ಎಚ್ಚರ..ಎಚ್ಚರ: ಪೆಟ್ರೋಲ್ ಬಂಕ್‌ಗಳಲ್ಲಿ ಹೀಗೂ ನಡೆಯುತ್ತೆ ಮಹಾಮೋಸ

ದೇಶದಲ್ಲಿ ಪೆಟ್ರೋಲ್ ದರ ಗಗನಕ್ಕೇರಿದೆ. 1 ಲೀಟರ್‌ ಬೆಲೆ ರೂ.100 ಆಸುಪಾಸಿನಲ್ಲಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಅಷ್ಟು ಸಾಲದು ಎಂಬಂತೆ ಕೆಲವು ಪೆಟ್ರೋಲ್ ಬಂಕ್‌ ಸಿಬ್ಬಂದಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ. ನೀವು ಹೇಗೆಲ್ಲ ಮೋಸ ಹೋಗಬಹುದು. ಅದರಿಂದ ಎಚ್ಚರ ವಹಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಅಳತೆಯಲ್ಲಿ ಮೋಸ, ಕಳಪೆ ಗುಣಮಟ್ಟದ ಇಂಧನ ತುಂಬುವುದು ಹಾಗೂ ಹೆಚ್ಚಿನ ಹಣ ಕೇಳುವುದು ಸೇರಿದಂತೆ ನಾನಾ ಬಗೆಯಲ್ಲಿ ವಿವಿಧೆಡೆ ಪೆಟ್ರೋಲ್ ಬಂಕ್‌ನವರೂ ವಂಚಿಸುವ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ. ನಾವು ತಿಳಿಸಿದ ಅಂಶಗಳ ಬಗ್ಗೆ ಕೊಂಚ ಮಟ್ಟಿಗೆ ನೀವು ಗಮನ ಹರಿಸಿದರೆ ಇತಂಹವುಗಳಿಂದ ಸುಲಭವಾಗಿ ಪಾರಾಗಬಹುದು. ಜೊತೆಗೆ ನಿಮ್ಮ ಹಣವನ್ನು ಉಳಿಸಿಕೊಳ್ಳಬಹುದು.

ಜಾಗರೂಕರಾಗಿರಿ: ಪೆಟ್ರೋಲ್ ಬಂಕ್‌ಗಳಲ್ಲಿ ಹೀಗೂ ನಡೆಯುತ್ತೆ ಗೋಲ್ ಮಾಲ್

ಕಡಿಮೆ ಇಂಧನ ತುಂಬುವ ಪ್ರಕರಣಗಳು ಆಗಾಗ ಕಂಡುಬರುತ್ತಿರುತ್ತದೆ. ನೀವು ವಾಹನಕ್ಕೆ ಪೆಟ್ರೋಲ್/ಡೀಸೆಲ್ ತುಂಬಿಸಲು ಹೋದಾಗ ಸ್ವಲ್ಪ ಆಲಸ್ಯ ತೋರಿದಿಸಿದರೂ ಬಂಕ್‌ ಸಿಬ್ಬಂದಿಯಿಂದ ವಂಚನೆಗೆ ಒಳಗಾಗುತ್ತೀರಿ. ಸಿಂಪಲ್ಲಾಗಿ ಹೇಳುವುದಾದರೆ, ರೂ.500 ಇಂಧನ ತುಂಬಲು ಹೇಳಿ, ನಿಮ್ಮ ಗಮನವನ್ನು ಬೇರೆಡೆಗೆ ಹರಿಸಿದರೆ, ಆತ ಮೀಟರ್‌ನ್ನು ರೀಸೆಟ್ ಮಾಡುವುದಿಲ್ಲ. ಅಲ್ಲಿ ಮೊದಲೇ ರೂ.100 ನಮೂದಾಗಿದ್ದರೆ, ರೂ.500 ಬರುವವರೆಗೂ ಇಂಧನ ತುಂಬುತ್ತಾರೆ. ಆದರೆ, ನಿಮಗೆ ಸಿಗುವುದು ರೂ.400 ಇಂಧನ ಮಾತ್ರ. ಗೊತ್ತಿಲ್ಲದೆಯೇ ಪೂರ್ತಿ ಬಿಲ್ ಕೂಡ ಪಾವತಿಸುತ್ತೀರಿ.

