Just In
Don't Miss!
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- News
ಸಮೀಕ್ಷೆ: ಅಸ್ಸಾಂನಲ್ಲಿ ಕಾಂಗ್ರೆಸ್ ಮಣಿಸಿ ಬಿಜೆಪಿ ಅಧಿಕಾರಕ್ಕೆ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಕಿಗಾಹುತಿಯಾದ ವಿಶ್ವದ ಅತಿ ದೊಡ್ಡ ಬೈಕ್ ಮ್ಯೂಸಿಯಂ
ವಿಶ್ವದಲ್ಲಿಯೇ ಅತಿ ಹೆಚ್ಚು ಬೈಕುಗಳನ್ನು ಹೊಂದಿದ್ದ ಮ್ಯೂಸಿಯಂಗೆ ಬೆಂಕಿ ಬಿದ್ದಿದೆ. ಈ ಸುದ್ದಿಯು ವಿಶ್ವಾದ್ಯಂತವಿರುವ ಬೈಕ್ ಪ್ರಿಯರಿಗೆ ಆಘಾತವನ್ನುಂಟು ಮಾಡಿದೆ. ಆಸ್ಟ್ರಿಯಾದ ಟಿಮ್ಮೆಲ್ಸ್‌ಜಾಕ್‌ನಲ್ಲಿರುವ ಟಾಪ್ ಮೌಂಟೇನ್ ಕ್ರಾಸ್‌ಪಾಯಿಂಟ್ ಮ್ಯೂಸಿಯಂನಲ್ಲಿ ಈ ದುರಂತ ಸಂಭವಿಸಿದೆ.

ಮಾಹಿತಿಗಳ ಪ್ರಕಾರ, ಈ ಮ್ಯೂಸಿಯಂನಲ್ಲಿ ದುರ್ಘಟನೆ ಸಂಭವಿಸಿದಾಗ ವಿಶ್ವದ 100ಕ್ಕೂ ಹೆಚ್ಚು ಕಂಪನಿಗಳ ಸುಮಾರು 230 ಬೈಕುಗಳಿದ್ದವು. ಈ ಘಟನೆಯು ಮೋಟಾರ್‌ಸೈಕಲ್ ಮ್ಯೂಸಿಯಂನ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ದುರಂತ ಎಂದು ಹೇಳಲಾಗಿದೆ.

ಬೈಕುಗಳ ಜೊತೆಗೆ ಕೆಲವು ಐಷಾರಾಮಿ ಕಾರುಗಳನ್ನು ಸಹ ಈ ಮ್ಯೂಸಿಯಂನಲ್ಲಿ ನಿಲ್ಲಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಕೋವಿಡ್ -19 ಹಿನ್ನೆಲೆಯಲ್ಲಿ ಈ ಬೈಕ್ ಮ್ಯೂಸಿಯಂ ಅನ್ನು ಕೆಲವು ತಿಂಗಳುಗಳ ಹಿಂದೆ ಮುಚ್ಚಲಾಗಿತ್ತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಮ್ಯೂಸಿಯಂ ಅನ್ನು ಜನವರಿ 24ರಂದು ಪ್ರದರ್ಶನಕ್ಕಾಗಿ ಸಿದ್ಧಪಡಿಸಲಾಗುತ್ತಿತ್ತು. ಮಾಧ್ಯಮ ವರದಿಗಳ ಪ್ರಕಾರ ಈ ಮ್ಯೂಸಿಯಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಲ್ಲಿಯೇ ಮಲಗಿದ್ದ ಉದ್ಯೋಗಿಯೊಬ್ಬರು ಬೆಂಕಿಯ ಎಚ್ಚರಿಕೆಯ ಶಬ್ದವನ್ನು ಕೇಳಿ ಎಚ್ಚರಗೊಂಡು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.

ಆದರೆ ಉಸಿರುಗಟ್ಟಿದ ಕಾರಣ ಮ್ಯೂಸಿಯಂನಿಂದ ಹೊರ ಹೋಗಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಮ್ಯೂಸಿಯಂ ಬೆಂಕಿಯಿಂದ ಆವೃತವಾಗಿರುವುದನ್ನು ಕಾಣಬಹುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಆಸ್ಟ್ರಿಯಾದ ಟಿಮ್ಮೆಲ್ಸ್‌ಜಾಕ್ ಪಾಸ್‌ನಲ್ಲಿರುವ ವಿಶ್ವದ ದೊಡ್ಡ ಮೋಟಾರ್‌ಸೈಕಲ್ ಮ್ಯೂಸಿಯಂ ಅನ್ನು 2016ರಲ್ಲಿ ತೆರೆಯಲಾಯಿತು. ಅಂದ ಹಾಗೆ ಟಿಮ್ಮೆಲ್ಸ್‌ಜಾಕ್ ಪಾಸ್ ಆಸ್ಟ್ರಿಯಾ ಹಾಗೂ ಇಟಲಿಯ ಪರ್ವತ ಮಾರ್ಗಗಳನ್ನು ಪರಸ್ಪರ ಸಂಪರ್ಕಿಸುತ್ತದೆ.
ಈ ಮ್ಯೂಸಿಯಂಗೆ ಬೆಂಕಿ ಬೀಳಲು ಏನು ಕಾರಣ ಎಂಬ ಬಗ್ಗೆ ನಿಖರವಾದ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಈ ಬಗ್ಗೆ ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೋಟಾರ್‌ಸೈಕಲ್ ಮ್ಯೂಸಿಯಂನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2003ರಲ್ಲಿ ಬ್ರಿಟಿಷ್ ನ್ಯಾಷನಲ್ ಮೋಟಾರ್‌ಸೈಕಲ್ ಮ್ಯೂಸಿಯಂನಲ್ಲಿ 380 ಪ್ರೀಮಿಯಂ ಮೋಟರ್‌ಸೈಕಲ್‌ಗಳು ಬೆಂಕಿಗೆ ಆಹುತಿಯಾಗಿದ್ದವು.