ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬಗ್ಗೆ ಗ್ರಾಹಕರಿಂದ ಬರುತ್ತಿರುವ ಕಂಪ್ಲೇಂಟ್‌ಗಳು ಒಂದೆರಡಲ್ಲ. ಇದು ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬಿಡುಗಡೆ ಆದಾಗಿನಿಂದಲೂ, ಒಂದಿಲ್ಲೊಂದು ರೀತಿಯಲ್ಲಿ ವಿಮರ್ಷೆಗಳನ್ನು ಎದುರಿಸುತ್ತಲೇ ಬಂದಿದೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಫೀಚರ್‌ಗಳು ಹೇರಳವಾಗಿದೆ ಹಾಗೆ ದೂರುಗಳು ಸಹ ಅಷ್ಟೇ ಇದೆ ಎಂಬುದು ಆಟೋಮೊಬೈಲ್‌ ಕ್ಷೇತ್ರದ ತಜ್ಙರ ಅಭಿಪ್ರಾಯ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಇಲ್ಲೊಬ್ಬ ಗ್ರಾಹಕ ತಾನು ಓಲಾ ಸ್ಕೂಟರ್‌ನಲ್ಲಿ ಒಂದೇ ಚಾರ್ಜ್‌‌ನಲ್ಲಿ ಬರೋಬ್ಬರಿ 303 ಕಿಲೋ ಮೀಟರ್‌ಗಳಷ್ಟು ದೂರ ಕ್ರಮಿಸಿದ್ದೇನೆ ಎಂದು ಹೇಳುವುದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಹೌದು ಓಲಾದ ಎಸ್‌1 ಪ್ರೋ ಎಂಬ ಸ್ಕೂಟರ್‌ನಲ್ಲಿ ಈತ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ಗಳನ್ನು ತಲುಪಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾನೆ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಓಲಾ ಸ್ಕೂಟರ್‌ನಲ್ಲಿ ಹಲವಾರು ಸಮಸ್ಯೆಗಳಿದೆ ಎಂದು ಈ ಹಿಂದೆ ಹಲವರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ತಮಿಳುನಾಡಿನಲ್ಲಿ ಒಬ್ಬ ವೈದ್ಯ ತನ್ನ ಓಲಾ ಸ್ಕೂಟರನ್ನು ಪೆಟ್ರೋಲ್‌ ಸುರಿದು ಸುಟ್ಟು ಹಾಕಿದ ಘಟನೆ ಕೆಲ ತಿಂಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. ಆದರೆ ಇದೀಗ ಈತನ ಈ ಪೋಸ್ಟ್‌ ಓಲಾ ಪ್ರೇಮಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಓಲಾ ಸ್ಕೂಟರ್‌ನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಓಲಾ ಸ್ಕೂಟರ್‌ಗಳ ಮಾರುಕಟ್ಟೆಯ ಪಾಲು ಗಣನೀಯವಾಗಿ ಇಳಿಯುತ್ತಿದೆ. ಜೂನ್‌ 2022 ರ ಅಂತ್ಯಕ್ಕೆ, ಓಲಾ ಎಲೆಕ್ಟ್ರಿಕ್‌ ನ ಮಾರುಕಟ್ಟೆಯ ಶೇರು, ಸುಮಾರು 14.70% ನಷ್ಟಿತ್ತು.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಜಿಗಾರ್‌ ಬಾರ್ದಾ ಎಂಬ ಮಾಲೀಕ ತಾನು ಓಲಾ ಎಸ್‌1 ಪ್ರೋ ಸ್ಕೂಟರ್‌ನಲ್ಲಿ ಒಂದೇ ಚಾರ್ಜ್‌ನಲ್ಲಿ ಸುಮಾರು 303 ಕಿಮೀ ಓಡಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾನೆ. ಈತ ಪೋಸ್ಟ್‌ ಹಾಕಿದ ಕೆಲವೇ ಸಮಯದಲ್ಲಿ ಮತ್ತೊಬ್ಬ ತಾವೂ ಸಹ ಓಲಾದಲ್ಲಿ 300 ಕಿಮೀ ದೂರಗಳಷ್ಟು ಒಂದೇ ಚಾರ್ಜ್‌ನಲ್ಲಿ ಓಡಿಸಿದ್ದೇವೆ ಎಂದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಇನ್ನು ಎಸ್‌1 ಪ್ರೋ ಸ್ಕೂಟರ್‌ನಲ್ಲಿ ಸುಮಾರು 3.97 kwh ಬ್ಯಾಟರಿ ಜೊತೆಗೆ ಬರತ್ತದೆ. ಜಿಗಾರ್‌ ಬಾರ್ದಾ ತಾನು ಗಂಟೆಗೆ ಸರಾಸರಿ ಸುಮಾರು 23 ಕಿಮೀ ವೇಗದಲ್ಲಿ ಸ್ಕೂಟರನ್ನು ಚಲಾಯಿಸಿದ್ದು, ಇದರಿಂದ ಸುಮಾರು 303 ಕಿಮೀ ನಷ್ಟು ದೂರ ಕ್ರಮಿಸಲು ಸಾಧ್ಯವಾಯಿತು , ತನ್ನ ಇಡೀ ಪ್ರಯಾಣದಲ್ಲಿ ಗಂಟೆಗೆ ಕೇವಲ 40 ಕಿಮೀ ಗಿಂತ ಹೆಚ್ಚು ವೇಗದಲ್ಲಿ ಬೈಕ್‌ ಓಡಿಸಿಲ್ಲ ಎಂದು ಹೇಳಿದ್ದಾನೆ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಇದರ ಜೊತೆಯಲ್ಲಿ ಮತ್ತೊಬ್ಬ ಓಲಾ ಎಸ್‌1 ಪ್ರೋ ಮಾಲೀಕ ತಾನೂ ಸಹ ತನ್ನ ಸ್ಕೂಟರ್‌ನಲ್ಲಿ ಸುಮಾರು 300 ಕಿಮೀನಷ್ಟು ದೂರ ಕೇವಲ ಒಂದೇ ಚಾರ್ಜ್‌ನಲ್ಲಿ ಪ್ರಯಾಣಿಸಿದ್ದೇನೆ ಎಂದು ಪೋಸ್ಟ್‌ ಹಾಕಿದ್ದಾನೆ. ಸತ್ಯೇಂದ್ರ ಯಾದವ್‌ ಎಂಬಾತ ಈ ಪೋಸ್ಟ್‌ ಹಾಕಿದ್ದು 5% ಚಾರ್ಜ್‌ ಬಾಕಿ ಇರುವಂತೆಯೇ ತನ್ನ ಓಲಾ ಎಸ್‌1 ಪ್ರೋನಲ್ಲಿ ಸುಮಾರು 300 ಕಿಮೀ ಕ್ರಮಿಸಿದ್ದೇನೆ ಎಂದು ಫೋಟೋ ಸಹಿತ ಹಂಚಿಕೊಂಡಿದ್ದಾನೆ. ಇದರಲ್ಲಿ ಆತ 20 ರಿಂದ 28 ಕಿಮೀ ವೇಗದಲ್ಲಿ ತನ್ನ ಬೈಕ್‌ನ್ನು ಓಡಿಸಿರುವುದು ಕಂಡು ಬರುತ್ತದೆ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ನಾವು ಈಗಾಗಲೇ ನೋಡಿರುವ ಪ್ರಕಾರ ಯಾರು ಓಲಾ ಸ್ಕೂಟರ್‌ನಲ್ಲಿ ಒಂದೇ ಚಾರ್ಜ್‌ನಲ್ಲಿ ಸುಮಾರು 200 ಕಿಮೀ ದೂರವನ್ನು ದಾಟುತ್ತಾರೋ, ಅವರಿಗೆ ಓಲಾ ಎಲೆಕ್ಟ್ರಿಕ್‌ ತನ್ನ ಎಸ್‌೧ ಪ್ರೋ ಸ್ಕೂಟರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈಗ 3೦೦ ಕಿಮೀ ದಾಟಿರುವ ಗ್ರಾಹಕರಿಗೆ ಓಲಾದ ಸಹ ಸಂಸ್ಥಾಪಕ ಭವಿಷ್‌ ಅಗರ್‌ವಾಲ್‌ ಏನು ಉಡುಗೊರೆ ನೀಡುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಒಂದು ಕಡೆ ಏಥರ್ ಮತ್ತು ಇನ್ನೊಂದು ಕಡೆ ಸಿಂಪಲ್‌ ಎನರ್ಜಿ ಕಂಪೆನಿಗಳಿಂದ, ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಮಾರುಕಟ್ಟೆಯಲ್ಲಿ ವಿಪರೀತವಾದ ಪೈಪೋಟಿ ಎದುರಾಗುತ್ತಿದೆ. ಈ ಎರಡೂ ಕಂಪನಿಗಳು ಓಲಾ ಸ್ಕೂಟರ್‌ಗಳಿಗೆ ಪೈಪೋಟಿಯೊಡ್ಡುವ ರೀತಿಯಲ್ಲಿ ವಾಹನಗಳನ್ನು ತಯಾರಿಸುತ್ತಿದೆ. ಹಾಗಾಗಿ ಓಲಾವು ಈ ಸ್ಪರ್ಧೆಗಳಿಂದ ತಪ್ಪಿಸಿಕೊಳ್ಳಲು ಅದಕ್ಕೆ ತಕ್ಕದಾದ ರೀತಿಯಲ್ಲಿ ವಾಹನಗಳನ್ನು ತಯಾರಿಸಬೇಕಾಗಿದೆ. ಹಾಗಾಗಿ ಓಲಾವು ತನ್ನ ಸ್ವಂತ ಬ್ಯಾಟರಿ ಸೆಲ್ ತಯಾರಿಸುವ ಯೋಜನೆ ಬಹಳ ಹಿಂದೆಯೇ ತಂದಿತ್ತು. ಆದರೆ ಓಲಾ ಎಸ್‌1 ಪ್ರೋ, ಎಟೆರ್ಗೋ ಸ್ಕೂಟರ್‌ನ ಪರಿಕಲ್ಪನೆಯಲ್ಲಿ ಸಿದ್ದಗೊಂಡಿದ್ದರಿಂದ ಅದರಲ್ಲಿ ಬಳಸಾದ ಬ್ಯಾಟರಿಯನ್ನೇ ಓಲಾವು ಸಹ ಬಳಸಿಕೊಂಡಿತ್ತು.