Ola ಎಲೆಕ್ಟ್ರಿಕ್ ಸ್ಕೂಟರ್ ಬೋಗಸ್ ಜಾಹೀರಾತು: ಉಂಡೆನಾಮ ಹಾಕಿಸಿಕೊಂಡ ವ್ಯಕ್ತಿ... ಏನು ಈ ಘಟನೆ?

ಪ್ರತಿಯೊಬ್ಬರಿಗೂ ಜೀವನದಲ್ಲಿ ದ್ವಿಚಕ್ರ ವಾಹನ ಖರೀದಿಸಬೇಕೆಂಬ ಆಸೆ ಇರುತ್ತದೆ. ಭಾರತದಲ್ಲಿ ಓಲಾ (Ola) ಎಲೆಕ್ಟ್ರಿಕ್ ಸ್ಕೂಟರ್ ಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗಳಿಸಿವೆ. ಇದನ್ನೇ ಕೆಲ ವಂಚಕರು ಬಂಡವಾಳ ಮಾಡಿಕೊಂಡಿದ್ದು, ಮುಗ್ದ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಸದ್ಯ, ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟಿ ಡೀಲರ್ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದ 25 ವರ್ಷದ ವ್ಯಕ್ತಿ ರಾಜೇಂದ್ರ ಶರ್ಮಾ ಪಾಂಡ ಎಂಬುವನನ್ನು ಇತ್ತೀಚೆಗೆ ದೆಹಲಿ ಪೊಲೀಸರು, ಮಹಾರಾಷ್ಟ್ರದ ಥಾಣೆಯಲ್ಲಿ ಅರೆಸ್ಟ್ ಮಾಡಿದ್ದಾರೆ. ಈತ ಕೊಂಚವು ಅನುಮಾನ ಬರದಂತೆ ಮುಗ್ದ ಖರೀದಿದಾರರನ್ನು ಯಾಮಾರಿಸುತ್ತಿದ್ದನು. ಅಷ್ಟಕ್ಕೂ ಯಾವ ರೀತಿ ವಂಚಿಸುತ್ತಿದ್ದ ಎಂದು ತಿಳಿದ್ರೆ ಕ್ಷಣಕಾಲ ಕೋಪ ಬರುವುದು ಗ್ಯಾರಂಟಿ.

Ola ಸ್ಕೂಟರ್ ಖರೀದಿಸುವಾಗ ಎಚ್ಚರವಿರಲಿ: ಸ್ವಲ್ಪ ಯಾಮಾರಿದ್ರೂ ವಂಚಕರಿಂದ ಬೀಳುತ್ತೆ ಪಂಗನಾಮ!

ಈ ಮೋಸಗಾರ ರಾಜೇಂದ್ರ ಶರ್ಮಾ ಮಹಾರಾಷ್ಟ್ರದ ಥಾಣೆಯ ಡೊಂಬಿವಲಿ ನಿವಾಸಿಯಾಗಿದ್ದು, 'ಓಲಾ ಎಲೆಕ್ಟ್ರಿಕ್ ಸ್ಕೂಟಿ' ಡೀಲರ್ ಎಂದು ಪೋಸ್ ನೀಡುತ್ತಿದ್ದ. ಗೂಗಲ್‌ನಲ್ಲಿ ನಕಲಿ ಜಾಹೀರಾತುಗಳನ್ನು ಕ್ರಿಯೇಟ್ ಮಾಡಿ, ಹಲವರಿಗೆ ಮೋಸ ಮಾಡಿದ್ದಾನೆ. ಈತನಿಂದ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬ ಸೈಬರ್ ಪೊಲೀಸರಿಗೆ ದೂರು ನೀಡಿದ ಮೇಲೆ ಸಂಪೂರ್ಣ ಘಟನೆ ಬೆಳಕಿಗೆ ಬಂದಿದೆ.

ಕೇಸ್ ದಾಖಲಿಸಿಕೊಂಡ ದೆಹಲಿಯ ದ್ವಾರಕಾ ಸೈಬರ್ ಪೊಲೀಸ್ ಠಾಣೆ ಸಿಬ್ಬಂದಿ ತನಿಖೆಯನ್ನು ಚುರುಕುಗೊಳಿಸಿ, ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ದೂರುದಾರ ವ್ಯಕ್ತಿ, ಗೂಗಲ್‌ನಲ್ಲಿ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್‌ ಹುಡುಕುತ್ತಿದ್ದರು. ಆ ವೇಳೆ ಓಲಾ ಸ್ಕೂಟರ್ ನ ನಕಲಿ ಜಾಹೀರಾತಿಗೆ ಬೆರಗಾಗಿ ಅದರಲ್ಲಿದ್ದ ಫೋನ್ ಸಂಖ್ಯೆಗೆ ಕರೆ ಮಾಡಿದ್ದಾರೆ.

ಆಗ ವಂಚಕ ರಾಜೇಂದ್ರ ಶರ್ಮಾ ಸಂಪರ್ಕಕ್ಕೆ ಬಂದಿದ್ದಾನೆ. ಬುಕಿಂಗ್‌ಗಾಗಿ ಮುಂಗಡ ಹಣವಾಗಿ ರೂ.499 ಪಾವತಿಸುವಂತೆ ಕೇಳಿದ್ದಾನೆ. ದೂರುದಾರ ಕೂಡ ಪೂರ್ವಾಪರ ವಿಚಾರಿಸದೆ ಹಣ ಹಾಕಿದ್ದಾನೆ. ಆ ಬಳಿಕ, ಒಂದು ವಾರದೊಳಗೆ ಓಲಾ ಸ್ಕೂಟರ್ ವಿತರಣೆ ಮಾಡಲಾಗುತ್ತದೆ. ಅದಕ್ಕಾಗಿ ರೂ.80,999 ನೀಡುವಂತೆ ಕೇಳಿದ್ದು, ಅದನ್ನು ಹಾಕಿರುವ ದೂರುದಾರ, ಹಣದ ಮೊತ್ತ ಪಾವತಿಸಿರುವ ಬಗ್ಗೆ ರಶೀದಿ ನೀಡುವಂತೆ ಕೋರಿದ್ದಾನೆ.

ನಂತರ, ಆರೋಪಿ ರಾಜೇಂದ್ರ, ಹೆಚ್ಚುವರಿಯಾಗಿ ರೂ.20,000 ಹಣಕ್ಕೆ ಬೇಡಿಕೆ ಇಟ್ಟಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಜಿಪಿ ಪಾರ್ಸಿಕ್ ಬ್ಯಾಂಕ್‌ನಲ್ಲಿ ಹಣ ವರ್ಗಾವಣೆ ಮಾಡಲಾಗಿದ್ದು, ದುಡ್ಡನ್ನು ಎಟಿಎಂನಿಂದ ವಿತ್ ಡ್ರಾ ಮಾಡಲಾಗಿದೆ ಎಂಬ ಮಾಹಿತಿ ಪೋಲೀಸರ ತನಿಖೆಯಿಂದ ಬಯಲಾಗಿದೆ. ಹಣದ ವಹಿವಾಟಿನ ಜಾಡು ಹಿಡಿದ ಪೊಲೀಸರು, ಬ್ಯಾಂಕ್ ಖಾತೆ ಮೂಲಕ ಆರೋಪಿ ಅಡ್ರೆಸ್ ಪತ್ತೆ ಮಾಡಿದ್ದಾರೆ.

ಆದರೆ, ವಂಚಕ ತಪ್ಪು ವಿಳಾಸ ನೀಡಿದ್ದಾನೆ ಎಂದು ಗೊತ್ತಾಗಿದ್ದು, ಕಡೆಗೆ ಮೊಬೈಲ್ ಸಿಗ್ನಲ್ ಮೂಲಕ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು, ನೀವು ಹೊಚ್ಚ ಹೊಸ ಓಲಾ ಸ್ಕೂಟರ್ ಖರೀದಿಬೇಕು ಅಂದುಕೊಂಡ್ರೆ, ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಬುಕಿಂಗ್ ಮಾಡಬಹುದು. ಇಲ್ಲವೇ, ಸಂಬಂಧಪಟ್ಟ ಡೀಲರ್ ಶಿಪ್ ಅನ್ನು ನೇರವಾಗಿ ಸಂಪರ್ಕಿಸಬಹುದು. ಅದು ಬಿಟ್ಟು ಈ ರೀತಿಯ ಜಾಹೀರಾತುಗಳಿಂದ ಮೋಸ ಹೋಗಬೇಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.

Article Published On: Thursday, May 11, 2023, 15:56 [IST]
English summary
Ola electric scooter fake ads fraudster arrested details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+