ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಲಂಚ ಭಾರತೀಯ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿದೆ. ಜನರೂ ಸಹ ಲಂಚ ಕೊಟ್ಟರೆ ಯಾವ ಕೆಲಸ ಬೇಕಾದರೂ ಆಗುತ್ತದೆ ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಯಾವುದೇ ಕೆಲಸ ವಿಳಂಬವಾಗುತ್ತಿದ್ದರೆ, ಲಂಚ ಕೊಟ್ಟರೆ ಕೆಲಸ ಸುಲಭವಾಗಿ, ವೇಗವಾಗಿ ಆಗುತ್ತದೆ ಎಂಬ ಭಾವನೆ ಜನರಲ್ಲಿ ಮನೆಮಾಡಿದೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ವಿವಿಧ ರಾಜ್ಯಗಳ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಾರೆ. ದಂಡ ವಿಧಿಸದೇ ಬಿಡಬೇಕಾದರೆ ಲಂಚ ನೀಡಬೇಕೆಂದು ಬೇಡಿಕೆ ಇಡುತ್ತಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದು, ಅವರನ್ನು ಬಿಡಬೇಕೆಂದರೆ ಲಂಚ ತೆಗೆದುಕೊಳ್ಳುವುದು ಕೆಲವು ಸ್ಥಳಗಳಲ್ಲಿ ನಡೆಯುತ್ತಿದ್ದರೂ, ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಲಂಚಕ್ಕೆ ಬೇಡಿಕೆ ಇಡುವುದು ಎಷ್ಟರ ಮಟ್ಟಿಗೆ ಸರಿ?

