Ford Mustang ಕಾರು ಚಾಲನೆ ವೇಳೆ ಕಾಣಿಸಿಕೊಂಡ ಚಿನ್ನದ ಹುಡುಗ ನೀರಜ್ ಚೋಪ್ರಾ
ಒಲಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. ಇದು ಒಲಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕವಾಗಿದೆ.

ಟೋಕಿಯೋದಲ್ಲಿ ನಡೆದ 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಚಿನ್ನದ ಪದಕ ಪಡೆಯುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದರು. 23ರ ಹರೆಯದ ನೀರಜ್ ಚೋಪ್ರಾ 87.58 ಮೀ ಜಾವೆಲಿನ್ ಎಸೆತದಿಂದ ವಿಶ್ವವನ್ನೇ ಬೆರಗುಗೊಳಿಸಿದರು. ಬರೊಬ್ಬರಿ 100 ವರ್ಷಗಳ ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕ ಇದಾಗಿದೆ. ಇವರಿಗೆ ಹಲವು ನಗದು ಬಹುಮಾನಗಳು ಮತ್ತು ವಿಶೇಷವಾಗಿ ಕಸ್ಟಮೈಸ್ ಮಾಡಿದ ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಸಹ ಉಡುಗೊರೆಯಾಗಿ ಪಡೆದುಕೊಂಡಿದ್ದರು.

ನೀರಜ್ ಚೋಪ್ರಾ ತನ್ನ ಗ್ಯಾರೇಜ್‌ಗೆ ಮತ್ತೊಂದು ಕಾರನ್ನು ಸೇರಿಸಿದ್ದಾರೆ. ಇದು ಸೆಕೆಂಡ್ ಹ್ಯಾಂಡ್ ಪೋರ್ಡ್ ಮಸ್ಟಾಂಗ್ ಕಾರ್ ಆಗಿದೆ. ಇತ್ತೀಚೆಗೆ ನೀಲಿ ಬಣ್ಣದ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಡ್ರೈವ್ ಮಾಡುವಾಗ ಕಾಣಿಸಿಕೊಂಡಿದ್ದಾರೆ.

ಫೋರ್ಡ್ ಭಾರತದಲ್ಲಿ ವಾಹನಗಳ ಮಾರಾಟವನ್ನು ನಿಲ್ಲಿಸಿದೆ. ಅಮೇರಿಕನ್ ತಯಾರಕರು ಸಂಪೂರ್ಣವಾಗಿ ಆಮದು ಮಾಡಿಕೊಂಡ ಕೆಲವು ಸಿಬಿಯು ಮಾದರಿಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಮರು-ಪ್ರವೇಶಿಸಲು ಯೋಜಿಸಿದ್ದರೂ, ಪ್ರಸ್ತುತ, ಅದು ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಕಾರನ್ನು ಮಾರಾಟ ಮಾಡುತ್ತಿಲ್ಲ.

ನೀರಜ್ ಚೋಪ್ರಾ ಅವರ ಮುಸ್ತಾಂಗ್ ಮಹಾರಾಷ್ಟ್ರದಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಅವರ ಮನೆ ಹರಿಯಾಣದಲ್ಲಿದೆ. ಈ ವಾಹನವು ಹರಿಯಾಣದಲ್ಲಿ ಕಾಣಿಸಿಕೊಂಡಿದೆ. ಇದು ಬಳಸಿದ ಕಾರು ಎಂದು ಸೂಚಿಸಿದೆ ಆದರೆ ಅದೇನೇ ಇದ್ದರೂ, ನೀವು ಬಳಸಿದದನ್ನು ಖರೀದಿಸದಿದ್ದರೆ ಅಥವಾ ಬೇರೆ ದೇಶದಿಂದ ಆಮದು ಮಾಡಿಕೊಳ್ಳಲು ಹೆಚ್ಚು ಹಣವನ್ನು ಖರ್ಚು ಮಾಡದಿದ್ದರೆ ನೀವು ಭಾರತದಲ್ಲಿ ಮುಸ್ತಾಂಗ್ ಅನ್ನು ಹೊಂದಲು ಸಾಧ್ಯವಿಲ್ಲ.

