ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ವಾಹನದಲ್ಲಿ ಆಫ್ ರೋಡ್‌ಗೆ ತೆರಳಲು ಹಲವು ವಾಹನ ಪ್ರೇಮಿಗಳಿಗೆ ಇಷ್ಟ. ಆದರೆ ಆಫ್-ರೋಡ್ ತೆರಳಲು ಫ್ಹೋರ್ ವ್ಹೀಲ್ ಡ್ರೈವ್(4X4) ವಾಹನಗಳೇ ಹೆಚ್ಚು ಸೂಕ್ತ. ಆದರೆ ಕೆಲವರು ಫ್ರಂಟ್ ವ್ಹೀಲ್ ಡ್ರೈವ್(4X2) ವಾಹನಗಳಲ್ಲಿ ಆಫ್-ರೋಡ್ ತೆರೆಳಿ ಸಿಲುಕಿಕೊಂಡ ಸಾಕಷ್ಟು ವೀಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ನೋಡಬಹುದು.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಇದೇ ರೀತಿ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯ ಆಫ್-ರೋಡ್ ಸಾಮರ್ಥ್ಯಗಳನ್ನು ಪರಿಶೀಲಿಸಲು ತೆಗೆದುಕೊಂಡ ಹೋದ ಮಾಲಿಕ ಸಿಲಿಕಿಕೊಂಡಿರುವ ವೀಡಿಯೊ ಸಹಿತ ಉದಾಹರಣೆ ಇಲ್ಲಿದೆ, ಅರುಣ್ ಪವಾರ್ ಅವರೂ ಯೂಟ್ಯೂಬ್ ನಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯು ಗದ್ದೆ ಪ್ರದೇಶದಲ್ಲಿ ಸಿಲುಕಿಕೊಂಡ ವೀಡಿಯೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯನ್ನು ಯಾವುದೇ ಸಮಸ್ಯೆಯಿಲ್ಲದೆ ಕೃಷಿ ಕ್ಷೇತ್ರದ ಸುತ್ತಲೂ ಹೋಗುವುದನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ನಂತರ ಕೆಸರು ತುಂಬಿದ ಗದ್ದೆಯಲ್ಲಿ ತೆಗೆದುಕೊಂಡು ಹೋಗುತ್ತಾನೆ ಮತ್ತು ವಾಹನದ ಚಕ್ರಗಳು ಆರಂಭದಲ್ಲೇ ಜಾರಿಕೊಳ್ಳಲು ಪ್ರಾರಂಭಿಸುತ್ತವೆ. ಎಕ್ಸ್‌ಯುವಿ700 ಎಸ್‍ಯುವಿಯು ಚಾಲಕನು ಮುಂದೆ ಮತ್ತು ಹಿಮ್ಮುಖವಾಗಿ ಹೋಗುವ ಮೂಲಕ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಲೇ ಇದ್ದನು ಆದರೆ ವಾಹನವು ಅದೇ ಸ್ಥಳದಲ್ಲಿ ಸಿಲುಕಿಕೊಂಡಿತು.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಅವರು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಆಫ್ ಮಾಡುವ ಮೂಲಕ ಕಾರನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ ಆದರೆ ಅದು ಸಹಾಯ ಮಾಡುವುದಿಲ್ಲ. ಇದು ಮಹೀಂದ್ರಾ ಎಕ್ಸ್‌ಯುವಿ700 ಪೆಟ್ರೋಲ್-ಆಟೋಮ್ಯಾಟಿಕ್ ರೂಪಾಂತರವಾಗಿದೆ. ಇದರ ಕ್ಲಚ್ ಎಂಗೇಜ್‌ಮೆಂಟ್ ಅನ್ನು ಮಾಡ್ಯುಲೇಟ್ ಮಾಡಲು ಸಾಧ್ಯವಿಲ್ಲ. ಇದು ಅಂತಹ ಸಂದರ್ಭಗಳಲ್ಲಿ ಸಹಾಯಕವಾಗಬಹುದು.