ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಸದ್ಯಕ್ಕೆ ಮಾರಾಟ ಮಾಡುತ್ತಿರುವ ಬಹುತೇಕ ಎಲ್ಲಾ ಕಾರುಗಳಲ್ಲಿ ಅಪಾಯದ ಲೈಟ್ ಗಳನ್ನು ನೀಡಲಾಗುತ್ತದೆ. ಈ ಲೈಟ್ ಗಳು ಬಹುತೇಕ ಎಲ್ಲಾ ಕಾರುಗಳಲ್ಲಿ ಒಂದೇ ರೀತಿಯಲ್ಲಿರುತ್ತವೆ.

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಆದರೆ ಕೆಲವರಿಗೆ ಈ ಲೈಟ್ ಗಳನ್ನು ಹೇಗೆ ಬಳಸಬೇಕೆಂದು ಗೊತ್ತಿಲ್ಲ. ಅವುಗಳನ್ನು ತಪ್ಪು ಸ್ಥಳಗಳಲ್ಲಿ ಬಳಸುವವರೇ ಹೆಚ್ಚು. ಇನ್ನು ಮುಂದೆ ತಮಗಿಷ್ಟ ಬಂದಂತೆ ಅಪಾಯದ ಲೈಟ್ ಗಳನ್ನು ಬಳಸುವವರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮೇಘಾಲಯದ ಶಿಲ್ಲಾಂಗ್ ನಗರದ ಪೊಲೀಸರು ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಅಪಾಯದ ದೀಪಗಳು ಯಾವುವು?

ವಾಹನಗಳ ಎರಡೂ ಬದಿಯಲ್ಲಿರುವ ಇಂಡಿಕೇಟರ್ ಗಳು ಏಕಕಾಲದಲ್ಲಿ ಆನ್ ಆಗುವುದನ್ನೇ ಅಪಾಯದ ದೀಪಗಳು ಅಥವಾ ಪಾರ್ಕಿಂಗ್ ಲೈಟ್ ಗಳು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಮಾರಾಟವಾಗುವ ಎಲ್ಲಾ ನಾಲ್ಕು ಚಕ್ರದ ವಾಹನಗಳಲ್ಲಿ ಹಾಗೂ ಟ್ರಕ್‌ಗಳಂತಹ ಭಾರೀ ವಾಹನಗಳಲ್ಲಿ ಇವುಗಳನ್ನು ನೀಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಇವುಗಳನ್ನು ಈಗ ಬೈಕುಗಳಲ್ಲಿಯೂ ನೀಡಲಾಗುತ್ತಿದೆ. ವಾಹನಗಳ ಡ್ಯಾಶ್‌ಬೋರ್ಡ್‌ನಲ್ಲಿರುವ ಬಟನ್‌ ಮೂಲಕ ಇವುಗಳನ್ನು ಆನ್ ಮಾಡಬಹುದು. ಸುಖಾ ಸುಮ್ಮನೆ ಈ ಲೈಟ್ ಗಳನ್ನು ಆನ್ ಮಾಡಿ ದುರುಪಯೋಗಪಡಿಸಿಕೊಳ್ಳುವ ವಾಹನ ಚಾಲಕರಿಗೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177ರ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಶಿಲ್ಲಾಂಗ್ ಪೊಲೀಸರು ಹೇಳಿದ್ದಾರೆ.

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಅಪಾಯದ ದೀಪಗಳನ್ನು ಯಾವಾಗ ಬಳಸಬೇಕು?

ಅಪಾಯದ ದೀಪಗಳನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ವಾಹನಗಳಲ್ಲಿ ಏನಾದರೂ ಸಮಸ್ಯೆ ಕಂಡು ಬಂದು ವಾಹನವನ್ನು ತಕ್ಷಣಕ್ಕೆ ನಿಲ್ಲಿಸುವ ಸಂದರ್ಭ ಎದುರಾದಾಗ ಹಿಂದೆ ಬರುತ್ತಿರುವ ವಾಹನ ಸವಾರರಿಗೆ ಸಂದೇಶ ನೀಡಲು ಈ ಲೈಟ್ ಗಳನ್ನು ಬಳಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಅಪಘಾತದ ಸಂದರ್ಭದಲ್ಲಿ, ವಾಹನವು ಸುರಕ್ಷಿತ ಸ್ಥಳಕ್ಕೆ ಹೋಗಲು ಸಾಧ್ಯವಾಗದಿದ್ದರೆ ಇತರ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲು ಅಪಾಯದ ದೀಪಗಳನ್ನು ಬಳಸಲಾಗುತ್ತದೆ. ವಾಹನಗಳು ಕೆಟ್ಟು ರಸ್ತೆಯ ಮಧ್ಯದಲ್ಲಿ ನಿಂತಿರುವಾಗ ಇತರ ವಾಹನ ಸವಾರರಿಗೆ ಎಚ್ಚರಿಕೆ ನೀಡಲು ಈ ಲೈಟ್ ಗಳನ್ನು ಬಳಸಲಾಗುತ್ತದೆ.

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ತುರ್ತು ಪರಿಸ್ಥಿತಿ ಇಲ್ಲದಿದ್ದಾಗ ಅಪಾಯದ ದೀಪಗಳನ್ನು ಬಳಸಿದರೆ ಏನಾಗುತ್ತದೆ?

ಅಪಾಯಕಾರಿ ದೀಪಗಳನ್ನು ಅನಗತ್ಯವಾಗಿ ಬಳಸಿದರೆ, ಅದರಿಂದ ಹಿಂದೆ ಬರುತ್ತಿರುವ ವಾಹನ ಚಾಲಕರಿಗೆ ಗೊಂದಲವುಂಟಾಗುತ್ತದೆ. ಈ ಗೊಂದಲವು ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ಈ ಕಾರಣಕ್ಕಾಗಿಯೇ ಶಿಲ್ಲಾಂಗ್ ನಗರ ಪೊಲೀಸರು ಅನಗತ್ಯವಾಗಿ ಪಾಕಿಂಗ್ ಲೈಟ್ ಅಥವಾ ಅಪಾಯಕಾರಿ ದೀಪಗಳನ್ನು ಬಳಸುವವರಿಗೆ ದಂಡ ವಿಧಿಸಲು ಮುಂದಾಗಿದ್ದಾರೆ.

ಸುಖಾ ಸುಮ್ಮನೆ ಪಾರ್ಕಿಂಗ್ ಲೈಟ್ ಆನ್ ಮಾಡಿದರೆ ಬೀಳಲಿದೆ ದಂಡ

ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ನಿರ್ಲಕ್ಷ್ಯದಿಂದ ವಾಹನಗಳನ್ನು ಚಾಲನೆ ಮಾಡುತ್ತಿರುವುದರಿಂದ ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಅಪಘಾತಗಳಿಗೆ ಕಾರಣವಾಗುವ ಉಲ್ಲಂಘನೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Most Read Articles

Kannada
English summary
Police to impose fine for using hazard lights at wrong place. Read in Kannada.
Story first published: Friday, October 23, 2020, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X