ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

Written By:

ಮೆಟ್ರೋ ಸಿಟಿಗಳು ಮತ್ತು 2ನೇ ದರ್ಜೆಯ ಮಹಾನಗರಗಳಲ್ಲಿ ಇದೀಗ ಶಾಪಿಂಗ್ ಮಾಲ್‌ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ರೆ ಶಾಪಿಂಗ್ ಮಾಲ್‌ಗಳಿಗೆ ಬರುವ ಗ್ರಾಹಕರಿಂದ ಪಾರ್ಕಿಂಗ್ ಚಾರ್ಜ್ ಹೆಸರಿನಲ್ಲಿ ಶಾಪಿಂಗ್ ಮಾಲ್ ಮಾಲೀಕರು ಸುಲಿಗೆ ಮಾಡುತ್ತಿದ್ದು, ಇದನ್ನು ತಡೆಯಲು ತೆಲಂಗಾಣ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಜಾರಿಗೆ ತಂದಿದೆ.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಪಾರ್ಕಿಂಗ್ ಸ್ಲಾಟ್‌ಗಳ ಮೂಲಕ ಗ್ರಾಹಕರಿಂದ ಭಾರೀ ಪ್ರಮಾಣದ ಆದಾಯಗಳಿಸುತ್ತಿರುವ ಶಾಪಿಂಗ್ ಮಾಲ್‌ ಮಾಲೀಕರಿಗೆ ಶಾಕ್ ನೀಡಿರುವ ತೆಲಂಗಾಣ ಸರ್ಕಾರವು, ಮಾಲ್‌ಗಳಲ್ಲಿ ನಿಲುಗಡೆಯಾಗುವ ವಾಹನಗಳಿಗೆ ಮೊದಲ ಅರ್ಧ ಗಂಟೆಗಳ ಕಾಲ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ನೀಡುವಂತೆ ಆದೇಶ ಹೊರಡಿಸಿದೆ.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಯಾವುದೇ ಷರತ್ತುಗಳಿಲ್ಲದೇ ಉಚಿತ ಪಾರ್ಕಿಂಗ್ ಸೌಲಭ್ಯ ನೀಡುವಂತೆ ಹೊಸ ಆದೇಶವನ್ನು ಹೊರಡಿಸಲಾಗಿದ್ದು, ಇದು ಕೇವಲ ಶಾಪ್ ಮಾಲ್‌ಗಳಿಗೆ ಅಷ್ಟೇ ಅಲ್ಲದೇ ಮಲ್ಟಿಪೆಕ್ಸ್ ಥಿಯೇಟರ್, ವಾಣಿಜ್ಯ ಬಳಕೆಯ ಕಟ್ಟಡಗಳಿಗೆ ಈ ನಿಯಮ ಅನ್ವಯವಾಗುವಂತೆ ಹೊಸ ಆದೇಶವನ್ನು ಜಾರಿ ಮಾಡಿದೆ.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಏಪ್ರಿಲ್ 1ರಿಂದಲೇ ಹೊಸ ಆದೇಶ ಜಾರಿ ಬರಲಿದ್ದು, ಹೊಸ ಆದೇಶ ಪ್ರಕಾರ ಎಲ್ಲಾ ಶಾಪಿಂಗ್ ಮಾಲ್‌ಗಳಲ್ಲಿ ನಿಲುಗಡೆಯಾಗುವ ಪ್ರತಿ ವಾಹನಗಳಿಗೂ ಮೊದಲ ಅರ್ಧಗಂಟೆ ಕಾಲ ಉಚಿತ ನಿಲುಗಡೆ ಅವಕಾಶ ಲಭ್ಯವಾಗಲಿದೆ.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಇನ್ನು ಹೊಸ ಆದೇಶ ಜಾರಿ ಮಾಡಿರುವ ಉದ್ದೇಶ ಏನೆಂದರೇ, ಹೈದ್ರಾಬಾದ್ ಮೂಲದ ಸಾಮಾಜಿಕ ಹೋರಾಟಗಾರರದ ಶೀಲು ರಾಜು ಮತ್ತು ಸತೀಶ್ ಕುಮಾರ್ ಎಂಬುವರು ಮಾಲ್‌ಗಳಲ್ಲಿ ಗ್ರಾಹಕರಿಂದ ಕಾನೂನು ಬಾರಿವಾಗಿ ಶುಲ್ಕ ವಸೂಲಿ ಮಾಡುತ್ತಿರುವುದರ ಕುರಿತು ಸೆಷನ್ ಕೋರ್ಟ್‌ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದರು.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಹೈದ್ರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ಹೀಗಾಗಿ ಕೋರ್ಟ್ ಆದೇಶದಂತೆ ಶಾಪಿಂಗ್ ಮಾಲ್‌ಗಳಲ್ಲಿ ಮೊದಲ ಅರ್ಧ ಗಂಟೆಗಳ ಕಾಲ ಉಚಿತ ವಾಹನ ನಿಲುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಆದ್ರೆ ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಶುಲ್ಕಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲವಾದರೂ, ಶಾಪಿಂಗ್ ಮಾಲ್ ಮಾಲೀಕರ ಕಾನೂನು ಬಾಹಿರ ಶುಲ್ಕ ವಸೂಲಿಗೆ ಕೊಂಚ ಬ್ರೇಕ್ ಬಿದ್ದಿದೆ.

ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ...

ಒಂದು ವೇಳೆ ಮಾಲ್‌ಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನಿಮ್ಮ ವಾಹನವನ್ನು ನಿಲುಗಡೆ ಮಾಡಿದ್ದಲ್ಲಿ ಪಾರ್ಕಿಂಗ್ ಚಾರ್ಜ್‌ಗಳನ್ನು ಅನ್ವಯವಾಗಲಿದ್ದು, ನಿಗದಿತ ಅವಧಿಯಲ್ಲಿ ಶಾಪಿಂಗ್ ಮಾಡಿ ಬರುವ ಗ್ರಾಹಕರಿಗೆ ಇದು ಯೋಜನೆ ಪ್ರಯೋಜನವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

02. ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

03. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

04. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

05. ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

Read more on auto news
English summary
Hyderabad Residents It's Time To Rejoice — No More Parking Fee In City Malls.
Story first published: Tuesday, March 27, 2018, 16:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark