ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

Written By:

ಹೌದು, ಸರಿ ಸುಮಾರು ಒಂದು ಕೋಟಿಗೂ ಹೆಚ್ಚು ಜನಕ್ಕೆ ಆಶ್ರಯ ನೀಡುತ್ತಿರುವ ಈ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಟ್ರಾಫಿಕ್ ಸಮಸ್ಯೆ ಜಟಿಲವಾಗುತ್ತಿರುವುದಂತೂ ಸತ್ಯ. ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ.

To Follow DriveSpark On Facebook, Click The Like Button
ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಹೌದು, ಸರಿ ಸುಮಾರು ಒಂದು ಕೋಟಿಗೂ ಹೆಚ್ಚು ಜನಕ್ಕೆ ಆಶ್ರಯ ನೀಡುತ್ತಿರುವ ಈ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಟ್ರಾಫಿಕ್ ಸಮಸ್ಯೆ ಜಟಿಲವಾಗುತ್ತಿರುವುದಂತೂ ಸತ್ಯ. ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಸದ್ಯ ಸರ್ಕಾರವು ಟ್ರಾಫಿಕ್ ತಡೆಗಟ್ಟುವ ನಿಟ್ಟಿನಲ್ಲಿ ಪರ್ಸನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಪೊಡ್ ಟ್ಯಾಕ್ಸಿ) ಎನ್ನುವ ಹೊಚ್ಚ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಯೋಚಿಸಿದೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಈ ಪೊಡ್ ಟ್ಯಾಕ್ಸಿ ಯೋಜನೆಯಿಂದಾಗಿ ಟ್ರಾಫಿಕ್ ದಟ್ಟಣೆಯನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು ಎನ್ನುವ ಭರವಸೆಯೊಂದಿಗೆ ಬಿಬಿಎಂಪಿ ಈ ಬೃಹತ್ ಯೋಜನೆಗೆ ಕೈಹಾಕಿದೆ.

ಪಿಆರ್‌ಟಿ ಅಂದ್ರೆ ಏನು ?

ಪಿಆರ್‌ಟಿ ಎನ್ನುವುದು ಸಾರ್ವಜನಿಕ ಸಾರಿಗೆಯ ಒಂದು ವಿಧಾನವಾಗಿದ್ದು, ಮೆಟ್ರೋ ಶೈಲಿಯಲ್ಲಿ ಮೇಲ್ಗಡೆಯಾಗಿ ಅತಿ ವೇಗದಲ್ಲಿ ಹಾದು ಹೋಗುವ ವೈಯಕ್ತಿಕ ಕ್ಷಿಪ್ರ ಪ್ರಯಾಣ (personal rapid transit) ಸಂಚಾರ ಜಾಲವಾಗಿದೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಬೇಡಿಕೆಗೆ ತಕ್ಕಂತೆ ನಿಗದಿತ ಸ್ಥಳಕ್ಕೆ ಸಂಪರ್ಕವನ್ನು ಪೂರೈಸುವ ವಿಶೇಷತೆಯನ್ನು ಪಡೆದುಕೊಂಡಿರುವ ಈ ಪೊಡ್ ಟ್ಯಾಕ್ಸಿಯಲ್ಲಿ ಗರಿಷ್ಠ ಐದು ಮಂದಿಗೆ ಪ್ರಯಾಣಿಸಬಹುದಾಗಿದೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಈ ಪೊಡ್ ಟ್ಯಾಕ್ಸಿ ಸರಿಸುಮಾರು 60 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಸೌರಶಕ್ತಿಯ ಸಹಾಯದಿಂದ ಕಾರ್ಯ ನಿರ್ವಹಿಸುತ್ತವೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಮೆಟ್ರೋ ಯೋಜನೆಗೆ ಹೋಲಿಸಿದರೆ ಅತ್ಯಂತ ಕಡಿಮೆ ಜಾಗವನ್ನು ಬಳಸುವ ಪೊಡ್ ಟ್ಯಾಕ್ಸಿಯ ನಿರ್ಮಾಣ ಸಮಯ ಕೇವಲ ಆರರಿಂದ ಎಂಟು ತಿಂಗಳುಗಳು ಮಾತ್ರ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಈ ಪೊಡ್ ಟ್ಯಾಕ್ಸಿ ಯೋಜನೆಯಿಂದಾಗಿ ಟ್ರಾಫಿಕ್ ದಟ್ಟಣೆಯನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು ಎನ್ನುವ ಭರವಸೆಯೊಂದಿಗೆ ಬಿಬಿಎಂಪಿ ಈ ಬೃಹತ್ ಯೋಜನೆಗೆ ಕೈಹಾಕಿದೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಈ ಪೊಡ್ ಟ್ಯಾಕ್ಸಿ ಹೆಚ್ಚು ಕಡಿಮೆ ಬೆಂಗಳೂರಿನಲ್ಲಿ 36 ಕಿ.ಮೀ ದೂರ ಕ್ರಮಿಸಬಹುದಾದ ಬೃಹತ್ ಯೋಜನೆಯಾಗಿದ್ದು, ಆರು ಹಂತದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಆರು ಹಂತದ ಯೋಜನೆಯ ವಿವರ :

