ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ವಾಹನಗಳಿಗೆ ಯಾವುದೇ ರೀತಿಯ ಮಾಡಿಫೈಗಳನ್ನು ಮಾಡಿದರೂ ಅವುಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಕಾನೂನು ಬಾಹಿರವಾಗಿ ಮಾಡಿಫೈಗೊಂಡ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ಬಗ್ಗೆ ವರದಿಗಳಾಗಿದ್ದವು.

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಹೀಗೆ ಮಾಡಿಫೈಗೊಂಡ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನೂ ಕೆಲವು ಪ್ರಕರಣಗಳಲ್ಲಿ ಭಾರೀ ಪ್ರಮಾಣದ ದಂಡ ವಿಧಿಸಲಾಗಿತ್ತು. ಮಾಡಿಫೈ ಜೊತೆಗೆ ಸನ್ ಫಿಲ್ಮ್ ಹೊಂದಿರುವ ವಾಹನಗಳಿಗೂ ದಂಡ ವಿಧಿಸಲಾಗುತ್ತದೆ. ತಮ್ಮ ವಾಹನಗಳಿಗೆ ಮಾತ್ರ ದಂಡ ವಿಧಿಸಿ, ಸನ್ ಫಿಲ್ಮ್ ಹೊಂದಿದ್ದ ಪೊಲೀಸರ ವಾಹನಗಳಿಗೆ ದಂಡ ವಿಧಿಸದೇ ಇರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಈ ಹಿನ್ನೆಲೆಯಲ್ಲಿ ಕೇರಳದ ಡಿಜಿಪಿ ಲೋಗನಾಥ ಬಿಹಿರಾ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ಪೊಲೀಸ್ ವಾಹನಗಳಲ್ಲಿರುವ ಸನ್ ಫಿಲ್ಮ್, ವಿಂಡೋ ಕರ್ಟೆನ್ ಹಾಗೂ ಬುಲ್ ಬಾರ್‌ಗಳನ್ನು ತೆಗೆದುಹಾಕಬೇಕೆಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಕೇರಳ ರಾಜ್ಯದ ಕೆಲವು ಪೊಲೀಸ್ ವಾಹನಗಳು ಸನ್ ಫಿಲ್ಮ್, ವಿಂಡೋ ಕರ್ಟೆನ್ ಹಾಗೂ ಬುಲ್ ಬಾರ್‌ಗಳನ್ನು ಹೊಂದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಾರಿಗೆ ಇಲಾಖೆಯು ಅವುಗಳ ಬಳಕೆಯನ್ನು ನಿಷೇಧಿಸಿರುವುದರಿಂದ ಈ ಸಾಧನಗಳನ್ನು ಬಳಸುವುದು ಕಾನೂನುಬಾಹಿರವೆಂದು ಹೇಳಲಾಗಿದೆ.

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ನಿಷೇಧದ ನಂತರವೂ ಕೆಲವು ಸರ್ಕಾರಿ ವಾಹನಗಳು ಈ ಸಾಧನಗಳನ್ನು ಬಳಸುತ್ತಿದ್ದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸನ್ ಫಿಲ್ಮ್, ವಿಂಡೋ ಕರ್ಟೆನ್ ಹಾಗೂ ಬುಲ್ ಬಾರ್‌ಗಳನ್ನು ಸರ್ಕಾರಿ ವಾಹನಗಳಿಂದ ತೆಗೆದುಹಾಕುವಂತೆ ಆದೇಶ ನೀಡಿತ್ತು. ಆದರೂ ಕೆಲವು ಪೊಲೀಸ್ ವಾಹನಗಳಲ್ಲಿ ಈ ಸಾಧನಗಳನ್ನು ಬಳಸುತ್ತಿದ್ದ ಹಿನ್ನೆಲೆಯಲ್ಲಿ ಕೇರಳ ಡಿಜಿಪಿ ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ತಮ್ಮ ಪೊಲೀಸ್ ಠಾಣೆಯಲ್ಲಿರುವ ವಾಹನಗಳಲ್ಲಿ ಈ ಸಾಧನಗಳನ್ನು ಬಳಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಸಾಧನಗಳನ್ನು ಬಳಸುತ್ತಿದ್ದರೆ ಅವುಗಳನ್ನು ತೆಗೆದುಹಾಕಬೇಕೆಂದು ಸಹ ಸೂಚಿಸಲಾಗಿದೆ. ಈ ರೀತಿಯ ಸಾಧನಗಳನ್ನು ಹೊಂದಿರುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಾರೆ.

