ಪ್ರಯಾಣಿಕರಿಂದ ಬಚ್ಚಿಟ್ಟ 10 ಭಯಾನಕ ವೈಮಾನಿಕ ಸತ್ಯಗಳು!

By Nagaraja

ವಿಮಾನದಲ್ಲಿ ಹಾರಾಡುವುದು ಎಷ್ಟು ಸುಖಕರವಾದ ಅನುಭವ ಎಂಬ ಅನುಭವವನ್ನು ಪ್ರಯಾಣಿಕರು ಹಂಚಿಕೊಳ್ಳುತ್ತಾರೆ. ಕೇವಲ ಅರ್ಧ ತಾಸಿನಲ್ಲೇ ಗಮ್ಯಸ್ಥಾನ ತಲುಪಿದೆವು; ಛೆ! ಇನ್ನು ಸ್ವಲ್ಪ ದೂರ ಪ್ರಯಾಣಿಸಬೇಕಿತ್ತು ಎಂದೆಲ್ಲ ಆಸೆಗಳನ್ನು ಬಿಚ್ಚಿಡುತ್ತಾರೆ. ಆದರೆ ನಿಮ್ಮನ್ನು ಗಮ್ಯಸ್ಥಾನದತ್ತ ಮುುನ್ನಡೆಸುವ ಪೈಲಟ್ ಗಳು ಎದುರಿಸುವ ತೊಂದರೆಗಳನ್ನು ಎಂದಾದರೂ ಯೋಚಿಸಿ ನೋಡಿರುವೀರಾ?

ವಿಮಾನ ಸಂಚಾರ ಆರಂಭದಿಂದ ಹಿಡಿದು ಗುರಿ ಮುಟ್ಟುವ ವರೆಗೆ ಪೈಲಟ್ ಗಳು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಹಕ್ಕಿಗಳ ಕಾಟ, ಇನ್ನು ಕೆಲವು ಬಾರಿ ಉಗ್ರರ ದಾಳಿ ಹೀಗೆ ಒಂದಲ್ಲ, ಎರಡಲ್ಲ ಅನೇಕ ರೀತಿಯ ತೊಂದರೆಗಳನ್ನು ಬಹಳ ಜಾಣ್ಮೆಯಿಂದ ಎದುರಿಸುತ್ತಾರೆ. ಇತ್ತೀಚೆಗೆ ತಿರುವನಂತಪುರದಿಂದ ದುಬೈಗೆ ಹೊರಟ ವಿಮಾನ ಲ್ಯಾಂಡಿಂಗ್ ವೇಳೆ ಪೈಲಟ್ ತೋರಿರುವ ಸ್ಥೈರ್ಯದಿಂದ ಸ್ವಲ್ಪದರದಿಂದಲೇ ದುರಂತದಿಂದ ಪಾರಾಗುವಂತಾಗಿದೆ.

ಪ್ರಯಾಣಿಕರಿಂದ ಬಚ್ಚಿಟ್ಟ 10 ಭಯಾನಕ ವೈಮಾನಿಕ ಸತ್ಯಗಳು!

ಅನೇಕ ಸಂದರ್ಭಗಳಲ್ಲಿ ಪ್ರಯಾಣಿಕರು ದಿಕ್ಕೆಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಿಮಾನ ಹಾರಾಟದ ವೇಳೆ ಎದುರಾಗುವ ತೊಂದರೆಗಳನ್ನು ಪ್ರಯಾಣಿಕರಿಂದ ಮುಚ್ಚಿಡಲಾಗುತ್ತದೆ. ಈ ಸಂಬಂಧ ಅಮೆರಿಕದ ನಾಸಾದ ಎವಿಯೇಷನ್ ಸೇಫ್ಟಿ ರಿಪೋರ್ಟಿಂಗ್ ಸಿಸ್ಟಂ ಭಯಾನಕ ಸತ್ಯಗಳನ್ನು ಬಿಚ್ಚಿಟ್ಟಿದೆ.

