ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ದೇಶದಲ್ಲೆಡೆ ಕೊರೋನಾ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದ್ದರೆ ಜನರು ಅಸಹಾಯಕತೆಯಿಂದ ನೋಡುವಂತಾಗಿದೆ. ಕೊರೋನಾ ಎರಡನೇ ಅಲೆಯಿಂದಾಗಿ ವೈದ್ಯಕೀಯ ತುರ್ತುಪರಿಸ್ಥಿತಿ ತಲೆದೋರಿದೆ. ಇದರಿಂದ ಹಲವು ಕರುಣಾಜನಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಕೊರೋನಾ ರಣಕೇಕೆ ಹಾಕುತ್ತಿರುವಾಗ ಬೆಡ್​, ಆಕ್ಸಿಜನ್ ಮತ್ತು ಆಂಬ್ಯುಲೆನ್ಸ್​​ ಕೊರತೆ ಉಂಟಾಗಿದೆ. ಅನೇಕ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಾಣ ಕಳೆದುಕೊಂಡರವರ ಶವಸಂಸ್ಕಾರ ಮಾಡಲು ಶವ ಸಾಗಿಸಲು ಕೂಡ ಬಡವರು ಪರದಾಡುವಂತ ಸ್ಥಿತಿ ಎದುರಾಗಿದೆ. ಇದೇ ರೀತಿ ಆಂಧ್ರ ಪ್ರದೇಶದಲ್ಲಿ ಆಂಬ್ಯುಲೆನ್ಸ್​​ ಸಿಗದಿದ್ದರಿಂದ ಬೈಕ್​ನಲ್ಲಿ ಶವ ಸಾಗಿಸಿರುವ ಮನಕಲಕುವಂತಹ ಘಟನೆ ನಡೆದಿದೆ.

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಆಂಧ್ರ ಪ್ರದೇಶದ ಶ್ರೀಕಾಕುಳಂನ ಮಂದಾಸ್ ಎಂಬ ಗ್ರಾಮದಲ್ಲಿ 50 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಗುಣಲಕ್ಷಣವನ್ನು ಕಾಣಿಸಿಕೊಂಡಿತ್ತು. ನಂತರ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಪರೀಕ್ಷಾ ವರದಿ ಇನ್ನಷ್ಟೆ ಬರಬೇಕಿತ್ತು. ಆದರೆ ಸೋಮವಾರ ಮಹಿಳೆಯ ಆರೋಗ್ಯ ಗಂಭೀರವಾದಗ ಖಾಸಗಿ ಆಸ್ಪೆತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಕೆಯ ಆರೋಗ್ಯ ತುಂಬಾ ಹದಗೆಟ್ಟ ಪರಿಣಾಮ ಆಸ್ಪೆತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಬಳಿಕ ಸಾವನ್ನಪ್ಪಿದ ಮಹಿಳೆಯ ಶವ ಸಾಗಿಸಲು ಆಂಬ್ಯುಲೆನ್ಸ್​ಗಾಗಿ ಎಷ್ಟೇ ಪ್ರಯತ್ನಿಸಿದರು ಸಿಗುವುದಿಲ್ಲ. ಎಷ್ಟೇ ಸಮಯ ಕಾದರೂ ಆಂಬ್ಯುಲೆನ್ಸ್​ ಮಾತ್ರ ದೊರೆತಿಲ್ಲ. ಕೊನೆಗೆ ಖಾಸಗಿ ವಾಹನಗಳಿಗೂ ಪ್ರಯತ್ನಿಸುತ್ತಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಕೊರೋನಾ ಸೋಂಕಿನಿಂದ ಮೃತಪಟ್ಟ ಕಾರಣ ಖಾಸಗಿ ವಾಹನಗಳು ಕೂಡ ಸಿಗುವುದಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಯಾವುದೇ ವಾಹನ ಅವರಿಗೆ ಲಭಿಸುವುದಿಲ್ಲ. ಅಲ್ಲದೇ ಅವರು ಮೃತ ಪಟ್ಟು ಹಲವು ಗಂಟೆಗೆ ಕಳಿತ ಬಂತು.

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಅವರ ಗ್ರಾಮದಲ್ಲಿ ಕುಟಂಬಸ್ಥರು ಅಂತ್ಯ ಸಂಸ್ಕಾರವನ್ನು ನೆರವೆರಿಸಲು ಕಾಯುತ್ತ ಇರುತ್ತಾರೆ. ಕಡೆಗೆ ಅವರಿಗೆ ದಿಕ್ಕೇ ದೊಚದಾಗ ಸಾವನ್ನಪ್ಪಿದ ಮಹಿಳೆಯ ಮಗ ಮತ್ತು ಆಕೆಯ ಅಳಿಯನೇ ಬೈಕ್​ನಲ್ಲಿ ತಮ್ಮೂರಿಗೆ ಶವವನ್ನು ಸಾಗಿಸುತ್ತಾರೆ. ನಂತರ ಅವರು ತಮ್ಮ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಇನ್ನು ಕೊರೋನಾ ಸೋಂಕಿತನನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೃತಪಟ್ಟ ಬಳಿಕ ಮೃತದೇಹವನ್ನು ಚಿತಾಗಾರಕ್ಕೆ ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲು ರೂ.60 ಸಾವಿರ ಬೇಡಿಕೆ ಇಟ್ಟ ಪ್ರಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದಾಗ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಂಬ್ಯುಲೆನ್ಸ್​​​ ಸಿಗದೇ ತಾಯಿ ಶವವನ್ನು ಬೈಕ್​ನಲ್ಲಿ ಸಾಗಿಸಿದ ಮಗ

ಒಟ್ಟಿನಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಜನರ ಬದುಕು ತತ್ತರಿಸಿದೆ. ಇನ್ನು ಹಲವರು ಇಂತಹ ಸಂಕಷ್ಟದ ಸಮಯದಲ್ಲಿಯು ಮಾನವೀಯತೆಯನ್ನು ಮೆರತು ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಇದರಲ್ಲಿ ಬಡವರು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

Most Read Articles

Kannada
English summary
No Ambulance, Family Forced To Take Woman'Bbody On Bike For Cremation. Read In Kananda.
Story first published: Tuesday, April 27, 2021, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X