ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಯಾವುದೇ ಕಾರುಗಳಾಗಿರಲಿ ಆ ಕಾರುಗಳನ್ನು ಪತ್ತೆ ಹಚ್ಚುವುದು ಆ ಕಾರುಗಳ ನಂಬರ್ ಪ್ಲೇಟ್‍‍ನಿಂದ. ಯಾವುದೇ ಕಾರಿಗೆ ಇನ್ನೊಂದು ಕಾರಿನ ನಂಬರ್ ಅನ್ನು ನೀಡಲಾಗುವುದಿಲ್ಲ. ಬೇರೆ ಬೇರೆ ಕಾರುಗಳು ಬೇರೆ ಬೇರೆ ನಂಬರ್ ಹೊಂದಿರುತ್ತವೆ.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಆದರೆ ಎರಡು ಬೇರೆ ಬೇರೆ ಕಾರುಗಳು ಒಂದೇ ನಂಬರ್ ಪ್ಲೇಟ್ ಹೊಂದಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಎರಡೂ ಕಾರುಗಳು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರುಗಳು ಎಂಬುದು ವಿಶೇಷ. ಈ ವಂಚನೆಯನ್ನು ಪತ್ತೆ ಹಚ್ಚಿರುವ ಆರ್‍‍ಟಿ‍ಒ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ತನಿಖೆಯನ್ನು ಆರಂಭಿಸಿದ್ದಾರೆ.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಈ ತನಿಖೆಯಲ್ಲಿ ಈ ಕಾರಿನ ನಂಬರ್ ಪ್ಲೇಟ್ ನಿಜವೆಂಬುದು ಕಂಡು ಬಂದಿದೆ. ಇದರ ಜೊತೆಗೆ ಇದೇ ನಂಬರ್ ಪ್ಲೇಟ್ ಹೊಂದಿದ್ದ ಮತ್ತೊಂದು ಕಾರ್ ಅನ್ನು ಸಹ ಪತ್ತೆ ಹಚ್ಚಿದ್ದಾರೆ. ಸಿಸಿಟಿವಿಯಲ್ಲಿ ಈ ಕಾರಿನ ಚಲನವಲನಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತನಿಖೆಯ ನಂತರ ಈ ಕಾರು ಬೆಂಗಳೂರಿನ ಕೆಂಗೇರಿಯಲ್ಲಿರುವುದು ಕಂಡು ಬಂದಿದೆ.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಕೆಂಗೇರಿ ಬಳಿಯಿರುವ ಮೈಲಸಂದ್ರದ ಮನೆಯೊಂದರಲ್ಲಿ ಈ ಐಷಾರಾಮಿ ಕಾರು ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ನಂತರ ಈ ಕಾರಿನ ಮಾಲೀಕನು ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕಾರಿನ ನಂಬರ್ ಪ್ಲೇಟ್ ಅನ್ನು ನಕಲು ಮಾಡಿರುವುದು ಕಂಡು ಬಂದಿದೆ.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ಸಾರಿಗೆ ವಿಭಾಗದ ಹೆಚ್ಚುವರಿ ಆಯುಕ್ತರಾದ ಜ್ಞಾನೇಂದ್ರ ಕುಮಾರ್‍‍ರವರು ಕೆಲ ದಿನಗಳ ಹಿಂದೆ ನೆಲಮಂಗಲದ ಆರ್‍‍ಟಿ‍ಒದಲ್ಲಿ ಬಸ್ ಅನ್ನು ಪರೀಕ್ಷಿಸಲಾಗಿತ್ತು. ಈ ಬಸ್ ಹೊಂದಿದ್ದ ನಂಬರ್ ಅನ್ನು ಮತ್ತೊಂದು ಬಸ್ ಸಹ ಹೊಂದಿತ್ತು.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ನಮ್ಮ ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿ ಬಸ್ ಅನ್ನು ವಶಕ್ಕೆ ಪಡೆದರು. ಹಳದಿ ಬಣ್ಣದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳ ಪತ್ತೆಯು ಕಠಿಣವಾದುದು ಎಂದು ಹೇಳಿದರು.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಮರ್ಸಿಡಿಸ್ ಕಾರುಗಳನ್ನು ಪತ್ತೆ ಹಚ್ಚಿದ ಬಗ್ಗೆ ಮಾತನಾಡಿದ ಅವರು, ನಮ್ಮ ಬಳಿ ಈ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದರಿಂದಾಗಿ ನಾವು ಆ ಕಾರುಗಳನ್ನು ಪತ್ತೆ ಹಚ್ಚಿದೆವು ಎಂದು ಹೇಳಿದರು. ಇನ್ಸ್‌ಪೆಕ್ಟರ್‌‍‍ಗಳಾದ ರಾಜಣ್ಣ ಹಾಗೂ ಸುಧಾಕರ್‍‍ರವರು ಈ ಕಾರುಗಳತ್ತ ಗಮನಹರಿಸಿದ್ದರು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಒಂದು ದಿನ ಈ ಕಾರುಗಳ ಪೈಕಿ ಒಂದು ಕಾರು ಯಶವಂತಪುರ ಆರ್‍‍ಟಿಒಗೆ ಬಂದಿತ್ತು. ಇನ್ಸ್‌ಪೆಕ್ಟರ್‌‍‍ರವರು ಕಾರು ಹಾಗೂ ಅದರ ನಂಬರ್ ಪ್ಲೇಟ್ ಬಗ್ಗೆ ಗಮನ ಹರಿಸಿದ್ದರು. ಇನ್ನೊಂದು ದಿನ ಅದೇ ಇನ್ಸ್‌ಪೆಕ್ಟರ್‌‍‍ರವರು ಇದೇ ನಂಬರ್ ಪ್ಲೇಟ್ ಹೊಂದಿದ್ದ ಮತ್ತೊಂದು ಕಾರ್ ಅನ್ನು ನೋಡಿದರು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಇದು ಇನ್ಸ್‌ಪೆಕ್ಟರ್‌ಗೆ ಸ್ವಲ್ಪ ಕುತೂಹಲ ಮೂಡಿಸಿತು. ಈ ಕಾರು ಯಶವಂತಪುರ ಆರ್‍‍ಟಿಒಗೆ ಬಂದಿದ್ದ ಕಾರ್ ಅಲ್ಲವೆಂದು ಕಂಡು ಬಂತು. ಈ ಕಾರಣಕ್ಕೆ ಕಾರಿನ ಫೋಟೊವನ್ನು ಆ ವ್ಯಕ್ತಿಗೆ ಕಳುಹಿಸಿದರು. ಆ ವ್ಯಕ್ತಿ ಈ ಕಾರು ತನ್ನದಲ್ಲವೆಂದು ಹೇಳಿದರು. ಇದರಿಂದಾಗಿ ಇನ್ಸ್‌ಪೆಕ್ಟರ್‌ ಇದರ ತನಿಖೆಯನ್ನು ಚುರುಕುಗೊಳಿಸಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಸಾರಿಗೆ ಅಧಿಕಾರಿಗಳು ಸಂಚಾರಿ ಪೊಲೀಸರ ಸಹಕಾರದೊಂದಿಗೆ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರಿನ ಮಾಲೀಕನನ್ನು ಪತ್ತೆ ಹಚ್ಚಿದರು. ಸಂಚಾರಿ ಪೊಲೀಸರ ಸಹಕಾರದೊಂದಿಗೆ ಮೈಲಸಂದ್ರದಲ್ಲಿರುವ ಮನೆಯಿಂದ ಆ ನಕಲಿ ಕಾರಿನ ಮಾಲೀಕನನ್ನು ಸೆರೆಹಿಡಿಯಲಾಯಿತು.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಆತನನ್ನು ಬಂಧಿಸಿದ ನಂತರ ಆತ ಇದು ನಕಲಿ ನಂಬರ್ ಪ್ಲೇಟ್ ಆಗಿದ್ದು, ಮೂರು ವರ್ಷಗಳಿಂದ ಕಾರ್ ಅನ್ನು ರಿಜಿಸ್ಟರ್ ಮಾಡಿಸದೇ ಚಲಾಯಿಸಲಾಗುತ್ತಿದೆ ಎಂಬುದನ್ನು ಒಪ್ಪಿಕೊಂಡನು. ಆತನಿಗೆ ಟೆಂಪರರಿ ನಂಬರ್ ಪ್ಲೇಟ್ ನೀಡಲಾಗಿತ್ತು.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಆರೋಪಿಯನ್ನು ಯಶವಂತಪುರ ಆರ್‍‍ಟಿ‍ಒಗೆ ಕರೆತಂದ ನಂತರ ಕಾರಿನ ಚಾಸೀಸ್ ನಂಬರ್ ಅನ್ನು ಪರೀಕ್ಷಿಸಲಾಯಿತು. ಚಾಸೀಸ್ ನಂಬರ್ ಅನ್ನು ಪರೀಕ್ಷಿಸಿ, ಆ ನಂಬರ್ ಅನ್ನು ಕೇಸ್ ಶೀಟಿನಲ್ಲಿ ಬರೆದುಕೊಳ್ಳುವಾಗ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಎಲ್ಲಾ ತೆರಿಗೆಯನ್ನು ಲೆಕ್ಕ ಹಾಕಿದಾಗ ಆರೋಪಿಯು ರೂ.22 ಲಕ್ಷ ತೆರಿಗೆ ಪಾವತಿಸಬೇಕಾಗಿರುವುದು ಕಂಡು ಬಂದಿದೆ. ಈ ಕಾರ್ ಅನ್ನು 2013ರಿಂದ ಚಲಾಯಿಸಲಾಗಿದೆ. ಈ ಕಾರಣಕ್ಕಾಗಿ ಕಳೆದ ಏಳು ವರ್ಷಗಳ ದಂಡವನ್ನು ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ಸಂಗತಿಯೆಂದರೆ ಈ ಕಾರಿನಲ್ಲಿ ಕಂಡು ಬಂದ ನಂಬರ್ ಅನ್ನು ಇತ್ತೀಚಿಗಷ್ಟೆ ನೀಡಲಾಗಿದೆ. ಈಗ ರಿಜಿಸ್ಟರ್ ಮಾಡಲಾಗುತ್ತಿರುವ ಕಾರುಗಳಿಗೆ ಈ ಸರಣಿಯ ನಂಬರ್‍‍ಗಳನ್ನು ನೀಡಲಾಗುತ್ತಿದೆ.

Source: Bangalore Mirror

More from DriveSpark

Article Published On: Friday, November 22, 2019, 14:02 [IST]
English summary
Politician caught using fake number plate for his benz car to evade road tax - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+