರಕ್ಕೆ ವಾಹನ ಚಾಲಕರಿಂದ ಶುಲ್ಕ ವಿಧಿಸುವ ಗುರಿಯನ್ನು ಹೊಂದಿದೆ. ಇದು ಪ್ರಯಾಣಿಕರು ಬಳಸದ ರಸ್ತೆಯ ಶುಲ್ಕವನ್ನು ಕಡಿತಗೊಳಿಸಿ ಹಣ ಉಳಿಸುತ್ತದೆ.
ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಗಳ (Automatic number plate reader cameras) ಎರಡು ಪ್ರಾಯೋಗಿಕ ಯೋಜನೆಗಳನ್ನು ನಡೆಸಿದೆ ಎಂದು ವರದಿಯಾಗಿದೆ.

ಈ ತಿಂಗಳ ಆರಂಭದಲ್ಲಿ, ಲೋಕಸಭೆಗೆ ಲಿಖಿತ ಉತ್ತರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಸಲಹೆಗಾರರನ್ನು ನೇಮಿಸಿದೆ ಎಂದು ಹೇಳಿದ್ದರು. ಅದರಂತೆ ಈಗ ಹೊಸ ಯೋಜನಗೆ ಸಂಬಂಧಿಸಿದ ಕೆಲಸಗಳು ಶುರುವಾಗಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.
2018-19ರಲ್ಲಿ, ಟೋಲ್ ಪ್ಲಾಜಾದಲ್ಲಿ ವಾಹನಗಳಿಗೆ ಸರಾಸರಿ ಕಾಯುವ ಸಮಯ 8 ನಿಮಿಷಗಳಿತ್ತು. 2020-21 ಮತ್ತು 2021-22ರ ಅವಧಿಯಲ್ಲಿ ಫಾಸ್ಟ್‌ಟ್ಯಾಗ್‌ಗಳ ಪರಿಚಯದೊಂದಿಗೆ, ವಾಹನಗಳ ಸರಾಸರಿ ಕಾಯುವ ಸಮಯವನ್ನು 47 ಸೆಕೆಂಡುಗಳಿಗೆ ಕಡಿಮೆ ಮಾಡಲಾಗಿದೆ. ಕೆಲವು ಸ್ಥಳಗಳಲ್ಲಿ, ವಿಶೇಷವಾಗಿ ನಗರಗಳ ಸಮೀಪದಲ್ಲಿ, ಜನನಿಬಿಡ ಪಟ್ಟಣಗಳಲ್ಲಿ ಕಾಯುವ ಸಮಯದಲ್ಲಿ ಗಣನೀಯ ಸುಧಾರಣೆ ಕಂಡುಬಂದರೂ, ಪೀಕ್ ಅವರ್‌ಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಇನ್ನೂ ಕೆಲವು ವಿಳಂಬಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications