ಪ್ಯಾರಿಸ್‌ನಲ್ಲಿ ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್‌ ಸಂಪೂರ್ಣ ಬ್ಯಾನ್‍ಗೆ ಜನರ ಮತ: ಯಥಾವತ್ತು ಜಾರಿ.. ಹೇಳಿಕೆ

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಹಲವು ದೇಶಗಳು ಜನರಿಗೆ ಮಾಲಿನ್ಯ ಮುಕ್ತ ವಾತಾವರಣಕ್ಕಾಗಿ ಶೂನ್ಯ ಹೊರಸೂಸುವಿಕೆಯ ಎಲೆಕ್ಟ್ರಿಕ್ ವಾಹನ(ಇವಿ)ಗಳನ್ನು ಖರೀದಿಸುವಂತೆ ಪ್ರಚಾರ ಮಾಡುತ್ತಿವೆ. ಆದರೆ, ದೊಡ್ಡ ಸಂಖ್ಯೆಯಲ್ಲಿ ಇವಿ ಬಳಕೆ ಮಾಡುವ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿಯೇ ಬಾಡಿಗೆ ಇ-ಸ್ಕೂಟರ್ ನಿಷೇಧಿಸುವಂತೆ ಅಲ್ಲಿನ ನಿವಾಸಿಗಳು ಮತ ಚಲಾಯಿಸಿದ್ದಾರೆ.

ಕಳೆದ ಕೆಲವು ತಿಂಗಳಿಂದ ಪ್ಯಾರಿಸ್‌ ನಗರದ ರಸ್ತೆಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಂದ ಅಪಘಾತಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದಕ್ಕಾಗಿ ಮೇಯರ್ ಅನ್ನೆ ಹಿಡಾಲ್ಗೊ ಅವರು, 'ಬಾಡಿಗೆ ಇ-ಸ್ಕೂಟರ್‌' ನಿಷೇಧಿಸಬೇಕೇ, ಬೇಡವೇ ಎಂಬುದರ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಭಾನುವಾರ ಪಾಲಿಕೆ ವತಿಯಿಂದ ಮತದಾನ ಏರ್ಪಡಿಸಿದ್ದರು. ಶೇಕಡ 90% ಜನರು ಇವುಗಳನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ವೋಟ್ ಮಾಡಿದ್ದಾರೆ.

ಪ್ಯಾರಿಸ್‌ನಲ್ಲಿ ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್‌ ಸಂಪೂರ್ಣ ಬ್ಯಾನ್‍ಗೆ ಜನರ ಮತ: ಯಥಾವತ್ತು ಜಾರಿ.. ಹೇಳಿಕೆ

ಫ್ರಾನ್ಸ್‌ ದೇಶದ ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಪ್ರಕಾರ, ಪ್ಯಾರಿಸ್‌ ನಗರದಲ್ಲಿ 13 ಲಕ್ಷ ನೋಂದಾಯಿತ ಮತದಾರರು ಇದ್ದು, ಕೇವಲ 1,03,000 ಮಂದಿ ಜನಾಭಿಪ್ರಾಯ ಸಂಗ್ರಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ 91,300ಕ್ಕೂ ಹೆಚ್ಚು ಮಂದಿ ಇ-ಸ್ಕೂಟರ್ ನಿಷೇಧಿಸುವಂತೆ ಮತ ಚಲಾಯಿಸಿದ್ದಾರೆ ಎಂದು ಫಲಿತಾಂಶದಿಂದ ತಿಳಿದುಬಂದಿದೆ. ಪ್ರಪಂಚದಲ್ಲಿಯೇ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಿದ ಮೊದಲ ನಗರಗಳ ಸಾಲಿನಲ್ಲಿ ಪ್ಯಾರಿಸ್‌ ನಿಲ್ಲುತ್ತದೆ. ಅಲ್ಲೇ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ಯಾರಿಸ್‌ನಲ್ಲಿ ಸಂಚಾರ ದಟ್ಟಣೆ ಇರುವ ರಸ್ತೆಗಳು ಮಾತ್ರವಲ್ಲ, ಪುಟ್ ಪಾತ್ ನಲ್ಲಿಯೂ ಕೆಲವು ವಾಹನ ಸವಾರರು, ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅಡ್ಡಾದಿಡ್ಡಿಯಾಗಿ ಅತಿ ವೇಗದಲ್ಲಿ ಓಡಿಸುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು ಹಾಗೂ 12 ಮೇಲ್ಪಟ್ಟವರಿಗೆ ಪರವಾನಿಗೆ ನೀಡುತ್ತಿರವುದು ಕೂಡ ಆಕ್ಸಿಡೆಂಟ್ ನಡೆಯಲು ಪ್ರಮುಖ ಕಾರಣಗಳಾಗಿ ಬಿಟ್ಟಿವೆ.

