'ಒಂದು ದಿನ ವೇಗ ನನ್ನ ಕೊಂದರೆ ಅಳದಿರಿ, ಯಾಕೆಂದರೆ ನಾನು ನಗುತ್ತಿರುವೆನು' - ಪಾಲ್ ವಾಕರ್
'ಒಂದು ದಿನ ವೇಗ ನನ್ನ ಕೊಂದರೆ ಅಳದಿರಿ, ಯಾಕೆಂದರೆ ನಾನು ನಗುತ್ತಿರುವೆನು' ಹೌದು, ಕಾರು ಅಪಘಾತವೊಂದರಲ್ಲೇ ತಮ್ಮ ಜೀವ ಕಳೆದುಕೊಂಡಿರುವ ಹಾಲಿವುಡ್‌ನ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' ಖ್ಯಾತಿಯ ನಟ ಪಾಲ್ ವಾಕರ್ ಹಿಂದೊಮ್ಮೆ ನಡೆಸಿರುವ ಉಲ್ಲೇಖವಿದು.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
'ಹಾವಡಿಗನಿಗೆ ಹಾವು ಕಚ್ಚಿ ಸಾವು' ಎಂಬ ನಂಬಿಕೆಯಂತೆ ವೇಗತೆಯ ತುತ್ತ ತುದಿಯಲ್ಲಿ ಯಶಸ್ಸನ್ನು ಕೊಂಡಾಡಿದ್ದ ಅಮೆರಿಕದ ಪಾಲ್ ವಾಕರ್ (40) ಅಂತಿಮವಾಗಿ ಅದೇ ವೇಗಕ್ಕೆ ಶರಣಾಗಿದ್ದಾರೆ.

ತಮ್ಮದೇ ಸಹಾಯಾರ್ಥ ಸಂಸ್ಥೆ 'ರೀಚ್ ಔಟ್ ವರ್ಲ್ಡ್ ವೈಡ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಸ್ ಏಂಜಲೀಸ್‌ನಲ್ಲಿ ಕಾರೊಂದರಲ್ಲಿ ಸ್ನೇಹಿತನ ಜತೆ ಪಾಲ್ ವಾಕರ್ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿತ್ತು. ತಕ್ಷಣವೇ ಕಾರು ಬೆಂಕಿಗಾಹುತಿಯಾಗಿತ್ತು.

ಕೆಂಪು ಬಣ್ಣದ ಪೊರ್ಶೆ ಕರೆರಾ ಜಿಟಿ ಕಾರು ಅಪಘಾತಕ್ಕೀಡಾಗಿತ್ತು. ಪಾಲ್ ವಾಕರ್ ಸಾವಿನ ಸುದ್ದಿ ಜಗತ್ತಿನೆಲ್ಲೆಡೆಯ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಹಾಲಿವುಡ್ ಸೇರಿದಂತೆ ಪ್ರಮುಖ ಗಣ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಅಪಘಾತ ವೇಳೆ ಪಾಲ್ ವಾಕರ್ ಸ್ನೇಹಿತ ಕಾರು ಚಾಲನೆ ಮಾಡುತ್ತಿದ್ದರು. ಹಾಗೊಂದು ವೇಳೆ ಸಿನೆಮಾದ ಸಾಹಸ ದೃಶ್ಯಗಳಲ್ಲೂ ಸ್ಟಂಟ್ ಡ್ರೈವರುಗಳನ್ನು ಬಳಸದ ವಾಕರ್ ಇಲ್ಲಿಯೂ ಚಾಲಕರಾಗಿರುತ್ತಿದ್ದರೆ ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆಯುವ ಬದಲು ಢ್ರಿಫ್ಟ್ (ಸುತ್ತುವರಿ) ಮಾಡುತ್ತಿದ್ದರು ಎನ್ನಲಾಗಿದೆ. ಈ ನಂಬಿಕೆ ವಾಕರ್ ಚಾಲನಾ ಕೌಶಲ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಅಂದ ಹಾಗೆ ವಾಕರ್ ಅಭಿನಯದ ಫ್ಯಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರ ಸರಪಣಿಯ ಏಳನೇ ಚಿತ್ರ ಇನ್ನಷ್ಟೇ ತೆರೆ (2014 ಜುಲೈ) ಕಾಣಬೇಕಾಗಿದೆ. ಅಲ್ಲದೆ ಈ ತಿಂಗಳ ಅಂತ್ಯಕ್ಕೆ 'ಹವರ್ಸ್' ತೆರೆಗಪ್ಪಲಿಸಲಿದೆ

1999ನೇ ಇಸವಿಯಲ್ಲಿ ತೆರೆಕಂಡ 'ವಾರ್ಸಿಟಿ ಬ್ಲೂಸ್' ಚಿತ್ರದ ಮೂಲಕ ಜನಪ್ರಿಯಗೊಂಡಿದ್ದ ವಾಕರ್ ಅವರು '8 ಬಿಲೋ', 'ಇಂಟು ದಿ ಬ್ಲೂ', 'ಶಿಈಸ್ ಆಲ್ ದ್ಯಾಟ್' ಮತ್ತು 'ಟೇಕರ್ಸ್' ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎರಡರ ಹರೆಯಲ್ಲೇ ಮಾಡೆಲಿಂಗ್‌ಗೆ ಪಾದರ್ಪಣೆ ಮಾಡಿಕೊಂಡಿದ್ದ ವಾಕರ್, ಸ್ಪೀಡ್ ಕಾರುಗಳ ಬಗ್ಗೆ ಅತೀವ ಕ್ರೇಜ್ ಹೊಂದಿದ್ದರು. ಇದೀಗ ಕಾರು ಅಪಘಾತದಲ್ಲೇ ಸಾವನ್ನಪ್ಪುವಂತಾಗಿದೆ.

ಉಲ್ಲೇಖ
'ವ್ಯಕ್ತಿಯೊಬ್ಬ ಮರಣಕ್ಕೆ ಶರಣಾದಾಗ ಮಾತ್ರ ಆ ವ್ಯಕ್ತಿಯ ಮೌಲ್ಯ ಅನುಭವವಾಗುತ್ತದೆ'- ಪಾಲ್ ವಾಕರ್

ಪಾಲ್ ವಾಕರ್ ಜೀವನ ದೃಷ್ಟಿ:
'ನಿಮ್ಮ ಕೆಲಸವನ್ನು ಆನಂದಿಸಲು ಸಾಧ್ಯವಾಗದಿದ್ದಲ್ಲಿ ಅದನ್ನು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ'

'ಒಂದು ದಿನ ವೇಗ ನನ್ನ ಕೊಂದರೆ ಅಳದಿರಿ, ಯಾಕೆಂದರೆ ನಾನು ನಗುತ್ತಿರುವೆನು' - ಪಾಲ್ ವಾಕರ್


Click it and Unblock the Notifications








