ಜಗತ್ತಿನಲ್ಲೇ ಮೊದಲ ಬಾರಿಗೆ ಹಡಗಿನಲ್ಲಿ ರೇಸ್ ಟ್ರ್ಯಾಕ್
ವಿಹಾರ ನೌಕೆಯಲ್ಲಿ ಪಯಣಿಸುವ ಪ್ರವಾಸಿಗರಿಗೆ ಅದ್ಭುತ ಅನುಭವ ನೀಡಲು ಮುಂದಾಗಿರುವ ನಾರ್ವೇಜಿಯನ್ ಜಾಯ್ ಸಂಸ್ಥೆಯು ಇದೇ ಮೊದಲ ಬಾರಿಗೆ ಹಡಗಿನಲ್ಲಿ ರೇಸ್ ಟ್ರ್ಯಾಕ್ ಸೇವೆಯನ್ನು ತೆರೆದುಕೊಂಡಿದೆ.
ಚೀನಾ ತಳಹದಿಯ ಜರ್ಮನಿಯಲ್ಲಿ ನಿರ್ಮಿತ ನಾರ್ವೇಜಿಯನ್ ಜಾಯ್ ಸಂಸ್ಥೆಯು ವಿಶ್ವದ ಮುಂಚೂಣಿಯ ಹಡಗು ಸಂಸ್ಥೆಗಳಲ್ಲಿ ಒಂದಾಗಿದೆ. ಈಗ ಮೊದಲ ಬಾರಿಗೆ ವಿಹಾರ ನೌಕೆಯಲ್ಲಿ ಗೊ-ಕಾರ್ಟ್ ರೇಸ್ ರೋಚಕ ಕ್ಷಣಗಳನ್ನು ಒದಗಿಸುತ್ತಿದೆ.

ತನ್ಮೂಲಕ ನೆಲದಲ್ಲಿ ಏನೆಲ್ಲ ಮಾಡಲು ಸಾಧ್ಯವಿದೆಯೋ ಅಂತಹ ಸೌಲಭ್ಯಗಳೆನ್ನೆಲ್ಲ ಸಮುದ್ರದಲ್ಲಿ ತೇಲಾಡುವ ಹಡಗಿನಲ್ಲೂ ಒದಗಿಸಲು ಸಾಧ್ಯ ಎಂಬುದನ್ನು ನಾರ್ವೇಜಿಯನ್ ಜಾಯ್ ಸಾಬೀತುಪಡಿಸಿದೆ.

ಹಡಗಿನ ಮೇಲ್ಚಾವಣಿಯಲ್ಲಿ ಗೊ-ಕಾರ್ಟ್ ರೇಸ್ ಟ್ರ್ಯಾಕ್ ಸೇವೆಯನ್ನು ತೆರೆಯಲಾಗುವುದು. ಇದು 2017ರ ವೇಳೆಯಾಗುವಾಗ ಚೀನಾದಲ್ಲಿ ಪಾದರ್ಪಣೆಗೈಯಲಿದೆ.

ನಾರ್ವೇಜಿಯನ್ ಜಾಯ್ ನೂತನ ವಿಹಾರ ನೌಕೆಯು 640 ಅಮೆರಿಕನ್ ಡಾಲರ್ ಗಳಷ್ಟು ದುಬಾರಿಯೆನಿಸುತ್ತದೆ. ಇದಲ್ಲದೆ ಮಕ್ಕಳಿಗಾಗಿ ವಾಸ್ತವತೆಯ ಕೊಠಡಿ, ಲೇಸರ್ ಟ್ಯಾಗ್ ಕೋರ್ಸ್ ಮತ್ತು ಮೋಜಿಗಾಗಿ ದೈತ್ಯ ನೀರಿನ ಅಲೆಗಳ ಸೇವೆಯನ್ನು ನೀಡಲಾಗುತ್ತದೆ.

ನಾರ್ವೇಜಿಯನ್ ಜಾಯ್ ಅಭಿಪ್ರಾಡುತ್ತಿರುವಂತೆಯೇ ಎರಡು ಹಂತಗಳ ರೇಸ್ ಟ್ರ್ಯಾಕ್ ಸಮುದ್ರದಲ್ಲಿ ಸಂಚರಿಸುವ ಹಡಗಿನಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ ಎಂದಿದೆ.

ಸದ್ಯ ಪ್ರಾಥಮಿಕ ಹಂತದಲ್ಲಿರುವ ರೇಸ್ ಟ್ರ್ಯಾಕ್ ನೀಲಿ ನಕ್ಷೆಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಇದು ರೇಸ್ ಪ್ರಿಯರಿಗೆ ಮತ್ತಷ್ಟು ರೋಚಕ ಅನುಭವ ನೀಡಲಿದೆ.

ವಿಹಾರ ನೌಕೆಯಲ್ಲಿ ಸಂಚರಿಸುವ ಯಾತ್ರಿಕರಿಗೆ ಗರಿಷ್ಠ ಮನರಂಜನೆಯನ್ನು ನೀಡುವುದು ಸಂಸ್ಥೆಯ ಗುರಿಯಾಗಿದೆ. ಇದಕ್ಕಾಗಿ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ನೀಡಲು ನಾರ್ವೇಜಿಯನ್ ಜಾಯ್ ಬದ್ಧವಾಗಿದೆ.

ಇನ್ನು ಶಾಂಪಿಂಗ್ ಮಾಡಲು ಬಯಸುವವರಿಗಾಗಿ ವಿಶ್ವ ಪ್ರಖ್ಯಾತ ಬ್ರ್ಯಾಂಡ್ ಗಳ ಆಯ್ಕೆಯನ್ನು ಒದಗಿಸಲಾಗಿದೆ.

ಅಂದ ಹಾಗೆ ನಾರ್ವೇಜಿಯನ್ ಜಾಯ್ ವಿಹಾರ ನೌಕೆಯಲ್ಲಿ 3,900ರಷ್ಟು ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ.

ಸದ್ಯ ಜರ್ಮನಿಯಲ್ಲಿ ನಿರ್ಮಾಣ ಹಂತದಲ್ಲಿರುವ ನಾರ್ವೇಜಿಯನ್ ಜಾಯ್ ತದಾ ಬಳಿಕ ಮುಂದಿನ ವರ್ಷಾರಂಭದಲ್ಲಿ ತವರೂರಾದ ಚೀನಾವನ್ನು ತಲುಪಲಿದೆ.


Click it and Unblock the Notifications








