ಕದ್ದ ಎಟಿಎಂ ಕಾರ್ಡ್ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಇಬ್ಬರು ದರೋಡೆಕೋರರನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಈ ದರೋಡೆಕೊರರು ಪೊಲೀಸರಿಗೆ ಸಿಕ್ಕಿ ಬಿದ್ದ ರೀತಿ ಮಾತ್ರ ವಿಚಿತ್ರವಾಗಿದೆ.

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಈ ಘಟನೆ ಜುಲೈ 22 ರಂದು ನಡೆದಿದೆ. ನೋಯ್ಡಾದ ವ್ಯಕ್ತಿಯೊಬ್ಬರು ಊಟಕ್ಕೆ ಬಂದಿದ್ದಾರೆ. ಬೈಕಿನಲ್ಲಿ ಬಂದ ಈ ಇಬ್ಬರು ದರೋಡೆಕೋರರು ಆ ವ್ಯಕ್ತಿಯ ಸೆಲ್‌ಫೋನ್, ವಾಚ್ ಹಾಗೂ ಪರ್ಸ್ ಗಳನ್ನು ಕದ್ದು ಪರಾರಿಯಾಗಿದ್ದಾರೆ. ಕದ್ದ ಪರ್ಸ್‌ನಲ್ಲಿ ನಗದು, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಗಳಿದ್ದವು.

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಸ್ವಲ್ಪ ದೂರ ಹೋದ ನಂತರ ಆ ಇಬ್ಬರು ದರೋಡೆಕೋರರು ಮತ್ತೆ ವಾಪಸ್ ಆಗಿದ್ದಾರೆ. ಎಟಿಎಂ ಕಾರ್ಡ್ ಕಳೆದು ಕೊಂಡ ವ್ಯಕ್ತಿಯ ಬಳಿ ಪಾಸ್‌ವರ್ಡ್ ಕೇಳಲು ವಾಪಸ್ ಆಗಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಆ ವ್ಯಕ್ತಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಆ ಇಬ್ಬರೂ ದರೋಡೆಕೋರರಿಗೆ ಬೈಕ್‌ ನಿಲ್ಲಿಸಲು ಹೇಳಿದ್ದಾರೆ. ಬೈಕ್ ನಿಲ್ಲಿಸುವ ಬದಲು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಅವರನ್ನು ಬೆನ್ನತ್ತಿದ ಪೊಲೀಸರು ತಮ್ಮ ರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಆ ಇಬ್ಬರೂ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಬಂಧಿತರನ್ನು ಗೌರವ್ ಸಿಂಗ್ ಹಾಗೂ ಸದಾನಂದ್ ಎಂದು ಗುರುತಿಸಲಾಗಿದೆ. ಕದ್ದ ಪರ್ಸ್, ರೂ.3,200 ನಗದು ಹಾಗೂ ಎಟಿಎಂ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಅವರ ಬಳಿಯಿದ್ದ 2 ನಾಡ ಪಿಸ್ತೂಲು ಹಾಗೂ ಬ್ಯಾಗ್ ಗಳನ್ನು ಸಹ ವಶಪಡಿಸಿ ಕೊಳ್ಳಲಾಗಿದೆ.

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ದರೋಡೆ ನಡೆಸಲು ಬಳಸಲಾದ ಬೈಕ್ ಅವರಿಗೆ ಸೇರಿದ್ದೇ ಅಥವಾ ಕಳುವು ಮಾಡಲಾಗಿದ್ದೇ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಆದರೆ ಸಾಮಾನ್ಯವಾಗಿ ಸುಲಿಗೆಕೋರರು ಸರಗಳ್ಳತನ, ಕೊಲೆ ಹಾಗೂ ದರೋಡೆಯಂತಹ ಅಪರಾಧ ಪ್ರಕರಣಗಳಲ್ಲಿ ಕದ್ದ ಬೈಕುಗಳನ್ನೇ ಬಳಸುತ್ತಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಕದ್ದ ಬೈಕ್‌ಗಳಿಂದ ಸಿಕ್ಕಿ ಬೀಳುವುದಿಲ್ಲವೆಂಬ ಕಾರಣಕ್ಕೆ ಕದ್ದ ವಾಹನಗಳನ್ನೇ ಸುಲಿಗೆಕೋರರು ಬಳಸುತ್ತಾರೆ. ಈ ಕಾರಣಕ್ಕೆ ನಿಮ್ಮ ವಾಹನಗಳು ಕಳುವಾಗದಂತೆ ಎಚ್ಚರ ವಹಿಸುವುದು ಮುಖ್ಯ. ಕೆಲವರು ಮರೆತು ತಮ್ಮ ಬೈಕ್ ಕೀಗಳನ್ನು ಬೈಕ್‌ನಲ್ಲಿಯೇ ಬಿಡುತ್ತಾರೆ.

ಕದ್ದ ಎಟಿಎಂ ಪಾಸ್‌ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು

ಇದು ಕಳ್ಳರ ಕೆಲಸವನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಈ ರೀತಿಯ ಕೀಗಳನ್ನು ಹೊಂದಿರುವ ಬೈಕ್‌ಗಳು ಸುಲಿಗೆಕೋರರ ಮೊದಲ ಆಯ್ಕೆಯಾಗಿರುತ್ತವೆ. ಬೈಕುಗಳನ್ನು ಪಾರ್ಕ್ ಮಾಡಿದ ನಂತರ ಲಾಕ್ ಮಾಡಿ ಕೀಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Noida police arrests robbers who came to ask atm pin. Read in Kannada.
Story first published: Saturday, July 25, 2020, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X