ಪಕ್ಕದ ಮನೆಯ ಮುಂದೆ ಕಾರು ಪಾರ್ಕ್‌ ಮಾಡಿದವನ ಗ್ರಹಚಾರ ಬಿಡಿಸಿದ್ದು ಹೇಗೆ?: ನೀವೂ ಈ ತಪ್ಪು ಮಾಡದಿರಿ

ನಗರ ಪ್ರದೇಶದಲ್ಲಿ ಪಾರ್ಕಿಂಗ್‌ ಒಂದು ಬಹುದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು. ಯಾಕೆಂದರೆ ನಗರಗಳಲ್ಲಿ ಸ್ಥಳಾವಕಾಶ ಕಮ್ಮಿ ಇರುವುದರಿಂದ ಎಲ್ಲರಿಗೂ ತಮ್ಮ ತಮ್ಮ ವಾಹನಗಳನ್ನು ಸುರಕ್ಷಿತವಾಗಿ ಪಾರ್ಕ್‌ ಮಾಡಲು ಆಗುವುದಿಲ್ಲ. ಇಂತಹ ಸಂಧರ್ಭದಲ್ಲಿ ಎಲ್ಲಿ ಜಾಗ ಇದೆಯೋ ಅಲ್ಲಿ ಪಾರ್ಕ್‌ ಮಾಡುವುದು ಹಲವರ ವಾಡಿಕೆ.

ಈ ಅಭ್ಯಾಸ ನಿಮ್ಮಲ್ಲಿ ಹಲವರಿಗಿರಬಹುದು. ಇನ್ನು ಮುಂದೆ ಈ ರೀತಿ ವಾಹನಗಳನ್ನು ಎಲ್ಲಿ ಬೇಕೋ ಅಲ್ಲಿ ಪಾರ್ಕ್‌ ಮಾಡುವುದಕ್ಕೂ ಮೊದಲು ಮತ್ತೊಮ್ಮೆ ಆಲೋಚಿಸಿ. ಯಾಕೆಂದರೆ ಈ ರೀತಿ ಜಾಗ ಖಾಲಿ ಇದೆ ಎಂದು ಪಕ್ಕದ ಮನೆಯ ಮುಂದೆ ತಮ್ಮ ಕಾರನ್ನು ಪಾರ್ಕ್‌ ಮಾಡಿದ ವ್ಯಕ್ತಿಗೆ ಪೊಲೀಸರು ಬಂದು ಫೈನ್‌ ಹಾಕಿರುವ ಘಟನೆಯೊಂದು ನಡೆದಿದೆ.

Police Fines Against A Car Owner

ಹೌದು, ಸ್ಥಳಾವಕಾಶ ಇದೆ ಎಂದು ಪಕ್ಕದ ಮನೆಯವರ ಗೇಟ್‌ ಮುಂದೆ ತನ್ನ ಕಾರನ್ನು ಪಾರ್ಕ್‌ ಮಾಡಿದ ವ್ಯಕ್ತಿಯ ವಿರುದ್ದ ಮನೆಯವರು ದೂರು ನೀಡಿದ ಘಟನೆ ತಮಿಳು ನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಹೌದು, ಕೇಳಲು ವಿಚಿತ್ರವಾದರೂ ಇದು ನಿಜವಾಗಿಯೂ ನಡೆದಿರುವ ಘಟನೆ ಎಂದರೆ ನೀವು ನಂಬಲೇ ಬೇಕು.

ಇನ್ನು ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಇನ್ನೊಬ್ಬರ ಮನೆಯ ಮುಂದೆ ಕಾರು ಪಾರ್ಕ್‌ ಮಾಡಿ ಅವರಿಗೆ ಅವ್ಯವಸ್ಥೆಯನ್ನು ಉಂಟು ಮಾಡಿದ ಕಾರು ಮಾಲೀಕನ (Car Owner) ವಿರುದ್ದ ದಂಡ ವಿಧಿಸಿದ್ದಾರೆ. ಪಕ್ಕದ ಮನೆಯ ಮುಂದೆ ಕಾರು ನಿಲ್ಲಿಸಿದ ತಪ್ಪಿಗೆ ಕಾರಿನ ಮಾಲೀಕನಿಗೆ ಸುಮಾರು ಐನೂರು ರೂಗಳನ್ನು ದಂಡವಾಗಿ ವಿಧಿಸಿದ್ದಾರೆ.

Police Fines Against A Car Owner

ಚೆನ್ನೈ ಪೊಲೀಸರ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣ ಮಾತ್ರದಲ್ಲಿ ಹರಿದಾಡಿ ವೈರಲ್‌ ಆಗಿದ್ದು ಈ ಕುರಿತು ಹಲವರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಚೆನ್ನೈ ಪೊಲೀಸರ ಈ ಕ್ರಮವನ್ನು ವಿರೋಧಿಸಿದ್ದಾರೆ. ಒಟ್ಟಾರೆಯಾಗಿ ಈ ಘಟನೆಯ ಕುರಿತು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೇರೊಂದು ವ್ಯಕ್ತಿಯ ಮನೆಯ ಪಾರ್ಕಿಂಗ್‌ ಸ್ಥಳದಲ್ಲಿ ತಮ್ಮ ವಾಹನಗಳನ್ನು ಪಾರ್ಕ್‌ ಮಾಡುವ ಮೊದಲು ಹಲವು ವಿಷಯಗಳನ್ನು ಗಮನಿಸಬೇಕು. ಇದರಲ್ಲಿ ಹಲವಾರು ವಿಷಯಗಳಿರುತ್ತವೆ. ಗೇಟ್ ಮುಂದೆ ಪಾರ್ಕ್‌ ಮಾಡುವಾಗ ಆ ಮನೆಯ ಮಾಲೀಕರಿಗೆ ತಮ್ಮ ವಾಹನಗಳನ್ನು ಹೊರ ತರಲು ಬಹಳ ಕಷ್ಟಪಡಬೇಕಾಗುತ್ತದೆ ಎಂಬುದು ಮೊದಲ ವಿಷಯ.

ಇನ್ನು ಇತ್ತೀಚೆಗೆ ಪೊಲೀಸರು ಸಹ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ನೆರವನ್ನು ಸಹ ಪಡೆಯುತ್ತಿದ್ದಾರೆ. ಹಾಗಾಗಿ ಸಂಚಾರಿ ನಿಯಮಗಳನ್ನು ತಪ್ಪದೇ ಪ್ರತಿ ದಿನ ಪಾಲಿಸಿಕೊಂಡು ಹೋಗುವುದು ಒಳ್ಳೆಯ ಕೆಲಸ ಎಂಬುವುದು ನಮ್ಮ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, July 22, 2023, 11:52 [IST]
English summary
Police fines against a car owner who parked infront of neighbors house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+