ವಿಮಾನ ಪತನದ ಅಂತಿಮ ಕ್ಷಣಗಳ ನೇರ ದೃಶ್ಯವಾಳಿಗಳು; ದುರಂತದ ಬಳಿಕ ಸೆಲ್ಫಿ!
ವಿಮಾನವೊಂದು ಪತನಗೊಳ್ಳುವ ಕೊನೆಯ ಕೆಲವು ಕ್ಷಣಗಳು ಹೇಗಿರಬಹುದು? ಇಂತಹ ದೃಶ್ಯಗಳನ್ನು ನೀವು ಸಿನೆಮಾಗಳಲ್ಲಿ ಮಾತ್ರ ನೋಡಿರಲು ಸಾಧ್ಯ. ಪ್ರಯಾಣಿಕರ ಕಿರುಚಾಟ, ಮಡುಗಟ್ಟಿದ ವಾತಾವರಣ, ಪ್ರಾಣ ಭಯ ಹೀಗೆ ಅನೇಕ ಆಂತಕದ ಕ್ಷಣಗಳನ್ನು ಕಳೆಯಬೇಕಾಗುತ್ತದೆ.
ಹಾಗಿರುವಾಗ ದಿಗಿಲು, ಗಾಬರಿಯಿಂದ ದಿಕ್ಕೆಟ್ಟ ಪ್ರಯಾಣಿಕರ ನಡುವೆ ವಿಮಾನ ಪತನಗೊಳ್ಳುವ ಅಂತಿಮ ಕ್ಷಣಗಳನ್ನು ಸ್ಕೈಡೈವರ್ ಓರ್ವ ಗೊ ಪ್ರೊ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನೂರಾರು ಅಡಿ ಎತ್ತರದಲ್ಲಿ ಸಂಭವಿಸಿರುವ ವಿಮಾನ ಅಪಘಾತದ ಅಂತಿಮ ಕ್ಷಣಗಳ ನೇರ ದೃಶ್ಯವಾಳಿಗಳು ಎಂತರವನ್ನು ಬೆಚ್ಚಿ ಬೀಳಿಸುವಂತಿದೆ.

ಕ್ಯಾಲಿಫೋರ್ನಿಯಾದ ಸಾಕ್ರಾಮೆಂಟೊದಲ್ಲಿ ಸಣ್ಣ ವಿಮಾನದಲ್ಲಿ 17 ಮಂದಿ ಸ್ಕೈಡೈವರ್ ಗಳು ಸಂಚರಿಸುತ್ತಿದ್ದರು. ಆದರೆ ಅಚಾನಕ್ ನಡೆದ ಪತನವು ಸಾವನ್ನು ಕಣ್ಣಾರೆ ನೋಡುವಂತಾಗಿದೆ.

ಲೋದಿ ಪ್ಯಾರೂಚೂಟ್ ಕೇಂದ್ರದಿಂದ ಸಿಂಗಲ್ ಎಂಜಿನ್ ನಿಯಂತ್ರಿತ ವಿಮಾನ ಅವಘಡಕ್ಕೀಡಾಗಿತ್ತು. ಎಂಜಿನ್ ವೈಫಲ್ಯವು ಅಪಘಾಕ್ಕಿರುವ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ, ತಲೆ ಕೆಳಗಾಗಿ ಉರುಳುತ್ತಾ ಕೊನೆಗೆ ದ್ರಾಕ್ಷಿತೋಟದಲ್ಲಿ ಪತನಗೊಂಡಿತ್ತು.

ಈ ಭಯಾನಕ ದೃಶ್ಯಗಳನ್ನು ವಿಮಾನದಲ್ಲಿ ಸಂಚರಿಸುತ್ತಿದ್ದ ಬ್ರೆಂಡನ್ ಆಲ್ ಶೈರ್ ಎಂಬವರ ತಲೆಯಲ್ಲಿ ಜೋಡಿಸಿರುವ ಗೊ ಪ್ರೊ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಇದು ವಿಮಾನ ಪತನದ ವೇಳೆಯ ಗಾಬರಿಯ ಕ್ಷಣಗಳನ್ನು ಇಲ್ಲಿ ಬಿತ್ತರಿಸಲಾಗಿದೆ. ವಿಮಾನ ತಲೆಕ್ಕೆಳಗಾಗುವ ವೇಳೆ ಕ್ಯಾಮೆರಾವನ್ನು ಕತ್ತಲು ಆವರಿಸಿಕೊಳ್ಳುತ್ತದೆ.

ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗುತ್ತಾರೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಕೊಂಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು.

ಬಳಿಕ ವಿಮಾನದಿಂದ ಹೊರಬಂದ ಸ್ಕೈಡೈವರ್ ತಲೆ ಕೆಳಗಾದ ವಿಮಾನದ ಹೊರಭಾಗದಲ್ಲಿ ನಿಂತುಕೊಂಡು ಸೆಲ್ಫಿ ತೆಗೆಯುತ್ತಾರೆ.

ಆನಂತರ ಎಲ್ಲ ಸ್ಕೈಡೈವರ್ ಗಳು ಭಯಭೀತರಾಗಿ ವಿಮಾನದಿಂದ ಹೊರ ಬರುವ ದೃಶ್ಯವನ್ನು ಚಿತ್ರಿಸಲಾಗಿದೆ.

ಒಟ್ಟಾರೆಯಾಗಿ ಆಂತಕದ ಕ್ಷಣದ ವೇಳೆಯಲ್ಲೂ ಧೈರ್ಯ ಕೈಬಿಡದೆ ಈ ಎಲ್ಲ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾಗಿರುವ ಸ್ಕೈಡೈವರ್ ಸಾಹಸವನ್ನು ಮೆಚ್ಚಲೇಬೇಕು.
ಭಯಾನಕ ವಿಡಿಯೋ ವೀಕ್ಷಿಸಿ


Click it and Unblock the Notifications








