ಎಲೆಕ್ಟ್ರಿಕ್ ಕಾರು ಆಯ್ತು, ಬರುತ್ತಿದೆ ನೋಡಿ ವಿದ್ಯುತ್ ವಿಮಾನ
ನಾವು ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಬೈಕ್ ಹೀಗೆ ಹಲವಾರು ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಕೇಳಿರುತ್ತೇವೆ. ಆದರೆ ತಂತ್ರಜ್ಞಾನ ಮುಂದುವರಿದಂತೆ ವಿಮಾನಗಳಲ್ಲೂ ಇದೇ ತಂತ್ರಜ್ಞಾನ ಆಳವಡಿಸುವ ದಿನಗಳು ದೂರವಿಲ್ಲ ಎಂಬುದನ್ನು ಮನಗಾನಬೇಕಾಗುತ್ತದೆ.
ಹೌದು, ಪ್ಯಾರಿಸ್‌ನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಏರ್ ಶೋದಲ್ಲಿ ವಿದ್ಯುತ್ ಚಾಲಿತ ವಿಮಾನವೊಂದು ಅದ್ದೂರಿ ಪ್ರದರ್ಶನಗೊಂಡಿದೆ. ಇದು ನೆರೆದಿದ್ದ ಎಲ್ಲರಲ್ಲೂ ಕುತೂಹಲ ಸೃಷ್ಟಿ ಮಾಡಲು ಯಶಸ್ವಿಯಾಗಿದೆ.
ಇಟಲಿಯ ವ್ಯೋಮಯಾನ ಸಂಸ್ಥೆ ಆಗಸ್ಟಾ ವೆಸ್ಟ್‌ಲ್ಯಾಂಡ್ ನೂತನ ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ಅನಾವರಣಗೊಳಿಸಿದೆ. 'ಪ್ರೊಜೆಕ್ಟ್ ಜೀರೋ' ಎಂದು ಅರಿಯಲ್ಪಡುವ ಈ ಟಿಲ್ಟ್ ರೋಟರ್ ವಿಮಾನ ಲಿಥಿಯಂ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ.
ಆಕರ್ಷಕ ಫೋಟೊ ಗ್ಯಾಲರಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಇದರಲ್ಲಿ ಯಾವುದೇ ಹೈಡ್ರಾಲಿಕ್ ತಂತ್ರಜ್ಞಾನ ಆಳವಡಿಸಲಾಗಿಲ್ಲ. ಹಾಗೆಯೇ ಎಷ್ಟು ದೂರ ಸಾಗಲಿದೆ ಹಾಗೂ ಎಷ್ಟು ವೇಗತೆಯಲ್ಲಿ ಚಲಿಸಲಿದೆ ಎಂಬುದಕ್ಕೆ ನಿಖರ ಮಾಹಿತಿ ನೀಡುವಲ್ಲಿ ಕಂಪನಿ ವಿಫಲವಾಗಿದೆ.

ನೋಡಲು ಹೆಲಿಕಾಪ್ಟರ್ ರೂಪ ಪಡೆದುಕೊಂಡಿರುವ ಈ ಎಲೆಕ್ಟಿಕ್ ವಿಮಾನದಲ್ಲಿ ಒಬ್ಬನೇ ಒಬ್ಬ ಪ್ರಯಾಣಿಕ ಮಾತ್ರ ಪಯಣಿಸಬಹುದಾಗಿದೆ.

ಇನ್ನು ಕಂಪನಿಯ ಪ್ರಕಾರ, ಪ್ರೊಜೆಕ್ಟ್ ಜೀರೋ ಹಗುರ ಭಾರದ ವಿಮಾನವಾಗಿದೆ. ಇದರಲ್ಲಿ ಕಾರ್ಬರ್ ಫೈಬರ್ ಜತೆಗೆ ಇತರ ಕಡಿಮೆ ಭಾರದ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ.

ಪ್ರೊಜೆಕ್ಟ್ ಜೀರೋ ಭಾರದ ಕುರಿತು ಸರಿಯಾದ ಮಾಹಿತಿ ಲಭಿಸಿಲ್ಲ. ಹಾಗಿದ್ದರೂ 500 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ ಸಾಧ್ಯತೆಯಿದೆ. ಹಾಗೆಯೇ ಜೀರೋ ಎಮಿಷನ್ ಅಂದರೆ ಪರಿಸರ ಸ್ನೇಹಿಯಾಗಿದೆ.

ರಿಚಾರ್ಜ್ ಮಾಡಿಸಬಹುದಾದ ಲಿಥಿಯಂ ಬ್ಯಾಟರಿಯನ್ನು ಇದರಲ್ಲಿ ಆಳವಡಿಸಲಾಗಿದೆ. ಪ್ರಸ್ತುತ ಮೊದಲ ಮಾದರಿಯಷ್ಟೇ ಪ್ರದರ್ಶನ ಕಂಡಿದೆ.


Click it and Unblock the Notifications