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಆದರೆ ಇದೀಗ ಓಲಾ ಎಲೆಕ್ಟ್ರಿಕ್‌ ಕಾರು ಹೊರತರುವ ಆಲೋಚನೆಯಲ್ಲಿದ್ದು, ಇದಕ್ಕಾಗ ಓಲಾವು ತನ್ನ ಸ್ವಂತ ಬ್ಯಾಟರಿ ತಯಾರಿಕಾ ಘಟಕವನ್ನು ತೆರೆದಿದೆ. ಇತ್ತಿಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭವಿಷ್‌ ಅಗರ್ವಾಲ್‌ ಓಲಾದ ಬ್ಯಾಟರಿ ಸೆಲ್‌ ರಿವೀಲ್‌ ಮಾಡಿದ್ದರು. ಆದರೆ ಅಗರ್ವಾಲ್‌ ಈ ಬ್ಯಾಟರಿ ಸೆಲ್‌ ಕುರಿತಾಗಿ ಬೇರೆ ಯಾವುದೇ ವಿವರಗಳನ್ನು ನೀಡಿಲ್ಲ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಮೇಲ್ನೋಟದಿಂದ ಓಲಾವು, ವಿಶ್ವದ ಅತ್ಯಂತ ದೊಡ್ಡ ಎಲೆಕ್ಟ್ರಿಕ್ ಕಂಪನಿಯಾದ ಟೆಸ್ಲಾದ ಹೆಜ್ಜೆಗುರುತುಗಳನ್ನು ಹಿಂಬಾಲಿಸುವಂತೆ ಕಾಣುತ್ತಿದೆ. ಆರಂಭದಲ್ಲಿ ಟೆಸ್ಲಾವು ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಪ್ಯಾನಸಾನಿಕ್‌ ಕಂಪನಿಗೆ ವಹಿಸಿತ್ತು. ಆದರೆ ತದನಂತರದಲ್ಲಿ ಅದು ಸ್ವತಃ ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಆರಂಭಿಸಿತು.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 303 ಕಿಲೋಮೀಟರ್‌ ಸಂಚರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಓಲಾವು ಭಾರತದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್‌ ಮಾಡುವುದರ ಮೂಲಕ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರಗಳಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಸಿದ್ದಂತೂ ಸುಳ್ಳಲ್ಲ. ಆದರೆ ಡೆಲಿವೆರಿಯಾದ ವಾಹನಗಳನ್ನು ಬಳಸಿದ ಗ್ರಾಹಕರು ಅದರ ಬಗ್ಗೆ ಅಪಾರ ಪ್ರಮಾಣದಲ್ಲಿ ದೂರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವುದು ಸಹ ನಿಜ. ಸರ್ವೀಸ್‌ ಕುರಿತಾಗಿರಬಹುದು, ಅಥವಾ ಬೈಕ್‌ ನ ಚಾರ್ಜಿಂಗ್‌ ರೇಂಜ್‌ ಬಗ್ಗೆಯಾಗಿರಬಹುದು ಹೀಗೆ ಹಲವಾರು ಕುಂದು ಕೊರತೆಗಳನ್ನು ಸರಿಯಾದ ರೀತಿಯಲ್ಲಿ ಪರಿಹರಿಸುತ್ತಾ ಬಂದರೆ ಓಲಾವು ಎಲೆಕ್ಟ್ರಿಕ್‌ ವಾಹನಗಳ ವಿಭಾಗದಲ್ಲಿ ಹೆಮ್ಮರವಾಗಿ ಬೆಳೆಯಬಲ್ಲದು.

Most Read Articles

Kannada
Read more on ಓಲಾ ola
English summary
Ola electric scooter owner claims 303 km range on single charge
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X