ಹಂತ 1: ಲೀಲಾ ಪ್ಯಾಲೇಸ್ ಇಂದ ಎಂಜಿ ರೋಡ್ ಮೆಟ್ರೋ ಸ್ಟೇಷನ್ - 4 ಕಿ.ಮೀ

ಹಂತ 2: ಲೀಲಾ ಪ್ಯಾಲೇಸ್ ಇಂದ ಮಾರತ್‌ಹಳ್ಳಿ ಜಂಕ್ಷನ್ - 6 ಕಿ.ಮೀ

ಹಂತ 3: ಮಾರತ್‌ಹಳ್ಳಿ ಜಂಕ್ಷನ್ ಇಂದ EPIP ವೈಟ್‌ಫೀಲ್ಡ್ - 6 ಕಿ.ಮೀ

ಹಂತ 4: ಕೋರಮಂಗಲ ಇಂದ ಎಂಜಿ ರೋಡ್ ಮೆಟ್ರೋ ಸ್ಟೇಷನ್- 7 ಕಿ.ಮೀ

ಹಂತ 5: ಜಯನಗರ 4 ನೇ ಬ್ಲಾಕ್ ಇಂದ ಜೆಪಿ ನಗರ 6ನೇ ಹಂತ - 5.3 ಕಿಮೀ

ಹಂತ 6: ಸೋನಿ ಜಂಕ್ಷನ್ ಇಂದ ಇಂದಿರಾನಗರ ಮೆಟ್ರೋ ನಿಲ್ದಾಣ - 6.7 ಕಿಮೀ

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

"ಈ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದು, ಆರು ಅಥವಾ ಎಂಟು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುತ್ತದೆ. ಕೆಲವು ಕಂಪನಿಗಳು ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ತೋರಿಸಿವೆ" ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನ ಈ ಏರಿಯಾಗಳಿಗೆ 'ಪೊಡ್ ಟ್ಯಾಕ್ಸಿ' ಇನ್ನು ಒಂದು ವರ್ಷದೊಳಗಾಗಿ ಖಂಡಿತ ಬರುತ್ತೆ !!

ಭಾರತದ ಐಟಿ ರಾಜಧಾನಿ ಎಂದೇ ಕರೆಯಲ್ಪಡುವ ಈ ಬೆಂಗಳೂರಿನಲ್ಲಿ ಪರ್ಸನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಪೊಡ್ ಟ್ಯಾಕ್ಸಿ) ಎನ್ನುವ ಹೊಚ್ಚ ಹೊಸ ಯೋಜನೆ ಟ್ರಾಫಿಕ್ ತಗ್ಗಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

English summary
Read in Kannada about BBMP to employ Personal Rapid Transit system (Pod)taxis in bengaluru. Know more about the this project, area and more...
Story first published: Thursday, May 18, 2017, 13:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark