ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಭಾರತದ ಪ್ರತಿಯೊಂದು ಮನೆಯಲ್ಲಿಯೂ ಒಂದು ವಾಹನಗಳಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಮನೆಯಾದರೂ ಸರಿ ಕನಿಷ್ಟ ಪಕ್ಷ ಒಂದಾದರೂ ವಾಹನವು ಇದ್ದೇ ಇರುತ್ತದೆ. ಜನರು ಕಾರು ಹಾಗೂ ಬೈಕ್‍‍ಗಳ ಬಳಕೆಯನ್ನು ಹೆಚ್ಚಿಸಿದ್ದಾರೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಇತ್ತೀಚಿಗಷ್ಟೇ ಭಾರತದ ಆಟೋಮೊಬೈಲ್ ಉದ್ಯಮವು ಸಂಕಷ್ಟವನ್ನು ಎದುರಿಸಿತ್ತು. ಆದರೂ ವಾಹನಗಳ ಮಾರಾಟದಲ್ಲಿ ಕುಸಿತವಾಗಿರಲಿಲ್ಲ. ಡೀಸೆಲ್ ಹಾಗೂ ಪೆಟ್ರೋಲ್‍‍ಗಾಗಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಕಾರಣಕ್ಕೆ ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಭಾರತದಲ್ಲಿ ಬಳಕೆಯಾಗುವ 85% ಡೀಸೆಲ್ - ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಭಾರತವು ಪ್ರಪಂಚದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ಇದು ಹೆಮ್ಮೆ ಪಡುವ ವಿಷಯವಲ್ಲ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಈ ರೀತಿ ಆಮದು ಮಾಡಿಕೊಳ್ಳಲು ಭಾರತವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದು ಭಾರತದ ಅರ್ಥ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ. ಇದಿಷ್ಟು ಮಾತ್ರವಲ್ಲದೇ ಡೀಸೆಲ್ ಪೆಟ್ರೋಲ್ ವಾಹನಗಳಿಂದ ಪರಿಸರದ ಮೇಲೂ ಪರಿಣಾಮ ಉಂಟಾಗುತ್ತಿದೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಪ್ರಧಾನಿ ನರೇಂದ್ರ ಮೋದಿರವರು ಕಚ್ಚಾ ತೈಲದ ಆಮದನ್ನು ಕಡಿಮೆಗೊಳಿಸಲು ಬಯಸಿದ್ದಾರೆ. ಈ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಪರ್ಯಾಯ ಇಂಧನವನ್ನು ಬಳಸುವ ವಾಹನಗಳಿಗೂ ಉತ್ತೇಜನ ನೀಡಲಾಗುತ್ತಿದೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಈ ನಿಟ್ಟಿನಲ್ಲಿ ಭಾರತೀಯ ವಾಯು ಸೇನೆಯು ಸಹ ಹೆಜ್ಜೆ ಇಟ್ಟಿದೆ. ಭಾರತೀಯ ವಾಯು ಸೇನೆಯು ಹಲವಾರು ವಿಮಾನಗಳನ್ನು ಹೊಂದಿದೆ. ಇವುಗಳಲ್ಲಿ ಎ‍ಎನ್ 32 ಕೂಡ ಒಂದು. ಈ ವಿಮಾನವನ್ನು ಏರ್‍‍ಕ್ರಾಫ್ಟ್ ಸಾಗಾಣೆಗೆ ಬಳಸಲಾಗುತ್ತದೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಈ ಎ‍ಎನ್ 32 ವಿಮಾನದಲ್ಲಿ ಬಯೊ ಫ್ಯೂಯಲ್ ಅನ್ನು ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿರವರು ಎ‍ಎನ್ 32 ವಿಮಾನದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಬಯೊ ಫ್ಯೂಯಲ್ ಅನ್ನು ಹೊಂದಿರುವ ಈ ವಿಮಾನವು ಲೇಹ್‍‍ನಲ್ಲಿರುವ ಕುಶೋಕ್ ಬಗುಲಾ ರಿಂಬೋಶ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಎ‍ಎನ್ 32 ವಿಮಾನದಲ್ಲಿ 10% ಬಯೊ ಜೆಟ್ ಫ್ಯೂಯಲ್ ಅನ್ನು ಬಳಸಲಾಗಿದೆ. ಈ ಬಯೊ ಫ್ಯೂಯಲ್ ಅನ್ನು ಸ್ಥಳೀಯವಾಗಿ ತಯಾರಿಸಲಾಗಿದೆ. ಪ್ರಧಾನ ಮಂತ್ರಿಗಳು ಇದನ್ನೂ ಸಹ ಶ್ಲಾಘಿಸಿದ್ದಾರೆ. ಈ ರೀತಿಯ ಕ್ರಮಗಳಿಂದಾಗಿ ಮಾಲಿನ್ಯ ಪ್ರಮಾಣವು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಆಮದು ಮಾಡಿಕೊಳ್ಳಲಾಗುವ ತೈಲದ ಮೇಲಿನ ಅವಲಂಬನೆಯು ಸಹ ಕಡಿಮೆಯಾಗಲಿದೆ. ಹೆಚ್ಚಿನ ಎತ್ತರದಲ್ಲಿರುವ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿ ಈ ವಿಮಾನವು ಇತಿಹಾಸವನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿರವರು ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಮೊದಲ ಬಾರಿಗೆ ವಿಮಾನದಲ್ಲಿ ಬಯೊ ಫ್ಯೂಯಲ್ ಬಳಸಿದ ವಾಯುಸೇನೆ

ಎ‍ಎನ್ 32 ವಿಮಾನವು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಅತಿ ಎತ್ತರದ ಸ್ಥಳದಲ್ಲಿರುವ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ ಎಂದು ಮೋದಿರವರು ಹೇಳಿದ್ದಾರೆ. ಮಾಲಿನ್ಯ ನಿಯಮವನ್ನು ನಿಯಂತ್ರಿಸಲು ಕೈಜೋಡಿಸಿರುವ ಭಾರತೀಯ ವಾಯು ಸೇನೆಗೆ ಅಭಿನಂದನೆಗಳು.

Article Published On: Monday, February 24, 2020, 17:50 [IST]
English summary
Prime Minister Modi praises IAF for using bio fuel in AN 32 transport plane. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+