ಬಳಸಿದ ಕಾರನ್ನು ಖರೀದಿಸಿ ಫುಲ್ ಟ್ರೋಲ್ ಆದ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಾಮ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಬಾಬರ್ ಅಜಾಮ್ ಇತ್ತೀಚೆಗೆ ತಮ್ಮ ತವರು ಲಾಹೋರ್‌ನಲ್ಲಿ ನೇರಳೆ ಬಣ್ಣದ ಲ್ಯಾಂಬೋರ್ಗಿನಿ ಅವೆಂಟಡಾರ್ ಕಾರನ್ನು ಖರೀದಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಸೋಷಿಯಲ್ ಮೀಡಿಯಾದಲ್ಲಿ ಬಾಬರ್ ಅಜಾಮ್ ಅವೆಂಟಡಾರ್ ಜೊತೆಗೆ ಪೋಸ್ ನೀಡುವ ಚಿತ್ರಗಳು ವೈರಲ್ ಆಗಿವೆ.

ಟಾಪ್ ಆರ್ಡರ್ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಬಾಬರ್ ಅಜಾಮ್ ಅವರ ಹೊಸ ಸ್ಪೋರ್ಟ್ಸ್ ಕಾರ್‌ಗೆ ಕೆಲವರು ಅಭಿನಂದಿಸುತ್ತಿದ್ದರೇ, ಹಲವರು ಅವೆಂಟಡಾರ್ ಮತ್ತು ಜನಪ್ರಿಯ ಬಾಲಿವುಡ್ ಚಲನಚಿತ್ರವಾದ "ಟಾರ್ಜನ್: ದಿ ವಂಡರ್ ಕಾರ್" ನಡುವೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕಿಂತ ಭಾರತದಲ್ಲಿ ಇದು ಹೆಚ್ಚು ಟ್ರೋಲ್ ಆಗುತ್ತಿದೆ.

pakistani-cricketer-babar-azam-buys-lamborghini-aventador

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿ, ಬಾಬರ್ ಅಜಾಮ್ ನೇರಳೆ ಬಣ್ಣದ ಲ್ಯಾಂಬೋರ್ಘಿನಿ ಅವೆಂಟಡಾರ್‌ನೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಬಾಬರ್ ತನ್ನ ಕಾರು ಸಂಗ್ರಹಕ್ಕೆ Aventador ನ ಯಾವ ಆವೃತ್ತಿಯನ್ನು ಸೇರಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಇದನ್ನು ಬಳಸಿದ ಮಾರುಕಟ್ಟೆಯಿಂದ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಅವರ ಹೊಸ ಸೆಕೆಂಡ್ ಹ್ಯಾಂಡ್ ಕಾರಿನೊಂದಿಗಿನ ಚಿತ್ರವು ವೈರಲ್ ಆದ ನಂತರ, ಹಲವಾರು ಇದನ್ನು ಹಳೆಯ ಬಾಲಿವುಡ್ ಚಿತ್ರಕ್ಕಾಗಿ ನಿರ್ಮಿಸಲಾದ ಸ್ಪೋರ್ಟ್ಸ್ ಕಾರ್ "ಟಾರ್ಜನ್" ನೊಂದಿಗೆ ಹೋಲಿಸುವುದನ್ನು ಪ್ರಾರಂಭಿಸಿದ್ದಾರೆ. ಏಕೆಂದರೆ ಇಂತಹ ಬಣ್ಣಗಳು ಸಾಮಾನ್ಯ ಕಾರುಗಳಲ್ಲಿ ನಾವು ಹೆಚ್ಚಾಗಿ ನೊಡುವುದಿಲ್ಲ. ಹಾಗೆಯೇ ದುಬಾರಿ ಕಾರುಗಳಲ್ಲಿ ವಿರಳವಾಗಿ ಬಳಸುತ್ತಾರೆ.