01. ಉಗ್ರರ ದಾಳಿ ಭೀತಿ

01. ಉಗ್ರರ ದಾಳಿ ಭೀತಿ

ಪೈಲಟ್ ನೋರ್ವ ಬಿಚ್ಚಿಟ್ಟ ರಹಸ್ಯದ ಪ್ರಕಾರ ಐದು ವರ್ಷಗಳ ಹಿಂದೆ ಲಾಸ್ ಏಜಂಲೀಸ್ ನಿಂದ ಟೊಕಿಯೋದತ್ತ ಪ್ರಯಾಣ ಬೆಳೆಸಿದಾಗ ಉಗ್ರರ ಬಾಂಬ್ ದಾಳಿ ಬಗ್ಗೆ ಅನಾಮಿಕ ಅನಾಮಿಕ ಕರೆ ಸಂದೇಶ ಬಂದಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ತಮ್ಮದೇ ಆದ ನಿಯಮಾವಳಿಗಳು ಇದ್ದರೂ, ಪ್ರಯಾಣಿಕರಿಗೆ ವಿಷಯ ಮುಟ್ಟಿಸದೆ ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿದ್ದರು. ನಿಸ್ಸಂಶಯವಾಗಿಯೂ ಇಂತಹ ಆತಂಕದ ಪರಿಸ್ಥಿತಿಯಲ್ಲಿ ಪೈಲಟ್ ಗಳ ಮನೋಬಲದ ಪರೀಕ್ಷೆ ನಡೆಯುತ್ತದೆ.

02. ಕೂದಲೆಳೆಯ ಅಂತರದಲ್ಲಿ ತಪ್ಪಿದ ದುರಂತ

02. ಕೂದಲೆಳೆಯ ಅಂತರದಲ್ಲಿ ತಪ್ಪಿದ ದುರಂತ

ಮಗದೊರ್ವ ಪೈಲಟ್ ಹಂಚಿಕೊಂಡಿರುವ ಅನುಭವದ ಪ್ರಕಾರ ವಿಮಾನ ಹಾರಾಡಲು ಎಲ್ಲ ಸಿದ್ಧತೆಯನ್ನು ನಡೆಸಿದ ತಮಗೆ ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ರನ್ವೇ 32 (ಉತ್ತರ) ರಲ್ಲಿ ಗ್ರೀನ್ ಸಿಗ್ನಲ್ ದೊರಕಿತ್ತು. ಇನ್ನೊಂದೆಡೆ ರನ್ವೇ 26ರಲ್ಲೂ (ಪಶ್ಚಿಮ) ವಿಮಾನವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ ಮಾಡಿದ ಎಡವಟ್ಟಿನಿಂದಾಗಿ ಈ ಎರಡು ವಿಮಾನಗಳು ಹಾರಾಟ ಆರಂಭಿಸಿದಾಕ್ಷಣ ಅವಘಡ ಎದುರಾಗಿತ್ತು. ಆದರೆ ಕೂದಲೆಳೆಯ ಅಂತರದಲ್ಲಿ ಭಾರಿ ಅವಘಡವೊಂದು ತಪ್ಪಿ ಹೋಗಿತ್ತು. ಏತನ್ಮಧ್ಯೆ ವಿಮಾನದೊಳಗಿದ್ದ ಪ್ರಯಾಣಿಕರಿಗೆ ಇದ್ಯಾವುದರ ಪರಿವೇ ಇರಲಿಲ್ಲ.