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಆದರೆ ಪೊಲೀಸ್ ವಾಹನಗಳು ನಿಯಮಗಳನ್ನು ಉಲ್ಲಂಘಿಸಿ ನಿಷೇಧಿತ ಸಾಧನಗಳನ್ನು ಬಳಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕಾರಣಕ್ಕೆ ಕೇರಳ ಡಿಜಿಪಿ ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸುತ್ತೋಲೆಯ ನಂತರ ಪೊಲೀಸ್ ವಾಹನಗಳಲ್ಲಿರುವ ನಿಷೇಧಿತ ಸಾಧನಗಳನ್ನು ತೆಗೆಯುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಕಾರು ಚಾಲಕರು ಕಾರಿನೊಳಗಿನ ತಾಪಮಾನವನ್ನು ಕಡಿಮೆ ಮಾಡಲು ಸನ್ ಫಿಲ್ಮ್‌ಗಳನ್ನು ಅಂಟಿಸುವುದು ಹಾಗೂ ವಿಂಡೋಗಳ ಸುತ್ತಲೂ ಕರ್ಟೆನ್ ಗಳನ್ನು ಅಳವಡಿಸುವುದನ್ನು ಮಾಡುತ್ತಾರೆ. ಆದರೆ ಇದರಿಂದಾಗಿ ಕಾರಿನೊಳಗೆ ಅಪರಾಧ ಚಟುವಟಿಕೆಗಳು ನಡೆಯುತ್ತವೆ ಎಂಬ ಕಾರಣಕ್ಕೆ ಅವುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಮತ್ತೊಂದೆಡೆ ಅಪಘಾತಗಳಿಂದ ವಾಹನಗಳನ್ನು ರಕ್ಷಿಸಿಕೊಳ್ಳಲು ಅನೇಕ ಜನರು ಕಾರುಗಳ ಮುಂಭಾಗದಲ್ಲಿ ಬುಲ್ ಬಾರ್‌ಗಳನ್ನು ಅಳವಡಿಸುತ್ತಾರೆ. ಹೊಸ ಸುರಕ್ಷತಾ ನಿಯಮಗಳನ್ವಯ ಕಾರು ತಯಾರಕ ಕಂಪನಿಗಳು ಕಾರಿನೊಳಗೆ ಇರುವ ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಪಾದಚಾರಿಗಳ ಸುರಕ್ಷತೆಗೂ ಆದ್ಯತೆ ನೀಡುತ್ತಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೊಲೀಸ್ ವಾಹನಗಳಿಗೂ ಅನ್ವಯವಾಗಲಿವೆ ಈ ನಿಯಮಗಳು

ಈ ಕಾರಣಕ್ಕೆ ಕಾರುಗಳ ಮುಂಭಾಗವನ್ನು ಅಪಘಾತದ ಸಂದರ್ಭದಲ್ಲಿ ಪಾದಚಾರಿಗಳನ್ನು ಗಾಯದಿಂದ ರಕ್ಷಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಬುಲ್ ಬಾರ್‌ಗಳನ್ನು ಅಳವಡಿಸಿದರೆ ಅವುಗಳು ಪಾದಚಾರಿಗಳಿಗೆ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ. ಈ ಕಾರಣಕ್ಕೆ ಭಾರತದಲ್ಲಿ ವಾಹನಗಳಲ್ಲಿ ಬುಲ್ ಬಾರ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಚಿತ್ರಗಳನ್ನು ಕೇರಳ ಪೊಲೀಸ್ ಡ್ರೈವರ್ಸ್'ನಿಂದ ಪಡೆಯಲಾಗಿದೆ.

Most Read Articles

Kannada
English summary
Police vehicles not to have sun films and bull bars says Kerala DGP circular. Read in Kannada.
Story first published: Thursday, December 17, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X