pakistani-cricketer-babar-azam-buys-lamborghini-aventador

ಇನ್ನು ಟಾರ್ಜನ್ ಸಿನಿಮಾದಲ್ಲಿನ ಸೂಪರ್ ಕಾರು ಕೂಡ ಥೇಟ್ ಇದೇ ಬಣ್ಣದಲ್ಲಿ ಕಾಣಲಿದ್ದು, ಸಿನಿಮಾದಲ್ಲಿ ಇದಕ್ಕೆ ಸೂಪರ್ ಪವರ್ಸ್ ಇರುತ್ತವೆ. ಅಲ್ಲದೇ ಸಿನಿಮಾ ಬಂದು 20 ವರ್ಷಗಳು ಕಳೆದಿವೆ, ಹಾಗೆಯೇ ಅಂದಿನ ಕಾಲಕ್ಕೆ ಆ ಸಿನಿಮಾದಲ್ಲಿ ಕಾರು ತಾನಾಗಿಯೇ ಮಾಡುವ ಸ್ಟಂಟ್‌ಗಳು ಇಂದಿನ ಜನರಿಗೆ ಹಾಸ್ಯವೆನಿಸುತ್ತವೆ. ಇದೇ ಕಾರಣಕ್ಕೆ ಬಾಬರ್ ಅಜಾಮ್ ಅವರ ಕಾರನ್ನು ಟಾರ್ಜನ್ ಚಿತ್ರದ ಕಾರಿಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ.

ಖ್ಯಾತ ಭಾರತೀಯ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ (DC) ಅವರು ಬಾಲಿವುಡ್ ಚಲನಚಿತ್ರಕ್ಕಾಗಿ ಈ ಕಾರನ್ನು ವಿನ್ಯಾಸಗೊಳಿಸಿದ್ದರು. ಇವರು ನಿರ್ಮಿಸಿದ್ದಾಗ ಎಷ್ಟು ಜನಪ್ರಿಯವಾಗಿತ್ತೋ, ಈಗ ಅಷ್ಟೇ ಟ್ರೋಲ್ ಆಗುತ್ತಿದೆ. ಎರಡೂ ಕಾರಿಗಳು ವಿಭಿನ್ನ ವಿನ್ಯಾಸವನ್ನು ಹೊಂದಿದ್ದರೂ ಬಣ್ಣದಲ್ಲಿ ಮಾತ್ರ ಒಂದೇ ಆಗಿರುವುದು ಈಗ ಇಷ್ಟೆಲ್ಲಾ ಟ್ರೋಲ್‌ಗೆ ಕಾರಣವಾಗಿದೆ.

pakistani-cricketer-babar-azam-buys-lamborghini-aventador

ಬಾಬರ್ ಅವರ ಲ್ಯಾಂಬೋರ್ಗಿನಿ ಅವೆಂಟಡಾರ್: ಲಂಬೋರ್ಘಿನಿ ಅವೆಂಟಡಾರ್ ಸಂಪೂರ್ಣವಾಗಿ ಹೊಸ ಬಾಡಿವರ್ಕ್ ಮತ್ತು ಒಳಾಂಗಣವನ್ನು ಹೊಂದಿದ್ದು, 6.5-ಲೀಟರ್ ನ್ಯಾಚುರಲ್ಲಿ-ಆಸ್ಪಿರೇಟೆಡ್ V12 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಅವೆಂಟಡಾರ್ 2022 ರಲ್ಲಿ ಸ್ಥಗಿತಗೊಂಡಿತು. ಅದಕ್ಕೂ ಮೊದಲು ವಿವಿಧ ಫೇಸ್‌ಲಿಫ್ಟ್‌ಗಳು, ನವೀಕರಣಗಳು ಮತ್ತು ಲಿಮಿಟೆಡ್ ಎಡಿಷನ್‌ಗಳು ಬಂದಿವೆ.

ಬಾಬರ್ ಅವರ ಇತರ ಕಾರುಗಳು: ಅವೆಂಟಡಾರ್ ಹೊರತಾಗಿ, ಬಾಬರ್ ಅಜಮ್ ಬಳಿ ಆಡಿ A5, ಆಡಿ ಇ-ಟ್ರಾನ್ GT, ಹ್ಯುಂಡೈ ಸೋನಾಟಾವನ್ನು ಹೊಂದಿದ್ದಾರೆ. ಇದೇ ವರ್ಷ ತಮ್ಮ ಕುಟುಂಬ ಸದಸ್ಯರಿಂದ ಬಿಳಿ ಇ-ಟ್ರಾನ್ GT ಅನ್ನು ಉಡುಗೊರೆಯಾಗಿ ಪಡೆದರು. ಜೊತೆಗೆ BAIC BJ40 ಕುಡ ಇದ್ದು, ಇದು ಜೀಪ್ ರಾಂಗ್ಲರ್, ಮಹೀಂದ್ರಾ ಥಾರ್‌ಗೆ ಹೋಲಿಕೆಯನ್ನು ಹೊಂದಿರುವ ಚೈನೀಸ್ SUV ಆಗಿದೆ.

pakistani-cricketer-babar-azam-buys-lamborghini-aventador

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 29, 2023, 15:42 [IST]
English summary
Pakistani cricketer babar azam buys lamborghini aventador
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+