ಇತ್ತೀಚಿನ ದಿನಗಳಲ್ಲಿ ಕೆಲವು ಪೆಟ್ರೋಲ್ ಬಂಕ್‌ ಸಿಬ್ಬಂದಿ ವಿನೂತನ ವಂಚನೆ ಮಾಡುತ್ತಿದ್ದಾರೆ. ಅನುಮತಿ ಇಲ್ಲದೆಯೇ ನಿಮ್ಮ ವಾಹನಕ್ಕೆ ಸಿಂಥೆಟಿಕ್ ಆಯಿಲ್ ತುಂಬುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ದರಕ್ಕೆ ಹೋಲಿಸಿದರೆ, ಇದರ ಬೆಲೆ 5 ರಿಂದ 10% ಹೆಚ್ಚಿದ್ದು, ಬಂಕ್‌ನವರೂ ಕೇಳಿದಷ್ಟು ಹಣ ಪಾವತಿಸಬೇಕಾಗುವ ಸನ್ನಿವೇಶ ಎದುರಿಸಬೇಕಾಗುತ್ತದೆ. ಸಿಂಥೆಟಿಕ್ ಆಯಿಲ್ ಉತ್ತಮ ದಕ್ಷತೆ ಹೊಂದಿದ್ದರೂ, ದುಬಾರಿಯಾಗಿರವುದರಿಂದ ಬಂಕ್‌ಗೆ ತೆರಳಿದ ಕೊಡಲೇ ಅಲ್ಲಿನ ಸಿಬ್ಬಂದಿಗೆ ಸಾಮಾನ್ಯ ಇಂಧನ ತುಂಬಲು ಹೇಳಿರಿ.

ಜಾಗರೂಕರಾಗಿರಿ: ಪೆಟ್ರೋಲ್ ಬಂಕ್‌ಗಳಲ್ಲಿ ಹೀಗೂ ನಡೆಯುತ್ತೆ ಗೋಲ್ ಮಾಲ್

ಫ್ಯುಯೆಲ್ ಡಿಸ್ಪೆನ್ಸಿಂಗ್ ಮಷಿನ್ (ಇಂಧನ ವಿತರಣಾ ಯಂತ್ರ)ಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸುವ ಮೂಲಕವು ಪೆಟ್ರೋಲ್/ಡೀಸೆಲ್ ಅಳತೆಯಲ್ಲಿ ಮೋಸ ಮಾಡಬಹುದು. ಇಂತಹ ಪ್ರಕರಣವೊಂದು ಕೆಲವರ್ಷಗಳ ಹಿಂದೆ, ತೆಲಂಗಾಣದಲ್ಲಿ ನಡೆದಿತ್ತು. ಅಲ್ಲಿ ವಾಹನಕ್ಕೆ 970 ಮಿಲಿ ಇಂಧನವನ್ನು ತುಂಬಲಾಗುತ್ತಿತ್ತು. ಆದರೆ, ಎಲೆಕ್ಟ್ರಾನಿಕ್ ಚಿಪ್‌ ಸಹಾಯದಿಂದ ಆ ಮಷಿನ್ 1,000 ಮಿಲಿ ಎಂದು ತೋರಿಸುತ್ತಿತ್ತು. ಒಂದೊಮ್ಮೆ ನಿಮ್ಮ ವಾಹನಕ್ಕೂ ಕಮ್ಮಿ ಇಂಧನ ತುಂಬುತ್ತಿದ್ದರೆ ಎಂಬ ಅನುಮಾನ ಬಂದರೆ, ಬಂಕ್‌ನಲ್ಲಿರುವ ಲೀಟರ್ ಮಾಪಕದಿಂದ ಅಳತೆ ನಡೆಯಬಹುದು.