03. ವಿದ್ಯುತ್ ಆಫ್

03. ವಿದ್ಯುತ್ ಆಫ್

ಏರ್ ಬಸ್ 320 ವಿಮಾನದ ಪೈಲಟ್ ಬಹಿರಂಗಪಡಿಸಿರುವ ಘಟನೆ ಪ್ರಕಾರ, ಏಷ್ಯಾ ಖಂಡದಲ್ಲಿ 23,000 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಪವರ್ ವ್ಯವಸ್ಥೆಯು ಏಕಾಏಕಿ ಕೆಟ್ಟು ಹೋಗಿತ್ತು. ಇದರಿಂದಾಗಿ ಕಾಕ್ ಪೀಟ್ ಸೇರಿದಂತೆ ಎಲ್ಲ ಸ್ಕೀನ್ ಗಳಲ್ಲಿ ಕಗ್ಗತ್ತಲು ಆವರಿಸಿತ್ತು. ವಿಮಾನದಲ್ಲಿ ತುರ್ತು ಲೈಟಿಂಗ್ ಸೇರಿದಂತೆ ಹಲವು ರೀತಿ ಮುನ್ನಚ್ಚೆರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದರೂ ವಿದ್ಯುತ್ ತೊಂದರೆ ತಪ್ಪಿಸಲಾಗಲಿಲ್ಲ. ಹಿಂದೆಂದೂ ಇಂತಹ ತೊಂದರೆ ಎದುರಾಗದ ಹಿನ್ನಲೆಯಲ್ಲಿ ಪೈಲಟ್ ಗೆ ಸೂಕ್ತ ತರಬೇತಿಯ ಕೊರತೆ ಕಾಡಿತ್ತು.

04. ಕುಸಿದ ಬಿದ್ದ ವಿಂಡೋ

04. ಕುಸಿದ ಬಿದ್ದ ವಿಂಡೋ

ವಿಮಾನ ಪರಿಚಾರಕರೊಬ್ಬರುವ ವ್ಯಕ್ತಪಡಿಸುವ ಪ್ರಕಾರ, ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಸಹ ಪೈಲಟ್ ಸಮೀಪದ ವಿಂಡೋ ಸಂಪೂರ್ಣವಾಗಿ ನೆಲಕ್ಕೆ ಕುಸಿದು ಬಿದ್ದಿತ್ತು. ಆದರೆ ಯಾವ ಪೈಲಟ್ ಗೂ ಗಾಯಗಳಾಗಿಲ್ಲ.

05. ಹವಾಮಾನ ವೈಪರೀತ್ಯ

05. ಹವಾಮಾನ ವೈಪರೀತ್ಯ

ಮಗದೊಂದು ಸಂದರ್ಭದಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ವಿಮಾನ ಹಾರಾಡುವಾಗ ಹವಾಮಾನ ವೈಪರೀತ್ಯದ ತೊಂದರೆ ಎದುರಾಗಿತ್ತು. ಇಂತಹ ಪ್ರಕ್ಷುಬ್ಧ ವಾತಾವರಣದಿಂದಾಗಿ ಕಾಕ್ ಪೀಟ್ ನಲ್ಲಿ ಉಸಿರಾಡುವುದು ಕಷ್ಟಕರವೆನಿಸಿತ್ತು. ಕೊನೆಗೂ ಈ ಭಯಭೀತ ಪರಿಸ್ಥಿತಿಯಿಂದ ಪಾರಾಗುವಲ್ಲಿ ಪೈಲಟ್ ಗಳು ಯಶಸ್ವಿಯಾಗಿದ್ದರು.

06. ಮಿಂಚು ಬಡಿತ

06. ಮಿಂಚು ಬಡಿತ

ವಿಮಾನಕ್ಕೆ ಮಿಂಚು ಬಡಿಯುವುದು ಸಾಮಾನ್ಯವಾಗಿ ಕಂಡುಬರುವ ಪ್ರವೃತ್ತಿ. ಆದರೆ ಹೀಥ್ರೂ ವಿಮಾನ ನಿಲ್ದಾಣಕ್ಕೆ ಇಳಿಯುವಷ್ಟರಲ್ಲಿ ಪೈಲಟ್ ವಿಂಡ್ ಶೀಲ್ಡ್ ಮುಂಭಾಗಕ್ಕೆ ಮಿಂಚು ಬಡಿತದಿಂದಾಗಿ ಪರಿಸ್ಥಿತಿ ಮೈ ಮೀರಿ ಹೋಗಿತ್ತು. ಕೊನೆಗೂ ಅಪತ್ಕಾಲದಿಂದ ಪಾರಾಗುವಲ್ಲಿ ಪೈಲಟ್ ಗಳು ಯಶಸ್ವಿಯಾಗಿದ್ದರು.

