ಮದುವೆ ಮನೆಯಲ್ಲಿ ಸ್ಪೀಕರ್‌ ಬದಲು ಓಲಾ ಸ್ಕೂಟರ್‌ನಲ್ಲಿ ಹಾಡು: ಖುಷಿಯಾಗಿ ವಿಡಿಯೋ ಶೇರ್‌ ಮಾಡಿದ ಓಲಾ ಸಿಇಒ

ಭಾರತದ ಅತೀ ದೊಡ್ಡ ಎಲೆಕ್ಟ್ರಿಕ್‌ ಉತ್ಪಾದಕಾ ಕಂಪನಿಯಾದ ಓಲಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾರುಕಟ್ಟೆಗೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೆ ಎಲ್ಲರ ಬಾಯಲ್ಲೂ ಓಲಾ ಕುರಿತಾಗಿ ದಿನಕ್ಕೆ ಒಂದು ಬಾರಿಯಾದರೂ ಕೇಳಿರುತ್ತೇವೆ. ಭರಪೂರ ಫೀಚರ್ಸ್‌ಗಳಿಂದ ಬಂದಿರುವ ಈ ಕಂಪನಿಯ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಎಲ್ಲರ ಅಚ್ಚುಮೆಚ್ಚು.

ಮೇಲೆ ತಿಳಿಸಿರುವಂತೆ ಹಲವಾರು ಫೀಚರ್ಸ್‌ಗಳಿಂದ ಕೂಡಿರುವ ಓಲಾ ಸ್ಕೂಟರ್‌ಗಳು ಸಾಕಷ್ಟು ಸದ್ದು ಮಾಡುತ್ತಿದೆ. ಇದರಲ್ಲಿ ಪ್ರಮುಖ ಫೀಚರ್‌ಗಳಲ್ಲಿ ಒಂದು ಇದರ ಆಡಿಯೋ ಪ್ಲೇಯರ್‌. ಹೌದು, ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಆಡಿಯೋ ಪ್ಲೇಯರ್‌ಗಳನ್ನು ಕಾಣಬಹುದಾಗಿದೆ. ಇದರ ಸಹಾಯದಿಂದ ವಾಹನ ಚಲಾಯಿಸುತ್ತಾ ಹಾಡುಗಳನ್ನು ಕೇಳಿಕೊಂಡು ವಾಹನವನ್ನು ಚಲಾಯಿಸಬಹುದಾಗಿದೆ. ಇದನ್ನು ಸಾಕಷ್ಟು ಮಂದಿ ನಾನಾ ರೀತಿ ಉಪಯೋಗಿಸುತ್ತಿದ್ದಾರೆ.

Ola S1 Pro Electric Scooter Used As Speakers For A Marriage Event

ಅದರಲ್ಲಿ ಮುಖ್ಯವಾಗಿ ಗೆಳೆಯರೆಲ್ಲಾ ಒಂದಾಗಿ ಸೇರಿಕೊಂಡಾಗ ಹಾಡನ್ನು ಪ್ಲೇ ಮಾಡುವುದು, ಹಾಗೇಯೇ ಒಬ್ಬರೇ ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಮೊಬೈಲ್‌ನಿಂದ ಹಾಡನ್ನು ಕನೆಕ್ಟ್‌ ಮಾಡುಕೊಂಡು ಹೋಗುವುದನ್ನು ನಾವು ಹಲವು ಕಡೆ ಗಮನಿಸಿದ್ದೇವೆ. ಇದೀಗ ಓಲಾ ಸ್ಕೂಟರ್‌ ಅನ್ನು ಮದುವೆಗೆ ಸೌಂಡ್‌ ಬಾಕ್ಸ್‌ ರೀತಿಯಲ್ಲಿ ಉಪಯೋಗಿಸಿಕೊಂಡು, ಸ್ಕೂಟರ್‌ನಲ್ಲಿ ಹಾಡನ್ನು ಹಾಕಿ ಕುಣಿಯುತ್ತಿರುವುದು ಭಾರೀ ಸದ್ದು ಮಾಡುತ್ತಿದೆ.

