ಸಾಮಾನ್ಯರಿಗಾಗಿ ವಂದೇ ಭಾರತ್ ವೈಶಿಷ್ಟ್ಯಗಳೊಂದಿಗೆ ನಾನ್-ಎಸಿ ರೈಲು ತರಲು ಸಜ್ಜಾದ ರೈಲ್ವೇ

ಭಾರತೀಯ ರೈಲ್ವೇಯು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆ ಹಲವು ವೈಶಿಷ್ಟ್ಯಗಳೊಂದಿಗೆ ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯ ನಾನ್ ಎಸಿ ರೈಲುಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಹೊಸ ಕೈಗೆಟುಕುವ ನಾನ್ ಎಸಿ ರೈಲನ್ನು ಪರಿಚಯಿಸುವ ಮೂಲಕ ಭಾರತೀಯ ರೈಲ್ವೇಯು ಸಾಮಾನ್ಯ ಜನರಿಗೆ ಉತ್ತೇಜಕ ನಿರೀಕ್ಷೆಯನ್ನು ತರಲು ಸಿದ್ಧವಾಗಿದೆ.

ವಂದೇ ಭಾರತ್ ರೈಲುಗಳು ಸೇವೆಗೆ ಬಂದ ಬಳಿಕ ಎಲ್ಲರಿಗೂ ಒಮ್ಮೆಯಾದ್ರು ಇದರಲ್ಲಿ ಪ್ರಯಾಣಿಸಬೇಕೆಂಬ ಕುತೂಹಲ ಹೆಚ್ಚಾಗಿದೆ. ಆದ್ರೆ ಸಾಮಾನ್ಯ ಜನರು ಇದರ ಟಿಕೆಟ್ ದರ ಹೆಚ್ಚು ಎಂಬ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿಯೇ ಸಮಾನ್ಯ ಜನರಿಗಾಗಿ ವಂದೇ ಭಾರತ್ ವೈಶಿಷ್ಟ್ಯಗಳೊಂದಿಗೆ ನಾನ್-ಎಸಿ ರೈಲುಗಳನ್ನು ತರಲು ರೈಲ್ವೇ ಇಲಾಖೆ ಮುಂದಾಗಿದೆ.

non-ac-train-vande-bharat-features-for-common-man

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಯಶಸ್ವಿ ಓಡಾಟದ ನಂತರ, ಅಧಿಕಾರಿಗಳು ಈಗ ನವೀಕರಿಸಿದ ಎರಡನೇ ದರ್ಜೆಯ ಕಾಯ್ದಿರಿಸದ ಮತ್ತು ಎರಡನೇ ದರ್ಜೆಯ 3-ಹಂತದ ಸ್ಲೀಪರ್ ಕೋಚ್‌ಗಳನ್ನು ಹೊಂದಿರುವ ಹೊಚ್ಚಹೊಸ ರೈಲನ್ನು ತಯಾರಿಸಲು ಸಜ್ಜಾಗುತ್ತಿದ್ದಾರೆ. ಹೊಸ ರೈಲಿನ ಮೂಲಮಾದರಿಯು ಈ ವರ್ಷದ ಅಂತ್ಯದ ವೇಳೆಗೆ ಅನಾವರಣಗೊಳ್ಳುವ ನಿರೀಕ್ಷೆಯಿದೆ.

ಈ ಹೊಸ ರೈಲಿಗೆ ಹೆಸರನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ ಸಾಮಾನ್ಯ ಜನರ ಪ್ರಯಾಣದ ಅನುಭವವನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ. ಪ್ರತಿಷ್ಠಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಂತೆಯೇ ಹೊಸ ರೈಲು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎಂದು ಊಹಿಸಲಾಗಿದೆ. ಎಲ್ಲವು ಅಂದುಕೊಂಡಂತೆ ಆದರೆ ರೈಲ್ವೆಯು ಅಕ್ಟೋಬರ್‌ನಲ್ಲಿ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಲಿದೆ.

