ಪಾಕಿಸ್ತಾನದ ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ: 1 ಲೀಟರ್‌ಗೆ 272 ರೂಪಾಯಿ

ನೆರೆಯ ಪಾಕಿಸ್ತಾನವು ಈಗಾಗಲೇ ವಿದ್ಯುತ್ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಇದೀಗ, ಪೆಟೋಲ್ ಹಾಗೂ ಡೀಸೆಲ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಲ್ಲಿನ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬುಧವಾರ ರಾತ್ರಿ ಹಿಂದಿನ ದಾಖಲೆಗಳನ್ನೆಲ್ಲ ಮುರಿಯುವಷ್ಟು ಮಟ್ಟಿಗೆ ಇಂಧನ ಬೆಲೆ ಹೆಚ್ಚಳವಾಗಿದ್ದು, ನೂತನ ದರಗಳು ಗುರುವಾರದಿಂದಲೇ ಜಾರಿಗೆ ಬಂದಿದೆ.

ಪಾಕಿಸ್ಥಾನ ಸರ್ಕಾರ ಮಿನಿ ಬಜೆಟ್ ಮಂಡನೆ ಮಾಡಿದ ಬಳಿಕ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದೆ. ಅಲ್ಲದೆ, ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯವಂತೂ ದಿನದಿಂದ ದಿನಕ್ಕೆ ಕುಸಿತವನ್ನು ದಾಖಲಿಸುತ್ತಿದೆ. ಒಂದು ಲೀಟರ್ ಪೆಟ್ರೋಲ್ ದರ ರೂ. 22.20 ಏರಿಕೆಯಾಗಿ ಬರೋಬ್ಬರಿ ರೂ. 272 (ಪಾಕಿಸ್ತಾನ ರೂಪಾಯಿ) ತಲುಪಿದೆ. ಇದು ಅಲ್ಲಿನ ವಾಹನ ಸವಾರರಿಗೆ ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪಾಕಿಸ್ತಾನದ ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ದರ: ಜನ ಸಾಮಾನ್ಯ ತತ್ತರ!

ಅಲ್ಲದೆ, ಡಿಸೇಲ್ ಹಾಗೂ ಸೀಮೆಎಣ್ಣಿ ದರಗಳು ಕೂಡ ಗರಿಷ್ಠ ಮಟ್ಟದಲ್ಲಿ ಹೆಚ್ಚಳವಾಗಿದೆ. ಒಂದು ಲೀಟರ್ ಹೈ-ಸ್ವೀಡ್ ಡಿಸೇಲ್ ದರ ರೂ.17.20 ಹೆಚ್ಚಳವಾಗುವ ಮೂಲಕ ರೂ.280ಕ್ಕೆ ತಲುಪಿದೆ. ಒಂದು ಲೀಟರ್ ಲೈಟ್ ಡಿಸೇಲ್ ದರ ರೂ.9.68 ಹೆಚ್ಚಳವಾಗುವ ಮೂಲಕ ರೂ.196.68 ಆಗಿದೆ. ಜೊತೆಗೆ ಒಂದು ಲೀಟರ್ ಸೀಮೆ ಎಣ್ಣೆ ದರ ರೂ.12.90 ಅಧಿಕವಾಗುವ ಮೂಲಕ ರೂ. 202.73ಕ್ಕೆ ತಲುಪಿದ್ದು, ಮುಂಬರುವ ದಿನಗಳಲ್ಲಿ ಈ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಪಾಕಿಸ್ತಾನವು ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿದ್ದು, ಅನೇಕ ಪೆಟ್ರೋಲ್ ಬಂಕ್‌ಗಳ ಬಾಗಿಲು ಮುಚ್ಚಲಾಗಿದೆ. ಜೊತೆಗೆ ಸಿಎನ್‌ಜಿ ಇಂಧನಕ್ಕೂ ಹಾಹಾಕಾರ ಎದುರಾಗಿದ್ದು, ಅದು ಕೂಡ ಲಭ್ಯವಿಲ್ಲ. ಈ ಸಮಸ್ಯೆ ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿದೆ. ಇದೀಗ, ಬೆಲೆ ಹೆಚ್ಚಳ ಮಾಡಿರುವುದರಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಇಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅಲ್ಲಿನ ಜನರ ಪರಿಸ್ಥಿತಿ ಹೇಳತೀರದಂತಿದೆ.

ತನ್ನ ಆರ್ಥಿಕತೆಯನ್ನು ಸಹಬದಿಗೆ ತರಲು ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನೀಡುವ ತುರ್ತು ಸಾಲದ ಅಗತ್ಯವಿದೆ. ಅದಕ್ಕಾಗಿ ದೇಶದ ಜನರನ್ನು ಬಲಿಪಶು ಮಾಡುತ್ತಿದೆ. ಐಎಂಎಫ್‌ 1 ಶತಕೋಟಿ ಡಾಲರ್‌ ತುರ್ತು ಸಾಲ ನೀಡಬೇಕಾದರೆ, ವೆಚ್ಚ ಕಡಿತ ಹಾಗೂ ವಿವಿಧ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವಂತೆ ಷರತ್ತು ವಿಧಿಸಿತ್ತು. ಅದಕ್ಕಾಗಿ ಮಿನಿ ಬಜೆಟ್ ಮಂಡನೆ ಮಾಡಿದೆ. ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ರೂ.17000 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದೆ.

ಪಾಕಿಸ್ತಾನದ ಆರ್ಥಿಕತೆ ಈ ಮಟ್ಟಿಗೆ ಕುಸಿತವಾಗಲು ಹಲವು ಕಾರಣಗಳಿವೆ. ದೇಶದ ಆದಾಯ ಸೃಷ್ಟಿಗೆ ಯಾವುದೇ ಕ್ರಮವನ್ನು ಕೈಗೊಳ್ಳದೇ, ಮಿತ್ರ ರಾಷ್ಟ್ರಗಳಿಂದ ಬಂದ ಹಣಕಾಸಿನ ನೆರವಿನಿಂದಲೇ ಈ ದೇಶದ ಬಹುತೇಕ ಸರ್ಕಾರಗಳು ಆಡಳಿತ ನಡೆಸಿವೆ. ಅಲ್ಲದೆ, ವಿದ್ಯುತ್ ಪಾವತಿ ಮೇಲೆ ಸಬ್ಸಿಡಿ, ಕಡಿಮೆ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಹಾಗೂ ದೊಡ್ಡ ಮಟ್ಟದ ಪ್ರವಾಹಗಳು ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡಿವೆ. ಇವುಗಳಿಂದ ಪಾಕಿಸ್ತಾನದ ಆರ್ಥಿಕತೆ ಹಳ್ಳ ಹಿಡಿದಿದೆ.

ಸದ್ಯ, ಪೆಟ್ರೋಲ್, ಡಿಸೇಲ್ ಸೇರಿದಂತೆ ಇಂಧನ ದರಗಳು ಪಾಕಿಸ್ತಾನದ ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಆ ದೇಶದ ಜನರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಅಲ್ಲದೆ, ಇಂಧನದ ಕೊರತೆಯಿಂದ ಎಷ್ಟೋ ಪೆಟ್ರೋಲ್ ಬಂಕ್ ಗಳ ಬಾಗಿಲು ಬಂದ್ ಆಗಿದ್ದು, ವಿದುತ್ಯ್ ಅಭಾವದಿಂದಲ್ಲೂ ದೇಶ ಕತ್ತಲಲ್ಲಿ ಮುಳುಗಿದೆ. ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಇಲ್ಲಿನ ಸರ್ಕಾರಕ್ಕೆ ತುರ್ತಾಗಿ ಹಣಕಾಸಿನ ನೆರವು ಅಗತ್ಯವಿದ್ದು, ಅದಕ್ಕಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮನಹೋಲಿಸಲು ಭಾರೀ ಪ್ರಮಾಣದಲ್ಲಿ ತೆರಿಗೆ ಏರಲು ಹೊರಟಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, February 17, 2023, 12:50 [IST]
English summary
Pakistan hikes petrol price details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+