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಸಾಕಷ್ಟು ಹೆಣಗಾಡಿದ ನಂತರ ಮತ್ತು ಪರಿಸ್ಥಿತಿಯಿಂದ ಹೊರಬರಲು ವಿಫಲವಾದ ನಂತರ, ಅವರು ಎಕ್ಸ್‌ಯುವಿ700 ಎಸ್‍ಯುವಿಯನ್ನು ಮಾರ್ಗದಲ್ಲಿನ ಕೆಸರನ್ನು ತೆಗೆಯಲು ನಿರ್ಧರಿಸುತ್ತಾರೆಮತ್ತು ಮತ್ತೆ ಪ್ರಯತ್ನಿಸುತ್ತಾರೆ. ಟೈರ್‌ಗಳ ಮುಂಭಾಗ ಮತ್ತು ಹಿಂಭಾಗದ ಕೆಸರನ್ನು ತೆಗೆಯುತಾರೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ನಂತರ, ಅವರು ವಾಹನವನ್ನು ಹಿಮ್ಮುಖವಾಗಿ ಇಟ್ಟುಕೊಂಡು ವಾಹನವನ್ನು ಮುಂಭಾಗದಿಂದ ತಳ್ಳುತ್ತಾರೆ. ಇದು ಸಾಕಷ್ಟು ಹೋರಾಟದ ನಂತರ ಅಂತಿಮವಾಗಿ ಎಸ್‍ಯುವಿಯು ಕೆಸರಿನಿಂದ ಹೊರಬರುತ್ತದೆ. 4X2 ಅನ್ನು ಹೊರತುಪಡಿಸಿ, ಈ ಪರಿಸ್ಥಿತಿಯಲ್ಲಿ ರೋಡ್-ಆಧಾರಿತ ಟೈರ್‌ಗಳು ಅಂತಹ ಜಾರು ಮೇಲ್ಮೈಗಳಲ್ಲಿ ಯಾವುದೇ ರೀತಿಯ ಗ್ರೀಪ್ ಒದಗಿಸಲು ವಿಫಲವಾಗುತ್ತವೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಸರಿಯಾದ ಟೈರ್‌ಗಳನ್ನು ಹೊಂದಿರುವ 4X2 ವಾಹನಗಳು ಸಹ ಆಫ್-ರೋಡಿಂಗ್ ಟ್ರ್ಯಾಕ್‌ಗಳಲ್ಲಿ ಅದ್ಭುತ ಪ್ಫರ್ಫಾಮೆನ್ಸ್ ನೀಡಬಹುದು. ಮಹೀಂದ್ರಾ ಎಕ್ಸ್‌ಯುವಿ700 ಅನ್ನು ಆಲ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ನೀಡುತ್ತದೆ. ಪೂರ್ಣ ಪ್ರಮಾಣದ 4X4 ಸಿಸ್ಟಂ ಅಲ್ಲ ಆದರೆ ಇದು ಎಕ್ಸ್‌ಯುವಿ500 ಎಡಬ್ಲ್ಯುಡಿ ಬಳಸಿದಂತೆಯೇ ಇರುತ್ತದೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಎಡಬ್ಲ್ಯುಡಿ ಸಿಸ್ಟಂ ಅತ್ಯುತ್ತಮ ಹಿಡಿತವನ್ನು ಒದಗಿಸಲು ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ನಡುವೆ ಪವರ್ ಅನ್ನು ವಿತರಿಸುತ್ತಲೇ ಇರುತ್ತದೆ. 4X2 ವಾಹನಗಳಲ್ಲಿ ಓಡಿಸುವುದಕ್ಕಿಂತ ಎಡಬ್ಲ್ಯುಡಿ ಉತ್ತಮವಾಗಿದ್ದರೂ, ಎಡಬ್ಲ್ಯುಡಿ ವಾಹನಗಳೊಂದಿಗೆ ಸರಿಯಾದ ರೀತಿಯ ಟೈರ್‌ಗಳ ಅಗತ್ಯವಿದೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಇನ್ನು ಇತ್ತೀಚೆಗೆ ನದಿಯಲ್ಲಿ ಥಾರ್ ಎಸ್‍ಯುವಿ ಸಿಲುಕಿಕೊಂಡಿರುವ ವೀಡಿಯೋ ವೈರಲ್ ಆಗಿತ್ತು. ಇಲ್ಲಿ ಥಾರ್ ಎಸ್‍ಯುವಿಯು ಸಿಲುಕಿಕೊಂಡಿರುವುದಕ್ಕೆ ಅದರ ಸಾಮರ್ಥ್ಯಗಳ ಬಗ್ಗೆ ಅಲ್ಲ, ಆಫ್-ರೋಡ್ ಚಾಲನೆ ಕೌಶಲ್ಯ ಕೂಡ ಪ್ರಮುಖವಾಗಿದೆ. ಮಹೀಂದ್ರಾ ಥಾರ್ ತನ್ನ ಆಫ್-ರೋಡ್ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ ಎಸ್‍ಯುವಿಯಾಗಿದೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಕಠಿಣವಾದ ಅಥವಾ ಹೆಚ್ಚು ಜಾರುವ ಸ್ಥಳಗಳಲ್ಲಿ ಎಸ್‍ಯುವಿಯನ್ನು ಡ್ರೈವ್ ಮಾಡುವಾಗ ಹೆಚ್ಚಿನ ಕೌಶಲ್ಯವನ್ನು ಕೂಡ ಹೊಂದಿರಬೇಕು. ಎಷ್ಟೇ ಆಫ್-ರೋಡ್ ಸಾಮರ್ಥ್ಯವಿರುವ ವಾಹನವಾದರೂ ಅದಕ್ಕೆ ಗ್ರಿಪ್ ಸಿಗದಿರುವ ಜಾರುವ ಸ್ಥಳದ ಕಡೆ ಡ್ರೈವ್ ಮಾಡಿದರೆ ಇದೇ ರೀತಿಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು.