non-ac-train-vande-bharat-features-for-common-man

ವಂದೇ ಭಾರತ್‌ಗಿಂತ ಭಿನ್ನವಾಗಿರಲಿದೆ: ಈ ಮುಂಬರುವ ಹೊಸ ರೈಲು ನಾನ್‌-ಎಸಿ ಜೊತೆಗೆ ವಂದೇ ಭಾರತ್ ವೈಶಿಷ್ಟ್ಯಗಳೊಂದಿಗೆ ಬಂದರೂ ಲೊಕೊ ಎಂಜಿನ್ ಅನ್ನು ಹೊಂದಿರಲಿದೆ. ಎರಡೂ ತುದಿಗಳಲ್ಲಿ ಎಂಜಿನ್‌ಗಳ ಉಪಸ್ಥಿತಿಯಲ್ಲಿರಲಿದೆ. ಇದು ಒಂದೇ ಎಂಜಿನ್‌ನಿಂದ ಎಳೆಯಲ್ಪಡುವ ಹೆಚ್ಚಿನ ಭಾರತೀಯ ರೈಲುಗಳಿಗಿಂತ ಭಿನ್ನವಾಗಿರಲಿದೆ ಎಂದು ತಿಳಿದುಬಂದಿದೆ.

ಎಂಜಿನ್‌ಗಳನ್ನು ಪ್ರಸ್ತುತ ಚಿತ್ತರಂಜನ್ ಲೊಕೊಮೊಟಿವ್ ವರ್ಕ್ಸ್‌ನಲ್ಲಿ (ಸಿಎಲ್‌ಡಬ್ಲ್ಯೂ) ತಯಾರಿಸಲಾಗುತ್ತಿದೆ ಎನ್ನಲಾಗಿದೆ. ಹಾಗೆಯೇ ರೈಲು ಕೋಚ್‌ಗಳನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗುತ್ತದೆ. ICF ಪ್ರಸ್ತುತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿರುವ ಏಕೈಕ ಭಾರತೀಯ ರೈಲ್ವೇ ಕೋಚ್ ಫ್ಯಾಕ್ಟರಿಯಾಗಿದೆ.

non-ac-train-vande-bharat-features-for-common-man

ಈ ರೈಲಿನ ಎಲ್ಲಾ ಕೋಚ್‌ಗಳು ನಾನ್-ಎಸಿ ಆಗಿದ್ದು, ಸಾಮಾನ್ಯ ಜನರ ಆದ್ಯತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತವೆ. ಅಂದರೆ 2 ಸೆಕೆಂಡ್ ಲಗೇಜ್, ಗಾರ್ಡ್ ಮತ್ತು ದಿವ್ಯಾಂಗ-ಸ್ನೇಹಿ ಕೋಚ್‌ಗಳನ್ನು ಒಳಗೊಂಡಿರುತ್ತದೆ, ಜೊತೆಗೆ 8 ಎರಡನೇ ದರ್ಜೆಯ ಕಾಯ್ದಿರಿಸದ ಕೋಚ್‌ಗಳು ಮತ್ತು 12 ಎರಡನೇ ದರ್ಜೆಯ 3-ಟೈಯರ್ ಸ್ಲೀಪರ್ ಕೋಚ್‌ಗಳನ್ನು ಒಳಗೊಂಡಿರುತ್ತದೆ.

ಭಾರತೀಯ ರೈಲ್ವೇಯು ಈ ಹಿಂದೆ 2017 ರಲ್ಲಿ ಅಂತ್ಯೋದಯ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಿತ್ತು. ಇದು ಕಾಯ್ದಿರಿಸದ ಪ್ರಯಾಣಕ್ಕಾಗಿ ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಂಬರುವ ರೈಲು ಮೆಚ್ಚುಗೆ ಪಡೆದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಪ್ರಮುಖ ವೈಶಿಷ್ಟ್ಯಗಳನ್ನು ಸಂಯೋಜಿಸುವ ನಿರೀಕ್ಷೆಯಿದೆ, ಇದು ಸೌಕರ್ಯ ಮತ್ತು ಸೌಲಭ್ಯಗಳ ವಿಷಯದಲ್ಲಿ ಅಂತ್ಯೋದಯ ಅನ್ನು ಮೀರಿಸುವ ನಿರೀಕ್ಷೆಯಿದೆ.

More from DriveSpark

Article Published On: Thursday, July 20, 2023, 15:58 [IST]
English summary
Non ac train vande bharat features for common man
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+