ಫೋರ್ಡ್ ಕಂಪನಿಯು ಮಸ್ಟಾಂಗ್ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಗೊಳಿಸಿದ್ದರು. ಆದರೆ ನಂತರದ ವರ್ಷಗಳಲ್ಲಿ ಫೋರ್ಡ್ ಕಂಪನಿಯು ಮಸ್ಟಾಂಗ್ ಕಾರನ್ನು ಭಾರತದಲ್ಲಿ ಸ್ಥಗಿತಗೊಳಿಸಿತ್ತು. ಹೊಸ ಫೋರ್ಡ್ ಮಸ್ಟಾಂಗ್ ಕಾರು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಹೊಸ ಮಸ್ಟಾಂಗ್ ಕಾರು ಸಣ್ಣ ಮಟ್ಟದ ನವೀಕರಸಿದ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಹಳೆಯ ಮಾದರಿಗಿಂತ ಹೊಸ ಮಾದರಿಯು ಸ್ಲೀಕರ್ ಆಗಿರಲಿದೆ. ಹೊಸ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್‍ಗಳನ್ನು ಅಳವಡಿಸಲಾಗಿದೆ. ಮರು ವಿನ್ಯಾಸಗೊಳಿಸಿದ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ.

ಇನ್ನು ಹೊಸ ಫೋರ್ಡ್ ಮಸ್ಟಾಂಗ್ ಕಾರಿನ ಇಂಟಿರಿಯರ್‍ನಲ್ಲಿ 12 ಇಂಚಿನ ಎಲ್‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕ್ಯಾಬಿನ್ ಸುತ್ತಲೂ ಸ್ಪಾಟ್ ಟಚ್ ಮ್ಯಾಟಿರಿಯಲ್ ಅನ್ನು ಹೊಂದಿದ್ದು, ವಿಶೇಷವಾಗಿ ಸೆಂಟರ್ ಕನ್ಸೋಲ್ ಮತ್ತು ಡೋರ್‍ಗಳಲ್ಲಿ ಹೊಂದಿದೆ. ಇದರೊಂದಿಗೆ ಈ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಲ್‍ಇಡಿ ಲೈಟಿಂಗ್, ಫ್ಲ್ಯಾಟ್ ಬಾಂಟಮ್ ಸ್ಟೀಯರಿಂಗ್ ವ್ಹೀಲ್ ಹಾಗೂ ಇತರ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‍ಗಳನ್ನು ಒಳಗೊಂಡಿದೆ.

ಮಸ್ಟಾಂಗ್ ಫೇಸ್‌ಲಿಫ್ಟ್ ಕಾರಿನಲ್ಲಿ 5.0-ಲೀಟರ್, ವಿ8 ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 453 ಬಿಹೆಚ್‍ಪಿ ಪವರ್ ಮತ್ತು 569 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗುವುದು.