ಅದೇ ರೀತಿ ಕಠಿಣವಾದ ದಾರಿಯಲ್ಲಿ ವಾಹನವನ್ನು ಸಾಗಿಸುವ ಅದರ ಸಾಮರ್ಥ್ಯದ ಬಗ್ಗೆ ತಿಳಿದಿರಬೇಕು. ನೀರಿನಲ್ಲಿ ಕೂಡ ಇಳಿಸುವ ಮುನ್ನ ವಾಹನದ ಮಿತಿಗಳನ್ನು ತಿಳಿದುಕೊಳ್ಳಬೇಕು. ಹೊಸ ಥಾರ್ 650 ಎಂಎಂ ವಾಟರ್ ವೇಡಿಂಗ್ ಹೊಂದಿದೆ, ಆಫ್-ರೋಡ್ ಹೋಗುವಾಗ ಡ್ರೈವರ್ ಉತ್ತಮ ಕೌಶಲ್ಯವನ್ನು ಹೊಂದಿರಬೇಕು ಮತ್ತು ವಾಹನದ ಸಾಮರ್ಥ್ಯವನ್ನು ತಿಳಿದಿರಬೇಕು.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಇನ್ನು ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ700 ಎಸ್‌ಯುವಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ, ಈ ಹೊಸ ಎಸ್‍ಯುವಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 75 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಮೂಲಕ ಕನಿಷ್ಠ 1 ವರ್ಷಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಈ ಹೊಸ ಎಕ್ಸ್‌ಯುವಿ700 ಮಾದರಿಯನ್ನು ಮಹೀಂದ್ರಾ ಕಂಪನಿಯು 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ. ಈ ಎಸ್‍ಯುವಿಯಲ್ಲಿ 2.2-ಲೀಟರ್ mHawk ಡೀಸೆಲ್ ಮತ್ತು 2.0-ಲೀಟರ್ mStallion ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ.

ಆಫ್ ರೋಡ್‌ಗೆ ತೆರಳಲು ಫ್ರಂಟ್ ವ್ಹೀಲ್ ಡ್ರೈವ್ ವಾಹನ ಸೂಕ್ತವಲ್ಲ: ಇಲ್ಲಿದೆ ಉತ್ತಮ ಉದಾಹರಣೆ

ಈ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯು ಕೇವಲ 5 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯು ಮೂರು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಇನ್ನು ಈ ಎಕ್ಸ್‌ಯುವಿ700 ಎಸ್‍ಯುವಿಯು ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.

Most Read Articles

Kannada
English summary
Offroading in a front wheel drive mahindra xuv700 suv is worst idea details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X