ವಾಹನಗಳಿಗೆ ಕಲಬೆರೆಕೆ ಇಂಧನವನ್ನು ತುಂಬುವ ಪರಿಪಾಠವನ್ನು ಕೆಲವಡೆ ಪೆಟ್ರೋಲ್ ಬಂಕ್‌ ಸಿಬ್ಬಂದಿ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಪೆಟ್ರೋಲ್, ಡೀಸೆಲ್ ನಲ್ಲಿ ಕಲಬೆರೆಕೆ ಇಂಧನ ಬೆರೆಸುವುದು ಅಭ್ಯಾಸವಾಗಿ ಬಿಟ್ಟಿದೆ. ಈ ರೀತಿಯ ಇಂಧನ ತುಂಬುವುದರಿಂದ ವಾಹನದ ಎಂಜಿನ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನೀವು ತುಂಬಿಸುವ ಇಂಧನ ಕಲಬೆರೆಕೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ಸರ್ಕಾರದ ನಿಯಮದ ಅನ್ವಯ, ಪ್ರತಿಯೊಂದು ಪೆಟ್ರೋಲ್ ಬಂಕ್‌ಗಳು, ಗ್ರಾಹಕರು ಕೇಳಿದಾಗ ಫಿಲ್ಟರ್ ಪೇಪರ್‌ಗಳನ್ನು ಮರು ಮಾತನಾಡದೇ ನೀಡಬೇಕು. ಅನುಮಾನ ಮೂಡಿರುವ ಪೆಟ್ರೋಲ್ ನ ಒಂದೆರಡು ಹನಿಗಳನ್ನು ಆ ಪೇಪರ್‌ ಮೇಲೆ ಹಾಕಿದಾಗ ಅದು ಕಲೆ ಬಿಟ್ಟರೆ, ಕಲಬೆರೆಕೆ ಎಂದರ್ಥ. ಇಲ್ಲದಿದ್ದರೆ ಪೆಟ್ರೋಲ್ ಶುದ್ದವೆಂದು. ಇನ್ನು, ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸುವುದು ಸರ್ಕಾರಕ್ಕೆ ಮಾತ್ರ. ಈ ವಿಚಾರದಲ್ಲಿ ಬಂಕ್‌ಗೆ ಯಾವುದೇ ಅಧಿಕಾರವಿಲ್ಲ. ಫ್ಯುಯೆಲ್ ಮಷಿನ್ ನಲ್ಲಿರುವ ದರ ಸರಿಯೇ ಎಂದು ಪರಿಶೀಲಿಸಿರಿ.

ಒಟ್ಟಾರೆಯಾಗಿ ಕೆಲವು ಪೆಟ್ರೋಲ್ ಬಂಕ್‌ನವರೂ ಗ್ರಾಹಕರನ್ನು ವಂಚಿಸಲು ಹಳೆಯ ವಿಧಾನಗಳೊಂದಿಗೆ ಹೊಸ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಎಚ್ಚರ ತಪ್ಪಿದರೆ ಮೋಸ ಹೋಗುವುದು ಮಾತ್ರವಲ್ಲದೆ, ನಿಮ್ಮ ವಾಹನಗಳಿಗೂ ಹಾನಿಯಾಗುತ್ತದೆ. ಇದರಿಂದ ಹೆಚ್ಚಿನ ಹಣವನ್ನು ತೆರಬೇಕಾಗಿದ್ದು, ಇನ್ಮುಂದೆ ಬಂಕ್‌ಗಳಲ್ಲಿ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಬೇಕಾದರೆ ಕೊಂಚ ಜಾಗೃತಿ ವಹಿಸಿದರೆ ವಂಚನೆಗಳಿಂದ ಸುಲಭವಾಗಿ ಪಾರಾಗಬಹುದು.

Article Published On: Friday, March 31, 2023, 11:57 [IST]
English summary
Petrol station cheats how to be careful details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+