ಮದುವೆ ಮನೆಯೊಂದರಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸ್ಪೀಕರ್‌ಗಳ ಬದಲಾಗಿ ಓಲಾ ಎಸ್‌೧ ಸ್ಕೂಟರ್‌ ಅನ್ನು ಸ್ಟೇಜ್‌ ಮುಂದೆ ಇಟ್ಟು ಅದರಿಂದ ಹಾಡನ್ನು ಹಾಕಿಕೊಂಡು ಕುಣಿಯುತ್ತಿರುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಈ ವಿಡಿಯೋವನ್ನು ಖುದ್ದಾಗಿ ಓಲಾ ಎಲೆಕ್ಟ್ರಿಕ್‌ ಸಿಇಒ ಭವಿಷ್‌ ಅಗರ್ವಾಲ್‌ ಅವರೇ ತಮ್ಮ ಟ್ವಿಟ್ಟರ್/ಎಕ್ಸ್‌‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ಸಂಚಲನ ಮೂಡಿಸಿದೆ.

Ola S1 Pro Electric Scooter Used As Speakers For A Marriage Event

ಓಲಾ ಸ್ಕೂಟರ್‌ ಅನ್ನು ಕೇಲವ ಸಂಚಾರಕ್ಕಾಗಿ ಮಾತ್ರವಲ್ಲದೇ ಈ ರೀತಿಯ ಉಪಯೋಗಕ್ಕಾಗಿಯೂ ಸಹ ಬಳಸಬಹುದು ಎಂಬುದನ್ನು ಒಬ್ಬೊಬ್ಬರೇ ನಾನಾ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತೋರಿಸಿ ಕೊಡುತ್ತಿದ್ದಾರೆ ಎಂದು ಹಲವರು ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸಾಧಾರಣವಾಗಿ ಓಲಾ ಸ್ಕೂಟರ್‌ಗಳ ಸ್ಪೀಕರ್‌ಗಳ ಸೌಂಡ್‌ ಸಹ ಜೋರಾಗಿಯೇ ಇರುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆರಾಮಾಗಿಯೇ ನಡೆಸಬಹುದು ಎಂದಿದ್ದಾರೆ.

ಇನ್ನು ಘಟನೆಗೆ ಸಂಭಂಧಿಸಿದಂತೆ ಪೊಲೀಸರು ರಾತ್ರಿಯಾದ ಮೇಲೆ ಹೆಚ್ಚು ಸೌಂಡ್‌ ಇಟ್ಟು ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡದೇ ಇರುವ ಕಾರಣ, ದೊಡ್ಡ ಸ್ಪೀಕರ್‌ಗಳನ್ನು ಆಫ್‌ ಮಾಡಿ ಅದಕ್ಕೆ ಬದಲಾಗಿ ಈ ರಿತಿಯಾಗಿ ಓಲಾ ಸ್ಕೂಟರ್‌ಗಳನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ. ಏನೇ ಆದರೂ ಓಲಾ ಮಹಿಮೆಯನ್ನು ಜನ ಹಾಡಿ ಹೊಗಳುತ್ತಿದ್ದಾರೆ ಎಂದೇ ಹೇಳಬಹುದು.

ಇನ್ನು ಓಲಾ ಎಸ್‌ವನ್‌ ಪ್ರೋ ಸ್ಕೂಟರ್‌ಗಳ ಕುರಿತಾಗಿ ನೋಡುವುದಾದರೆ ಹೊಸ Ola S1 ಏರ್ ಎಲೆಕ್ಟ್ರಿಕ್ ಸ್ಕೂಟರ್ 4.5kW ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಅಲ್ಲದೆ, ಈ ಮಾದರಿಯು ಚಿಕ್ಕದಾದ 3kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಹೋಲಿಸಿದರೆ, Ola S1 Pro 8.5kW ಎಲೆಕ್ಟ್ರಿಕ್ ಮೋಟಾರ್ ಮತ್ತು ದೊಡ್ಡ 4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 17, 2024, 10:26 [IST]
English summary
Ola s1 pro electric scooter used as speakers for a marriage event
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+