ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

Written By: Rahul TS

ಕಳೆದ 2 ದಶಕಗಳಿಂದ ಭಾರತದಲ್ಲಿ ತನ್ನದೆಯಾದ ಜನಪ್ರಿಯತೆ ಪಡೆದಿರುವ ಬಜಾಜ್ ಸಂಸ್ಥೆಯು ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಿತ ಪಲ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದ್ದು, ಇದೀಗ ಹೊಸ ಬೈಕ್ ಬಗೆಗಿನ ಮತ್ತಷ್ಟು ತಾಂತ್ರಿಕ ಅಂಶಗಳು ಹಾಗೂ ಬೆಲೆ ಮಾಹಿತಿ ಹೊರಹಾಕಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

ಸುಮಾರು 7 ವರ್ಷಗಳ ನಂತರ ಪಲ್ಸರ್ ಸರಣಿಯ ಪಲ್ಸರ್ 150 ಬೈಕ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು, ನಾಲ್ಕನೇ ತಲೆಮಾರಿನ ಹೊಸ ಲುಕ್ ಮತ್ತು ಇನ್ನಿತರೆ ನವಿಕರಿಸಲಾಗಿರುವ ವೈಶಿಷ್ಟ್ಯತೆಗಳೊಂದಿಗೆ ಹೊಸ ಬೈಕ್‌ಗಳು ಗ್ರಾಹಕರ ಕೈ ಸೇರಲು ಸಜ್ಜುಗೊಳ್ಳುತ್ತಿವೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

ಹೊಸ ಪಲ್ಸರ್ 150 ಬೈಕ್‍ ಬಗೆಗೆ ಹೇಳುವುದಾದರೇ, ಹೊಸ ಮಾದರಿಗಳಲ್ಲಿ 230 ಎಂಎಂ ರಿಯರ್ ಡಿಸ್ಕ್ ಬ್ರೇಕ್‍‍ಗಳನ್ನು ಒದಗಸಿಲಾಗಿದ್ದು, ಮುಂಭಾಗದ ಚಕ್ರಗಳಲ್ಲಿ 260 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್‍‍ಗಳನ್ನು ಕೂಡಾ ಪಡೆದಿದೆ. ಹೀಗಾಗಿ ಬೈಕ್ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

ಜೊತೆಗೆ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳಾದ ಹೊಸ ಗ್ರಾಫಿಕ್ ಲುಕ್, ಸ್ಪ್ಲಿಟ್ ಸೀಟ್ಸ್, ಸ್ಪ್ಲಿಟ್ ಗ್ರಾಬ್‍ರೈಲ್, ಎಕ್ಸಾಸ್ಟ್ ಮಫ್ಲರ್, ಮೆಟಲ್ ಹೀಟ್ ಶೀಲ್ಡ್ ಉಪಕರಣಗಳನ್ನು ತನ್ನದೇ ಆದ ಪಲ್ಸರ್ 180 ಬೈಕ್‍ನಿಂದ ಎರವಲು ಪಡೆದಿದ್ದು, ಫುಟ್ ಪೆಗ್ಸ್, ಅಪ್‍ಫ್ರಂಟ್ 37ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಅನ್ನು ಕೂಡ ಪಡೆದಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

ಹೊಸ ಪಲ್ಸರ್ 150 ಬೈಕ್ 149ಸಿಸಿ ಎಂಜಿನ್, ಸಿಂಗಲ್ ಸಿಲಿಂಡರ್, 2 ವಾಲ್ವೆ, ಟ್ವಿನ್ ಸ್ಪಾರ್ಕ್ ಮೋಟಾರ್ ಹೊಂದಿದ್ದು, 14 -ಬಿಹೆಚ್‍ಪಿ ಮತ್ತು 13.4-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಇದಲ್ಲದೇ ಇದನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

ಹೊಸ ಬೈಕಿನ ಬೆಲೆ

ಬೆಂಗಳೂರಿನ ಬಜಾಜ್ ಡೀಲರ್‍‍ಗಳ ಪ್ರಕಾರ ಹೊಸ ಪಲ್ಸರ್ 150 ಬೈಕಿನ ಆನ್-ರೋಡ್ ಬೆಲೆಯನ್ನು ರೂ. 92,900ಕ್ಕೆ ನಿಗದಿ ಪಡಿಸಿದ್ದು, ಬೈಕಿನ ಖರೀದಿಗಾಗಿ ಈಗಲೇ ನಿಮ್ಮ ಹತ್ತಿರದ ಬಜಾಜ್ ಡೀಲರ್‍‍‍ಗಳ ಹತ್ತಿರ ಬುಕ್ಕಿಂಗ್ ಕೂಡಾ ಮಾಡಬಹುದಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

2018ರ ಬಜಾಜ್ ಪಲ್ಸರ್ ಬೈಕ್ ಹೊಸದಾಗಿ ಡಿಸ್ಕ್ ಬ್ರೇಕ್, ಸ್ಪೋರ್ಟಿ ಸ್ಪ್ಲಿಟ್ ಸೀಟ್ಸ್ ಮತ್ತು ಸ್ಪ್ಲಿಟ್ ಗ್ರಾಬ್ ರೈಲ್ ಅನ್ನು ಪಡಿದಿದ್ದು, ಪ್ರಮುಖವಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಕಳೆದುಕೊಂಡಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

ಇನ್ನು ಏಪ್ರಿಲ್ 1 ರಿಂದ ಹೊಸದಾಗಿ ಬಿಡುಗಡೆಯಾಗುವ ಎಲ್ಲಾ 125 ಸಿಸಿ ಎಂಜಿನ್ ದ್ವಿಚಕ್ರ ವಾಹನಗಳು ಸಿಂಗಲ್ ಚಾನೆಲ್ ಎಬಿಎಸ್ ಹೊಂದಿರುವುದು ಕಡ್ಡಾಯವಾಗಿರಲಿದ್ದು, ಈ ಹಿನ್ನೆಲೆ ಬಜಾಜ್ ಸಂಸ್ಥೆಯು ತನ್ನ ಪಲ್ಸರ್ 150 ಮಾದರಿಯನ್ನು ಡೆಡ್‍ಲೈನ್‌ಗೂ ಮುಂಚಿತವಾಗಿಯೇ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ.!

2. ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು..

3. ಮೊದಲ ಚಾಲನಾ ವಿಮರ್ಶೆ- ರೇಸ್ ಲುಕ್‌ನೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ

4. ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

5. ಬಿಡುಗಡೆಯಾದ ಹೋಂಡಾ ಆಕ್ಟಿವಾ 5ಜಿ ಬಗ್ಗೆ ನಿಮಗೆಷ್ಟು ಗೊತ್ತು.?

Read more on bajaj pulsar
English summary
2018 Bajaj Pulsar 150 Price Revealed — Specifications, Features And More Details.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark