ಸಿನಿಮಾ ಸೂಪರ್ ಹಿಟ್: ಸಣ್ಣ ನಿರ್ದೇಶಕನ ಹುಡಿಕಿ ಬಂತು ದುಬಾರಿ ಕಿಯಾ ಕಾರು
ಭಾರತೀಯ ಚಲನಚಿತ್ರ ರಂಗದಲ್ಲಿ ಸಿನಿಮಾ ನಿರ್ದೇಶಕರು, ನಟರು, ಮ್ಯೂಸಿಕ್ ಡೈರೆಕ್ಟರ್‌ಗಳಿಗೆ ಚಿತ್ರದ ನಿರ್ಮಾಪಕರು ಉಡುಗೊರೆಯಾಗಿ ಕಾರುಗಳನ್ನು ನೀಡುವುದು ಟ್ರೆಂಡ್ ಆಗಿಬಿಟ್ಟಿದೆ. ಇತ್ತೀಚೆಗೆ ಮಳಯಾಲಂ ಸಿನಿಮಾವೊಂದು ಕೇರಳದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನಿರ್ಮಾಪಕರು ಸಿನಿಮಾದ ನಿರ್ದೇಶಕನಿಗೆ ಕಿಯಾ ಸೆಲ್ಟೊಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.
ನವೆಂಬರ್ 3 ರಂದು ಬಿಡುಗಡೆಯಾದ ಮಳಯಾಲಂ ನಟ ಸುರೇಶ್ ಗೋಪಿ ಅಭಿನಯದ ಗರುಡನ್ ಚಿತ್ರ ಕೇರಳ ಗಲ್ಲಾಪೆಟ್ಟಿಗೆಯನ್ನು ಕೆಡವಿದೆ. ಈ ಸಿನಿಮಾವನ್ನು ಅರುಣ್ ವರ್ಮಾ ನಿರ್ದೇಶಿಸಿದ್ದು ಥಿಯೇಟರ್‌ನಲ್ಲಿ ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಮನರಂಜನೆ ನೀಡುತ್ತಿದೆ ಎಂದು ವರದಿಯಾಗಿದೆ. ಗರುಡನ್ ಚಿತ್ರವು ಇತ್ತೀಚಿನ ದಿನಗಳಲ್ಲಿನ ಅತ್ಯುತ್ತಮ ಮಲಯಾಳಂ ಥ್ರಿಲ್ಲರ್ ಚಿತ್ರ ಎಂದು ಹೇಳಲಾಗುತ್ತಿದೆ.

ಸದ್ಯ ಯಶಸ್ಸು ಕಂಡಿರುವ ಚಿತ್ರ ಕೇರಳ ಒಂದರಿಂದಲೇ ಸುಮಾರು 13 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಕಾರಣಕ್ಕೆ ನಿರ್ದೇಶಕ ಅರುಣ್ ವರ್ಮಾ ಅವರಿಗೆ ನಿರ್ಮಾಪಕ ಲಿಸ್ಟಿನ್ ಸ್ಟೀಫನ್ಸ್ ಅವರು ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾದ ಸೆಲ್ಟೋಸ್ ಫೇಸ್‌ಲಿಫ್ಟ್‌ನ ಉನ್ನತ-ಮಟ್ಟದ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.
ಪ್ಯೂಟರ್ ಆಲಿವ್ ಬಣ್ಣದ ಸೆಲ್ಟೋಸ್ ಎಸ್‌ಯುವಿಯನ್ನು ಉಡೊಗೊರೆಯಾಗಿ ನಿರ್ದೇಶಕನಿಗೆ ನೀಡಲಾಗಿದೆ. ಈ ಎಸ್‌ಯುವಿಯ ಎಕ್ಸ್ ಶೋ ರೂಂ ಬೆಲೆ 20 ಲಕ್ಷ ರೂ. ಇದ್ದು, ಕೇರಳದ ಕೊಚ್ಚಿಯಲ್ಲಿ ವಾಹನದ ಆನ್ ರೋಡ್ ಬೆಲೆ ರಸ್ತೆ ತೆರಿಗೆ, ವಿಮೆ ಮತ್ತು ಇತರ ವೆಚ್ಚಗಳು ಸೇರಿದಂತೆ ಸುಮಾರು 22 ಲಕ್ಷ ರೂ. ಆಗಿದೆ ಎಂದು ತಿಳಿದುಬಂದಿದೆ.

ಗರುಡ ನಿರ್ದೇಶಕರಿಗೆ ಉಡುಗೊರೆಯಾಗಿ ನೀಡಲಾದ ಪ್ಯೂಟರ್ ಆಲಿವ್ ಬಣ್ಣವನ್ನು ಹೊರತುಪಡಿಸಿ, ಕಿಯಾ ಸೆಲ್ಟೋಸ್ SUV ಅನ್ನು ಎಂಟು ಸಿಂಗಲ್-ಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಕಂಪನಿಯು ನೀಡುತ್ತಿದೆ. ಹಾಗೆಯೇ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಪ್ರಸ್ತುತ ಭಾರತದಲ್ಲಿ ಮೂರು ಪ್ರಾಥಮಿಕ ಟ್ರಿಮ್‌ಗಳಲ್ಲಿ ನೀಡಲಾಗುತ್ತಿದೆ.
ಜೊತೆಗೆ ಟೆಕ್ ಲೈನ್, ಜಿಟಿ ಲೈನ್ ಮತ್ತು ಎಕ್ಸ್ ಲೈನ್, ಟೆಕ್ ಲೈನ್ HTE, HTK, HTK ಪ್ಲಸ್, HTX ಮತ್ತು HTX ಪ್ಲಸ್ ಎಂಬ ಐದು ರೂಪಾಂತರಗಳನ್ನು ಹೊಂದಿದೆ. ಪೂರ್ಣ-ಎಲ್‌ಇಡಿ ಲೈಟಿಂಗ್, ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್, 17-ಇಂಚಿನ ಕಪ್ಪು ಅಲಾಯ್ ವೀಲ್‌ಗಳು, ಲೆಥೆರೆಟ್ ಅಪ್ಹೋಲ್ಸ್ಟರಿ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ ಪ್ರಸ್ತುತ ರೂ. 10.89 ಲಕ್ಷದಿಂದ ರೂ. 19.99 ಲಕ್ಷದವರೆಗೆ ಎಕ್ಸ್ ಶೋ ರೂಂ ಬೆಲೆ ಹೊಂದಿದೆ. ಎಂಜಿನ್ ವಿಶೇಷಣಗಳಿಗೆ ಬರುವುದಾದರೆ, ಹಳೆಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಳಿಸಿಕೊಳ್ಳಲಾಗಿದೆ. ಇನ್ನು ಭಾರತದಲ್ಲಿ ಕಿಯಾ ಒಟ್ಟಾರೆ ಕಾರುಗಳ ಮಾರಾಟದಲ್ಲಿ ಸೆಲ್ಟೋಸ್ ಮಾದರಿಯದ್ದೇ ಬಹುಪಾಲು ಎಂದು ಹೇಳಬಹುದು.
ದಕ್ಷಿಣ ಕೊರಿಯಾದ ಬ್ರ್ಯಾಂಡ್ ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಫೇಸ್‌ಲಿಫ್ಟೆಡ್ ಸೆಲ್ಟೋಸ್ ಕಾರಿಗೆ ತರಲು ಸಿದ್ಧವಾಗಿದೆ. ಇದು 158 bhp ಪವರ್ ಮತ್ತು 253 Nm ಗರಿಷ್ಟ ಟಾರ್ಕ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ iMT ಅಥವಾ 7-ಸ್ಪೀಡ್ DCT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಬಹುದು.
ಭಾರತದಲ್ಲಿ ಕಿಯಾ ಸೆಲ್ಟೋಸ್ ಎಸ್‌ಯುವಿಗೆ ಇರುವ ಪ್ರತಿಸ್ಪರ್ಧಿಗಳನ್ನು ನೋಡುವುದಾದ್ರೆ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಎಂಜಿ ಆಸ್ಟರ್, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್ ಮತ್ತು ಸಿಟ್ರನ್ ಸಿ 3 ಏರ್‌ಕ್ರಾಸ್‌ನೊಂದಿಗೆ ಸ್ಪರ್ಧಿಸುತ್ತದೆ.


Click it and Unblock the Notifications








