ಖಾಕಿ ಕೆಂಗಣ್ಣಿಗೆ ಗುರಿಯಾದ ಗೂಗಲ್ ಡ್ರೈವರ್ ಲೆಸ್ ಕಾರು
ನಾವೀನ್ಯತೆಯ ತಂತ್ರಜ್ಞಾನದ ಹುಡುಕಾಟದಲ್ಲಿರುವ ಗೂಗಲ್ ಡ್ರೈವರ್ ಲೆಸ್ ಕಾರು ನಿರಂತರ ಅಧ್ಯಯನ ಹಾಗೂ ಟೆಸ್ಟಿಂಗ್ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ. ಹಾಗಿರುವಾಗ ಗೂಗಲ್ ಚಾಲಕರಹಿತ ಕಾರು ಪೊಲೀಸ್ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
Also Read: ಗೂಗಲ್ ಟಾಪ್ 10 ಟ್ರೆಂಡಿಂಗ್ ಕಾರು ಸಂಸ್ಥೆಗಳು
ಸಾರ್ವಜನಿಕ ರಸ್ತೆ ನಿಯಮ ಉಲ್ಲಂಘನೆಗಾಗಿ ಗೂಗಲ್ ಸೆಲ್ಪ್ ಡ್ರೈವಿಂಗ್ ಕಾರು ಖಾಕಿ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ವಿಸೃತ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಅಮೆರಿಕದ ಸಾರ್ವಜನಿಕ ರಸ್ತೆಯಲ್ಲಿ ಟೆಸ್ಟಿಂಗ್ ನಡೆಸುತ್ತಿರುವ ಗೂಗಲ್ ಸೆಲ್ಪ್ ಡ್ರೈವಿಂಗ್ ಕಾರು ನಿಯಮಿತ ವೇಗಕ್ಕಿಂತಲೂ ಕಡಿಮೆ ವೇಗದಲ್ಲಿ ಸಂಚರಿಸಿರುವುದೇ ಮೌಂಟೆನ್ ವ್ಯೂ ಪೊಲೀಸ್ ಇಲಾಖೆಯು ಸೆರೆ ಹಿಡಿಯಲು ಕಾರಣವಾಗಿದೆ.

ಅಲ್ಲಿನ ನಿಯಮ ಪ್ರಕಾರ ಗಂಟೆಗೆ 56 ಕೀ.ಮೀ. ವೇಗದಲ್ಲಿ ಸಂಚರಿಸಬೇಕಿತ್ತು. ಆದರೆ ಗೂಗಲ್ ಸೆಲ್ಪ್ ಡ್ರೈವಿಂಗ್ ಕಾರು ಗಂಟೆಗೆ 40 ಕೀ.ಮೀ. ವೇಗದಲ್ಲಷ್ಟೇ ಚಲಿಸಿತ್ತು.

ಇದರ ಪರಿಣಾಮ ಹಿಂಬದಿಯಲ್ಲಿ ಭಾರಿ ವಾಹನ ದಟ್ಟಣೆ ಸೃಷ್ಟಿಯಾಗಿತ್ತು ಎಂಬುದನ್ನು ಟ್ರಾಫಿಕ್ ಪೊಲೀಸರು ವಿವರಿಸುತ್ತಾರೆ.

ಕ್ಯಾಲಿಫೋರ್ನಿಯಾ ವೆಹಿಕಲ್ ಕೋಡ್ ಪ್ರಕಾರ ಸೆಲ್ಪ್ ಡ್ರೈವ್ ಕಾರು ಆದರೂ ಗಂಟೆಗೆ 56 ಕೀ.ಮೀ. ವೇಗ ಕಾಪಾಡಿಕೊಂಡಲ್ಲಿ ರಸ್ತೆಯಲ್ಲಿ ಚಲಿಸಬಹುದಾಗಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಗೂಗಲ್, ಸೆಲ್ಪ್ ಡ್ರೈವ್ ಗರಿಷ್ಠ 40 ಕೀ.ಮೀ. ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆಯ ಸಮಸ್ಯೆಗೆ ಈಡಾಗಲಿದೆಯೆಂದು ನಿರೀಕ್ಷೆ ಮಾಡಿರಲಿಲ್ಲ ಎಂದಿದೆ.

ಈಗಾಗಲೇ 1.2 ಮಿಲಿಯನ್ ಮೈಲುಗಳಷ್ಟು ಹಾದಿಯನ್ನು ಕ್ರಮಿಸಿರುವ ಗೂಗಲ್ ಸೆಲ್ಪ್ ಡ್ರೈವಿಂಗ್ ಕಾರುಗಳು ಎಂದೂ ಟ್ರಾಫಿಕ್ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿಲ್ಲ ಎಂಬುದು ಸಹ ಇಲ್ಲಿ ಮಹತ್ವ ಗಿಟ್ಟಿಸಿಕೊಳ್ಳುತ್ತದೆ.

ಸ್ಟೀರಿಂಗ್, ಬ್ರೇಕ್ ಇಲ್ಲದ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು ಮುಂದಕ್ಕೆ ಓದಿ


Click it and Unblock the Notifications