ಇನ್ನು ಟಾಪ್-ಸ್ಪೆಕ್ ಮಾದರಿಯಲ್ಲಿ 525 ಬಿಹೆಚ್‌ಪಿ ಉತ್ಪಾದಿಸುವ ಜಿಟಿ350 ವಿ8 ಅನ್ನು ಹೊಂದಿದೆ. ಈ ಹೊಸ ಮುಸ್ಟಾಂಗ್ ಬ್ಲೂ, ಆರೇಂಜ್ ಮತ್ತು ರೆಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಫೋರ್ಡ್ ಮಸ್ಟಾಂಗ್ ವಿಶ್ವದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಇನ್ನು ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಬಗ್ಗೆ ಹೇಳುವುದಾದರೆ, ಇವರು 1997ರ ಡಿಸೆಂಬರ್ 24 ರಂದು ಜನಿಸಿದರು. ಇನ್ನು ತಮ್ಮ ಕಲಿಕೆಯನ್ನು ಚಂಡೀಗಡದಲ್ಲಿ ಪೂರೈಸಿದರು. ಇವರು 2016ರ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿ, ಸುಬೇದಾರ್ ರ್ಯಾಂಕ್ನೊಂದಿಗೆ ಭಾರತೀಯ ಸೇನೆ ಸೇರಿಕೊಂಡರು. ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಬೈಕ್ ಕ್ರೇಜ್ ಅನ್ನು ಹೊಂದಿದಾರೆ. ಅವರು ಇನ್‌ಸ್ಟಾಗ್ರಾಮ್ ನಲ್ಲಿ ಬಜಾಜ್ ಪಲ್ಸರ್ 220 ಎಫ್ ಸೇರಿದಂತೆ ಹಲವಾರು ಬೈಕ್ ಗಳ ಜೊತೆ ಚಿತ್ರಗಳನ್ನು ನೋಡಬಹುದು.

ನೀರಜ್ ಚೋಪ್ರಾ ಅವರ ಬಳಿ ಐಷಾರಾಮಿ 2019ರ ಹಾರ್ಲೆ-ಡೇವಿಡ್ಸನ್ 1200 ರೋಡ್‌ಸ್ಟರ್ ಬೈಕ್ ಅನ್ನು ಹೊಂದಿದ್ದಾರೆ. ಅದೇ ವರ್ಷ ಏಷ್ಯನ್ ಗೇಮ್ಸ್ ಗೆದ್ದ ನಂತರ ಆತ ಈ ಬೈಕನ್ನು ಖರೀದಿಸಿದ್ದಾರೆ. ಈ ಬೈಕ್ ಹರ್ಯಾಣ ರಾಜ್ಯದ ಖಾಂಡ್ರಾ ಗ್ರಾಮದ ಮನೆಯಲ್ಲಿ ಇರಿಸಿದ್ದಾರೆ. ಸದ್ಯಕ್ಕೆ ಅವರ ಬಳಿ ಬಜಾಜ್ ಪಲ್ಸರ್ 220 ಎಫ್ ಮತ್ತು ಹಾರ್ಲೆ-ಡೇವಿಡ್ಸನ್ 1200 ರೋಡ್‌ಸ್ಟರ್ ಬೈಕ್ ಅನ್ನು ಹೊಂದಿದ್ದಾರೆ. ಬೈಕ್ ಕ್ರೇಜ್ ಹೊಂದಿರುವ ಇವರು ಮುಂದಿನ ದಿನಗಳಲ್ಲಿ ಯಾವ ಬೈಕ್ ಅನ್ನು ಖರೀದಿಸುತ್ತಾರೆ ಎಂಬುದನ್ನು ನೋಡಬೇಕು.

ಮಹೀಂದ್ರಾ ಕಂಪನಿಯು ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್‌ಯುವಿ700 ಸ್ಪೆಷಲ್ ಎಡಿಷನ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ಇತ್ತೀಚೆಗೆ ನೀಡಿದ್ದರು. ನೀರಜ್ ಚೋಪ್ರಾ ಅವರಿಗೆ ನೀಡಲಾದ ಎಕ್ಸ್‌ಯುವಿ700 ಸ್ಪೆಷಲ್ ಎಡಿಷನ್ ಕಾರು ಕೆಲವು ಹೊಸ ವಿಶಿಷ್ಟ ವಿನ್ಯಾಸಗಳೊಂದಿಗೆ ಅಭಿವೃದ್ದಿಪಡಿಸಲಾಗಿದೆ. ಮಹೀಂದ್ರಾ ಲೋಗೋ ಸ್ಯಾಟಿನ್ ಚಿನ್ನದ ಲೇಪನವನ್ನು (Satin Gold plating) ಹೊಂದಿರುವ ಜಾವೆಲಿನ್ ಗೋಲ್ಡ್ ಸ್ಪೆಷಲ್ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದೆ.


Click it and Unblock the Notifications