ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆ ಈ ವರ್ಷ ಎರಡನೇ ಬಾರಿಗೆ ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದ ಕಾರಣಕ್ಕೆ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕ್ರಮವಾಗಿ 21 ಪೈಸೆ ಹಾಗೂ 20 ಪೈಸೆಗಳಷ್ಟು ಇಳಿಸಿವೆ.

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಆದರೆ ಈ ಬೆಲೆ ಇಳಿಕೆಯು ಜನ ಸಾಮಾನ್ಯರಿಗೆ ಖುಷಿಯನ್ನಂತು ಉಂಟು ಮಾಡುತ್ತಿಲ್ಲವೆಂಬುದು ವಿಶೇಷ. ಬೆಲೆ ಇಳಿಕೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.90.78ಗಳಾದರೆ, ಡೀಸೆಲ್ ಬೆಲೆ ರೂ.81.10ಗಳಾಗಿದೆ.

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಇನ್ನು ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ರೂ.93.28, ಕೋಲ್ಕತ್ತಾದಲ್ಲಿ ರೂ.90.98, ಮುಂಬೈನಲ್ಲಿ ರೂ.97.19, ಚೆನ್ನೈನಲ್ಲಿ ರೂ.92.77, ಹೈದರಾಬಾದ್'ನಲ್ಲಿ ರೂ.94.39 ಹಾಗೂ ಜೈಪುರದಲ್ಲಿ ರೂ.97.31ಗಳಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಡೀಸೆಲ್ ಬೆಲೆ ಬೆಂಗಳೂರಿನಲ್ಲಿ ರೂ.85.99, ಕೋಲ್ಕತ್ತಾದಲ್ಲಿ ರೂ.83.98, ಮುಂಬೈನಲ್ಲಿ ರೂ.88.20, ಚೆನ್ನೈನಲ್ಲಿ ರೂ.86.10, ಹೈದರಾಬಾದ್'ನಲ್ಲಿ ರೂ.88.45ಗಳಾಗಿದೆ. ಬೆಲೆ ಇಳಿಕೆಯ ನಂತರವೂ ಪೆಟ್ರೋಲ್, ಡೀಸೆಲ್ ಬೆಲೆ ಬಹುತೇಕ ಮೊದಲಿನಷ್ಟೇ ಇದೆ.

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಕಚ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾದ ಕಾರಣ ಈ ತಿಂಗಳ ಆರಂಭದಲ್ಲಿ ಪ್ರತಿ ಬ್ಯಾರೆಲ್‌ ತೈಲದ ಬೆಲೆ 71 ಡಾಲರ್'ಗಳಿಂದ 64 ಡಾಲರ್'ಗಳಿಗೆ ಇಳಿಕೆಯಾಗಿತ್ತು.ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಯುರೋಪಿಯನ್ ನಗರಗಳಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಇದರಿಂದಾಗಿ ಇಂಧನ ಬೇಡಿಕೆ ಕಡಿಮೆಯಾಗಿದೆ. ಬೇಡಿಕೆ ಕಡಿಮೆಯಾದ ಕಾರಣಕ್ಕೆ ಕಚ್ಚಾ ತೈಲದ ಬೆಲೆ ಕುಸಿದಿದೆ. ಫೆಬ್ರವರಿ ತಿಂಗಳಿನಲ್ಲಿ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್'ಗಳಿಗೆ ಬೇಡಿಕೆ ಕಡಿಮೆಯಾಗಿತ್ತು.

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ದೇಶದ ತೈಲ ಬೇಡಿಕೆಯ 40%ನಷ್ಟಿರುವ ಡೀಸೆಲ್‌ ಬೇಡಿಕೆ ಪ್ರಮಾಣವು 8.5%ನಷ್ಟು ಕಡಿಮೆಯಾಗಿತ್ತು. ಇನ್ನು ಪೆಟ್ರೋಲ್ ಮಾರಾಟವೂ 6.5%ನಷ್ಟು ಕಡಿಮೆಯಾಗಿತ್ತು. ಫೆಬ್ರವರಿ 2021ರ ಆರಂಭದಿಂದ ತೈಲ ಕಂಪನಿಗಳು ಇಂಧನಗಳ ಬೆಲೆಯನ್ನು 14 ಪಟ್ಟು ಹೆಚ್ಚಿಸಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ಇಂಧನ ಬೆಲೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಧಿಸುವ ತೆರಿಗೆಗಳನ್ನು ಒಳಗೊಂಡಿರುತ್ತವೆ.

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಇಂಧನ ಬೆಲೆಯ ಮೇಲೆ 60%ನಷ್ಟು ತೆರಿಗೆ ವಿಧಿಸಲಾಗುತ್ತದೆ. ಕೆಲವು ರಾಜ್ಯ ಸರ್ಕಾರಗಳು ಜನರಿಗೆ ನೆರವಾಗಲು ಪೆಟ್ರೋಲ್, ಡೀಸೆಲ್ ಮೇಲೆ ತಾವು ವಿಧಿಸುತ್ತಿರುವ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಇದೇ ವೇಳೆ ಕೇಂದ್ರ ಸರ್ಕಾರವು ಇಂಧನ ಬೆಲೆಯನ್ನು ಕಡಿಮೆ ಮಾಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ಸಾರ್ವಜನಿಕರು ಹಲವಾರು ದಿನಗಳಿಂದ ಒತ್ತಾಯಿಸುತ್ತಿದ್ದಾರೆ.

Most Read Articles

Kannada
English summary
Petrol diesel price decreased for second time in 2021. Read in Kannada.
Story first published: Thursday, March 25, 2021, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X