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಎಲ್ಲಾ ದಾಖಲೆಗಳನ್ನು ಹೊಂದಿ, ಸಂಚಾರಿ ನಿಯಮಗಳನ್ನು ಪಾಲಿಸಿ, ಹೆಲ್ಮೆಟ್ ಅನ್ನು ಧರಿಸಿದ್ದರೂ ಲಂಚಕ್ಕೆ ಬೇಡಿಕೆ ಇಡಲಾಗಿದೆ. ಇದು ಅಚ್ಚರಿಯಾದರೂ ನಿಜ. ಈ ಬಗ್ಗೆ ವೀಡಿಯೊವನ್ನು ಅಪ್‍ಲೋಡ್ ಮಾಡಲಾಗಿದ್ದು, ಈ ವೀಡಿಯೊದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬೈಕುಗಳಲ್ಲಿದ್ದ ಯುವಕರಿಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಈ ವೀಡಿಯೊವನ್ನು ಆ ಯುವಕನ ಹೆಲ್ಮೆಟ್‍‍ನಲ್ಲಿದ್ದ ಕ್ಯಾಮರಾದಿಂದ ರೆಕಾರ್ಡ್ ಮಾಡಲಾಗಿದೆ. ಯುವಕನ ಹೆಲ್ಮೆಟ್‍‍ನಲ್ಲಿ ಕ್ಯಾಮರಾ ಇರುವುದರ ಬಗ್ಗೆ ಅರಿವಿರದ ಆ ಪೊಲೀಸ್ ಅಧಿಕಾರಿ ಯುವಕರಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಬೈಕುಗಳಲ್ಲಿ ಬರುತ್ತಿದ್ದ ಯುವಕರನ್ನು ತಡೆದು ನಿಲ್ಲಿಸಿದ್ದ ಆ ಅಧಿಕಾರಿ ಬೈಕುಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ಸರಿಯಾದ ದಾಖಲೆಗಳನ್ನು ತೋರಿಸಿದ ನಂತರ ಆ ಯುವಕರು ಅಲ್ಲಿಂದ ಹೊರಡಲು ಅಣಿಯಾಗಿದ್ದಾರೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಅಲ್ಲಿಂದ ಹೋಗುತ್ತಿರುವ ಯುವಕರನ್ನು ತಡೆಯುವ ಪೊಲೀಸರು ಎಲ್ಲಾ ಯುವಕರು ಹೆಲ್ಮೆಟ್ ಧರಿಸಿದ್ದಾರೆಯೇ ಎಂದು ಪರೀಕ್ಷಿಸುತ್ತಾರೆ. ಅವರ ಬೈಕುಗಳಲ್ಲಿ ಯಾವುದಾದರೂ ಮಾಡಿಫೈಗಳನ್ನು ಮಾಡಲಾಗಿದೆಯೇ ಎಂಬುದನ್ನು ಸಹ ಪರಿಶೀಲಿಸುತ್ತಾರೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಎಲ್ಲವೂ ಸರಿಯಾಗಿರುವುದನ್ನು ಖಚಿತ ಪಡಿಸಿಕೊಂಡ ನಂತರ ಆ ಪೊಲೀಸ್ ಎಷ್ಟು ಜನರಿದ್ದಾರೆ ಎಂದು ಎಣಿಸುತ್ತಾರೆ. ಐದು ಜನರಿದ್ದಾರೆ ಎಂದು ತಿಳಿದ ನಂತರ ಪ್ರತಿಯೊಬ್ಬರಿಂದ ತಲಾ ರೂ.100 ನೀಡುವಂತೆ ಹೇಳುತ್ತಾರೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಐದು ಜನರಿರುವ ನಿಮಗೆ ತಲಾ ರೂ.100 ನೀಡುವುದು ದೊಡ್ಡ ವಿಷಯವಲ್ಲ. ರೂ.100 ಅಂತಹ ದೊಡ್ಡ ಮೊತ್ತವೇನಲ್ಲ ಎಂದು ಹೇಳುತ್ತಾರೆ. ಕೆಲ ಸಮಯದ ಮಾತುಕತೆಯ ನಂತರ ಆ ಯುವಕರು ಆ ಅಧಿಕಾರಿಗೆ ರೂ.100ರ ನೋಟನ್ನು ಕೈಗಿಟ್ಟು ಅಲ್ಲಿಂದ ಹೊರಡುತ್ತಾರೆ. ಈ ಪೂರ್ತಿಯಾದ ಮಾತುಕತೆಯು ತಮಿಳಿನಲ್ಲಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಎಲ್ಲಾ ದಾಖಲೆಗಳಿದ್ದರೂ, ಸಂಚಾರಿ ನಿಯಮಗಳನ್ನು ಪಾಲಿಸಿದ್ದರೂ ಸಹ, ಆ ಯುವಕರ ಗುಂಪು ಲಂಚವನ್ನು ನೀಡಬೇಕಾಯಿತು. ಲಂಚದ ಹಣವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಆ ಪೊಲೀಸ್ ಅಧಿಕಾರಿಯು ಲಂಚ ನೀಡಲು ಯುವಕರ ಮನವೊಲಿಸಿದ್ದನ್ನು ಕಾಣಬಹುದು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಲಂಚ ನೀಡದೇ ಆ ಪೊಲೀಸ್ ಅಧಿಕಾರಿ ಅಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ತಿಳಿದ ಆ ಯುವಕರ ಗುಂಪು ಲಂಚ ನೀಡಿ ಅಲ್ಲಿಂದ ಹೊರಟಿದೆ. ಪೊಲೀಸ್ ಅಧಿಕಾರಿಯು ಯುವಕರ ಗುಂಪಿನೊಂದಿಗೆ ಸ್ನೇಹಪರರಾಗಿ ಮಾತನಾಡಿದ್ದರೂ ಸಹ, ಈ ಕೃತ್ಯವು ಕಾನೂನುಬಾಹಿರವಾಗಿದ್ದು, ವಾಹನ ಚಾಲಕರಿಗೆ ಕಿರುಕುಳ ನೀಡುವ ಒಂದು ಮಾರ್ಗವಾಗಿದೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ರಾಜ್ಯಗಳ ಗಡಿಭಾಗದಲ್ಲಿ ವಾಣಿಜ್ಯ ವಾಹನ ಚಾಲಕರು ಯಾವುದೇ ತೊಂದರೆಗಳಿಲ್ಲದೆ ಹಾದುಹೋಗುವುದಕ್ಕಾಗಿ ಲಂಚ ನೀಡುವುದು ಸಾಮಾನ್ಯವಾದ ಸಂಗತಿಯಾಗಿದೆ. ಭಾರತದ ಬಹುತೇಕ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೆಪ್ಟೆಂಬರ್ 1ರಿಂದ ತಿದ್ದುಪಡಿ ಮಾಡಿದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಿವೆ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಇದರನ್ವಯ ವಿಧಿಸಲಾಗುವ ಭಾರೀ ಪ್ರಮಾಣದ ದಂಡವನ್ನು ವಿರೋಧಿಸಿದ ಹಲವು ರಾಜ್ಯಗಳು ಹೊಸ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸಿಲ್ಲ. ದಂಡದ ಮೊತ್ತ ಹೆಚ್ಚಾದ ಕಾರಣ ಪೊಲೀಸರು ಲಂಚಕ್ಕಾಗಿ ವಾಹನ ಚಾಲಕರನ್ನು ಪೀಡಿಸಬಹುದೆಂಬುದು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯಗಳ ಅಭಿಪ್ರಾಯ.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಸಿಎನ್ಎನ್ ಐಬಿಎನ್ ನಡೆಸಿದ ಸ್ಟಿಂಗ್ ಆಪರೇಷನ್‍‍ನಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್‍ ನ್ಯಾಯಾಲಯದ ಆಡಳಿತ ವಿಭಾಗದ ಅಧಿಕಾರಿಗಳು ದಂಡವನ್ನು ಕಡಿಮೆ ಮಾಡಲು ಲಂಚ ಪಡೆಯುತ್ತಿದ್ದ ಹಗರಣವು ಬಯಲಿಗೆ ಬಂದಿತ್ತು.

ಎಲ್ಲಾ ದಾಖಲೆಗಳಿದ್ದರೂ ಲಂಚಕ್ಕೆ ಬೇಡಿಕೆಯಿಟ್ಟ ಪೊಲೀಸಪ್ಪ..!

ಇಲ್ಲಿ ಗಮನಿಸ ಬೇಕಾದ ಸಂಗತಿಯೆಂದರೆ ಲಂಚ ಕೊಡುವುದು ಸಹ ಅಪರಾಧ. ಆದ ಕಾರಣ ಯಾರೇ ಆಗಲಿ, ಲಂಚ ಕೊಡಬಾರದು. ಯಾರಾದರೂ ಲಂಚ ಕೇಳಿದರೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡುವುದು ಒಳ್ಳೆಯದು.

Most Read Articles

Kannada
English summary
Cop demands bribe from bikers despite them having all documents - Read in Kannada
Story first published: Saturday, October 5, 2019, 16:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more