ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಓಲಾ ಕ್ಯಾಬ್- ಇಬ್ಬರು ಸ್ಥಳದಲ್ಲೇ ಸಾವು

Written By:

ರಸ್ತೆ ಬದಿ ನಿಂತಿದ್ದ ಲಾರಿಗೆ ಓಲಾ ಕ್ಯಾಬ್ ಒಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಹಿಂಬದಿಯಲ್ಲಿ ಕುಳಿತಿದ್ದ ಪ್ಯಾಸೆಂಜರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಓಲಾ ಕ್ಯಾಬ್- ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರಿನ ಜಿಕೆವಿಕೆ ಮೇಲ್ಸೇತುವೆ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಓಲಾ ಕ್ಯಾಬ್- ಇಬ್ಬರು ಸ್ಥಳದಲ್ಲೇ ಸಾವು

ಚಾಲಕನ ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ಬಗೆಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಆದ್ರೆ ಮೃತ ಪ್ಯಾಸೆಂಜರ್‌ನನ್ನು ದೆಹಲಿ ಮೂಲದ ಉಮೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಓಲಾ ಕ್ಯಾಬ್- ಇಬ್ಬರು ಸ್ಥಳದಲ್ಲೇ ಸಾವು

ಅಪಘಾತವಾದ ಹಿನ್ನೆಲೆ ವಿಮಾನ ನಿಲ್ದಾಣ ರಸ್ತೆಯು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿದ್ದು, ಘಟನೆ ಕುರಿತಂತೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಓಲಾ ಕ್ಯಾಬ್- ಇಬ್ಬರು ಸ್ಥಳದಲ್ಲೇ ಸಾವು

ಇನ್ನು ಅಪಘಾತದಲ್ಲಿ ಸಿಲುಕಿದ ಕಾರು ಮಾರುತಿ ಸುಜುಕಿ ರಿಟ್ಜ್ ಎಂದು ತಿಳಿದು ಬಂದಿದ್ದು, ಕಾರಿನ ನಂಬರ್ ಕೆಎ-05 ಎಫ್-755 ಗುರುತಿಸಲಾಗಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಓಲಾ ಕ್ಯಾಬ್- ಇಬ್ಬರು ಸ್ಥಳದಲ್ಲೇ ಸಾವು

ಆದ್ರೆ ಅದೇನೆ ಇರಲಿ ವೇಗದ ಪ್ರಯಾಣಕ್ಕೂ ಮುನ್ನ ಪ್ರತಿಯೊಬ್ಬ ಚಾಲಕರು ಮುನ್ನೆಚ್ಚೆರಿಕೆ ವಹಿಸುವ ಅವಶ್ಯಕತೆಯಿದ್ದು, ಪ್ರತಿ ಹಂತದಲ್ಲೂ ರಸ್ತೆ ನಿಯಮಗಳನ್ನು ಪಾಲಿಸುವುದು ನಿಮಗೂ ಒಳಿತು ಇತರರಿಗೂ ಒಳಿತು.

Read more on ಅಪಘಾತ accident
English summary
Read in Kannada about Ola Cab Hits to Lorry in Bengaluru.
Story first published: Saturday, July 29, 2017, 13:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark