ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಪಾಕಿಸ್ತಾನದ ಕ್ರಿಕೆಟಿಗ, ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್ ಚಲಿಸುತ್ತಿದ್ದ ಸ್ಪೋರ್ಟ್ಸ್ ಕಾರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಈ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಈ ಘಟನೆಯಲ್ಲಿ ಶೋಯೆಬ್ ಮಲಿಕ್ ರವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಸೂಪರ್ ಲೀಗ್‌ನ ಡ್ರಾಫ್ಟ್ ಈವೆಂಟ್‌ನಲ್ಲಿ ಭಾಗವಹಿಸಲು ಅವರು ಲಾಹೋರ್‌ನಲ್ಲಿರುವ ಹೈ ಪರ್ಫಾರ್ಮೆನ್ಸ್ ಸೆಂಟರಿಗೆ ತೆರಳಿದ್ದರು

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಅಲ್ಲಿಂದ ಹಿಂದಿರುಗುವಾಗ ಅವರು ಚಲಿಸುತ್ತಿದ್ದ ಸ್ಪೋರ್ಟ್ಸ್ ಕಾರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಮುಂಭಾಗವು ಸಂಪೂರ್ಣವಾಗಿ ಹಾನಿಗೀಡಾಗಿದೆ. ಕಾರು ಹಾನಿಗೀಡಾಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಈಗ ಹೊರ ಬಂದಿರುವ ಮಾಹಿತಿಗಳ ಪ್ರಕಾರ, ಶೋಯೆಬ್ ಮಲಿಕ್ ಅವರಿದ್ದ ಕಾರು ನಿಯಂತ್ರಣವನ್ನು ಕಳೆದುಕೊಂಡು ಟ್ರಕ್'ಗೆ ಗುದ್ದಿದೆ. ಅವರ ಕಾರು ಟ್ರಕ್ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಈವೆಂಟ್‌ನಿಂದ ಹೊರಟ ನಂತರ ಅವರು ತಾವು ತಂಗಿದ್ದ ಹೋಟೆಲ್‌ಗೆ ಹಿಂದಿರುಗುತ್ತಿದ್ದರು. ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಯಾ ಸಮಾ ಟಿವಿಯ ವರದಿಗಳ ಪ್ರಕಾರ ಶೋಯೆಬ್ ಮಲಿಕ್ ಹಿಂದಿರುಗುವಾಗ ವಹಾಬ್ ರಿಯಾಜ್ ಅವರ ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಈ ವೇಳೆ ಅವರು ತಮ್ಮ ಸ್ಪೋರ್ಟ್ಸ್ ಕಾರಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ತಮ್ಮ ಕಾರನ್ನು ನಿರ್ವಹಿಸಲು ಸಾಧ್ಯವಾಗಿಲ್ಲ. ಟ್ರಕ್'ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಅವರು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ.

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಕೊನೆಗೆ ಕಾರು ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್'ಗೆ ಗುದ್ದಿದೆ. ಇದೊಂದು ದೊಡ್ಡ ಅಪಘಾತದಂತೆ ಕಂಡು ಬಂದರೂ ಅಪಘಾತದಲ್ಲಿ ಶೋಯೆಬ್ ಮಲಿಕ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಘಟನೆಯ ನಂತರ ಟ್ವೀಟ್ ಮಾಡಿರುವ ಅವರು, ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ನನ್ನ ಅಪಘಾತದ ಸುದ್ದಿ ಕೇಳಿ ಹರಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ಕಾಳಜಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಈ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು, ಘಟನೆ ನಡೆದಾಗ ಶೋಯೆಬ್ ಮಲಿಕ್ ಆ ಕಾರಿನಲ್ಲಿದ್ದರು. ನಾನು ಅವರ ವೀಡಿಯೊವನ್ನು ಮಾಡಲು ಪ್ರಯತ್ನಿಸಿದಾಗ ಅವರು ನನ್ನನ್ನು ತಡೆದರು ಎಂದು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರಿನ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಗುದ್ದಿದ್ದ ಸಾನಿಯಾ ಮಿರ್ಜಾ ಪತಿ

ಶೋಯೆಬ್ ಮಲಿಕ್ ಚಲಿಸುತ್ತಿದ್ದ ಕಾರು ಮಾದರಿ ಎಂಬುದು ತಿಳಿದು ಬಂದಿಲ್ಲ. ಆದರೆ ಅವರು ಸ್ಪೋರ್ಟ್ಸ್ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ. ಈ ಕಾರಿನ ಜೊತೆಗೆ ಅವರು ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Pakistani cricketer Shoaib Malik car crashes with truck escapes unhurt. Read in Kannada.
Story first published: Monday, January 11, 2021, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X