5 ಟನ್ ಮಂಜುಗಡ್ಡೆಯಿಂದ ನಿರ್ಮಿಸಿರುವ ಐಸ್ ಟ್ರಕ್ಕಿದ್ದು!
ಸಾಧನೆಗೆ ಮಾರ್ಗ ಹಲವಾರು! ಈ ಸುಂದರ ಜಗತ್ತಿನಲ್ಲಿ ಅನೇಕರು ಹಲವು ರೀತಿಯ ಅಪ್ರತಿಮ ಸಾಧನೆಗಳನ್ನು ತೋರಿರುತ್ತಾರೆ. ಅಂತಹವರನ್ನು ಗುರುತಿಸಿಕೊಳ್ಳುವುದು ಅತಿ ಮುಖ್ಯ.
ನಾವಿಂದು ಪಿಕಪ್ ಟ್ರಕ್ ಕಥೆಯೊಂದನ್ನು ಹೇಳಲಿದ್ದೇವೆ. ಹೌದು, ಬರೋಬ್ಬರಿ 5000 ಕೆ.ಜಿ ಮಂಜುಗಡ್ಡೆಯಿಂದ ನಿರ್ಮಿಸಿರುವ ಟ್ರಕ್ಕಿದ್ದು. ಪ್ರಸ್ತುತ ಟ್ರಕ್ ಗಿನ್ನಿಸ್ ಪುಟ ಸೇರಲು ತುದಿಗಾಲಲ್ಲಿ ನಿಂತಿರುವುದು ಸಹ ಅಷ್ಟೇ ಸತ್ಯ. ಅಷ್ಟಕ್ಕೂ ಈ ಟ್ರಕ್ ನಿರ್ಮಾಣದ ಹಿಂದಿರುವ ಉದ್ದೇಶವಾದರೂ ಏನು? ಇನ್ನಿತರ ಕುತೂಹಲಕಾರಿ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಕೆನಡಿಯನ್ ಟೈರ್ ಎಂಬ ಸಂಸ್ಥೆಯು ತನ್ನ ಕಾರು ಬ್ಯಾಟರಿ ಸಾಮರ್ಥ್ಯವನ್ನು ನಿರೂಪಿಸುವ ನಿಟ್ಟಿನಲ್ಲಿ ಇಂತಹದೊಂದು ರೋಚಕ ಕಾರನ್ನು ತಯಾರಿಸಿದೆ.

ಮೈನಸ್ 40 ಡಿಗ್ರಿ ತಾಪಮಾನದಲ್ಲೂ ಈ ಪಿಕಪ್ ಟ್ರಕ್ಕಿನ ಮಂಜುಗಡ್ಡೆ ಕರಗುವುದರೊಳಗೆ ಗಂಟೆಗೆ 1.6 ಕೀ.ಮೀ.ರಿಂದ ಗಂಟೆಗೆ 20 ಕೀ.ಮೀ. ವೇಗತೆ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ.

ಪ್ರಸ್ತುತ ಮಂಜುಗಡ್ಡೆಯಿಂದ ನಿರ್ಮಿತ ಪಿಕಪ್ ಟ್ರಕ್ ಗಿನ್ನಿಸ್ ಪುಟವನ್ನು ಸೇರಿಕೊಳ್ಳಲಿದೆ. ಇದರಲ್ಲಿ 5000 ಕೆ.ಜಿ ಐಸ್ ಬಳಸಲಾಗಿದೆ.

ವಾಹನೋದ್ಯಮದಲ್ಲಿ ಕೆನಡಿಯನ್ ಟೈರ್ ಸಾಧನೆ ಅತ್ಯಂತ ಮಹತ್ತರವೆನಿಸಲಿದೆ. ಯಾಕೆಂದರೆ ಪ್ರಾಯೋಗಿಕವಾಗಿ ಇದನ್ನು ನನಸಾಗಿಸುವುದರಲ್ಲಿ ಸಂಸ್ಥೆಯು ಕಠಿಣ ಪ್ರಯತ್ನ ನಡೆಸಿದೆ.

2005 ಜಿಎಂಸಿ ಸಿಲ್ವರಡೊ ಫ್ರೇಮ್‌ನಲ್ಲಿ ಈ ಐಸ್ ಟ್ರಕ್ ಪ್ರಯೋಗ ಮಾಡಲಾಗಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