ಪ್ಯಾರಿಸ್‌ನಲ್ಲಿ ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್‌ ಸಂಪೂರ್ಣ ಬ್ಯಾನ್‍ಗೆ ಜನರ ಮತ: ಯಥಾವತ್ತು ಜಾರಿ.. ಹೇಳಿಕೆ

ಕೆಲವು ದಿನಗಳ ಹಿಂದೆ, ಭೀಕರ ಅಪಘಾತ ಪ್ರಕರಣವೊಂದು ವರದಿಯಾಗಿತ್ತು. ಇಬ್ಬರು ವ್ಯಕ್ತಿಗಳು ತೆರಳುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ ವೊಂದು 31 ವರ್ಷದ ಇಟಾಲಿಯನ್ ಮಹಿಳೆಗೆ ಡಿಕ್ಕಿಯಾಗಿತ್ತು. ಆಕೆ ಪುಟ್ ಪಾಟ್ ನಲ್ಲಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಳು. ಈ ಘಟನೆ ಬಳಿಕ ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್ ನಿಷೇಧಿಸುವಂತೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಇ-ಸ್ಕೂಟರ್ ಕಂಪನಿಗಳು, ತಮ್ಮ ವಾಹನಗಳಿಂದ ಪ್ಯಾರಿಸ್‌ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಅಪಘಾತಗಳಾಗಿವೆ ಎಂದು ವಾದಿಸಿವೆ.

ಪ್ಯಾರಿಸ್‌ನಲ್ಲಿ ಅಲ್ಲಿನ ಆಡಳಿತ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವ ನಿಯಮಗಳನ್ನು ಜಾರಿಗೆ ತಂದಿದ್ದು, ಅದರಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಗಮನಿಸಿದ ಮೇಯರ್ ಅನ್ನೆ ಹಿಡಾಲ್ಗೊ, ಅಂತಿಮವಾಗಿ ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್‌ ಸಂಪೂರ್ಣ ನಿಷೇಧ ಸಂಬಂಧ ಜನಾಭಿಪ್ರಾಯ ಸಂಗ್ರಹಕ್ಕೆ ಭಾನುವಾರ ಮತದಾನ ನಡೆಸಲು ತೀರ್ಮಾನಿಸಿದ್ದರು. ಸ್ವತಃ ಅವರೇ ಮತ ಚಲಾಯಿಸಿ, ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಆಯ್ಕೆಗೆ ಸಂಪೂರ್ಣ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಜನರ ತೀರ್ಪನ್ನು ಪ್ಯಾರಿಸ್‌ನಲ್ಲಿ ಯಥಾವತ್ತು ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಬಾಡಿಗೆ ಇ ಸ್ಕೂಟರ್ ನೀಡುವ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದ್ದು, ಇತರೆ ಯುರೋಪ್ ದೇಶಗಳು ಕೂಡ ಬಾಡಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನಿಷೇಧ ಮಾಡುವಂತಹ ಕ್ರಮಕ್ಕೆ ಮುಂದಾಗಬಹುದು. ಅಲ್ಲದೆ, ಫ್ರಾನ್ಸ್‌ನಲ್ಲಿ ಕಠಿಣ ಸಂಚಾರಿ ನಿಯಮಗಳನ್ನು ಜಾರಿ ಮಾಡಲಾಗುತ್ತಿದ್ದು, ಲೆಸೆನ್ಸ್ ನೀಡುವ ವಯಸ್ಸನ್ನು 14ಕ್ಕೆ ಹೆಚ್ಚಿಸಲಾಗುತ್ತಿದೆ.

ಒಟ್ಟಾರೆ, ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಿದ ಮೊದಲು ನಗರವಾದ ಪ್ಯಾರಿಸ್‌ನಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ಉಂಟಾಗಿರುವುದು ವಿಷಾದವೇ ಸರಿ. ಅಲ್ಲಿನ ಆಡಳಿತ ಕೂಡ ದಿಟ್ಟ ಹೆಜ್ಜೆ ಇಟ್ಟಿದ್ದು, ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನಿಷೇಧಿಸಲು ಜನಾಭಿಪ್ರಾಯ ಸಂಗ್ರಹಿಸಲು ಮತದಾನ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಜನರು ಕೂಡ ಸರಿಯಾಗಿ ಸಂಚಾರಿ ನಿಯಮ ಪಾಲಿಸಿದ್ದರೆ, ಇಂತಹ ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ.

Article Published On: Monday, April 3, 2023, 16:19 [IST]
English summary
Paris votes ban rental e scooters details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+