07. ಅಗ್ನಿ ಆಕಸ್ಮಿಕ

07. ಅಗ್ನಿ ಆಕಸ್ಮಿಕ

11,000 ಅಡಿ ಎತ್ತರದಲ್ಲಿ ವಿಮಾನ ಹಾರಾಡುವ ವೇಳೆಗೆ ಕಾಕ್ ಪೀಟ್ ನಲ್ಲಿ ಹಠಾತ್ತಾಗಿ ಹೊಗೆ ಕಾಣಿಸಿಕೊಂಡಿತ್ತು. ತನ್ನ ಎಡಭಾಗವು ಹೊತ್ತಿ ಉರಿಯುತ್ತಿದೆ ಎಂಬುದು ತಿಳಿದಾಗಲೇ ಅಪಾಯದ ಅರಿವಾಗಿತ್ತು ಎಂದು ಪೈಲಟ್ ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾರೆ. ಪ್ಲಾಸ್ಟಿಕ್ ಬಾಟಲಿಯನ್ನು ವಿಂಡ್ ಸ್ಕ್ರೀನ್ ನಿಂದ ಹೊರಗಡೆಯಿಂದ ಬೀಳುವ ನೇರ ಸೂರ್ಯ ಕಿರಣಕ್ಕೆ ತಕ್ಕುದಾಗಿ ಇಟ್ಟಿರುವುದೇ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿತ್ತು.

08. ಜಸ್ಟ್ ಮಿಸ್

08. ಜಸ್ಟ್ ಮಿಸ್

ಪ್ರಯಾಣಿಕರ ಜೊತೆಗೆ ಹಂಚಿಕೊಳ್ಳದ ಅನೇಕ ಘಟನೆಗಳು ವಿಮಾನಗಳಲ್ಲಿ ಆಗುತ್ತಿರುತ್ತವೆ. ಮಗದೋರ್ವ ಪೈಲಟ್ ತಮ್ಮ ಅನುಭವ ಬಿಚ್ಚಿಡುವ ಪ್ರಕಾರ ಒಂದೆರಡು ಭಾರಿ ವಿಮಾನ ನೇರ ಮುಖಾಮುಖಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಹಾಗಿದ್ದರೂ ವಿಮಾನ ಎಷ್ಟು ಸಮೀಪಕ್ಕೆ ತಲುಪಿದ್ದರು ಎಂಬುದನ್ನು ವಿವರಿಸಲು ಈಗಲೂ ನಿರಾಕರಿಸುತ್ತಿದ್ದಾರೆ.

09. ತೀವ್ರವಾದ ಗಾಳಿ

09. ತೀವ್ರವಾದ ಗಾಳಿ

ಪೈಲಟ್ ಗಳಿಗೆ ಎದುರಾಗುವ ಮಗದೊಂದು ತೊಂದರೆ ಏನೆಂದರೆ ಬಲವಾಗಿ ಬೀಸುವ ಗಾಳಿ. ವಿಮಾನ ಲ್ಯಾಂಡಿಂಗ್ ವೇಳೆ ಬೀಸುವ ತೀವ್ರವಾದ ಗಾಳಿಯಿಂದಾಗಿ ವಿಮಾನವೊಂದು ಕೆಳಮುಖವಾಗಿ ಪ್ರತಿ ನಿಮಿಷಕ್ಕೆ 6000 ಅಡಿಗಳಷ್ಟು ವೇಗವಾಗಿ ತಳ್ಳಲ್ಪಡುವ ಸಾಧ್ಯತೆಯಿದೆ.

 10. ಜೆಟ್ ಸ್ಪೋಟ

10. ಜೆಟ್ ಸ್ಪೋಟ

ಇನ್ನು ಟೆಕ್ ಆಫ್ ಮಾಡುವ ಮುನ್ನ ಅತಿ ವೇಗದಲ್ಲಿ ಚಲಿಸುವುದರಿಂದ ಚಕ್ರಗಳು ಬಿಸಿಯಾಗಿ ಸ್ಪೋಟಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಸಹ ಪೈಲಟ್ ಗಳು ರಹಸ್ಯವನ್ನು ಬಿಚ್ಚಿಡುತ್ತಾರೆ.

More from DriveSpark

Article Published On: Wednesday, August 17, 2016, 12:09 [IST]
English summary
Pilots reveal terrifying secrets kept hidden from passengers
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+