ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಮಾರಣಾಂತಿಕ ಕರೋನಾ ವೈರಸ್‌ನ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ದಿನಕ್ಕೆ ನೂರಾರು ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈಗ ಪ್ರತಿದಿನ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ದಿಢೀರ್ ಹೆಚ್ಚಳದಿಂದ ಜನರು ಭಯದಲ್ಲಿ ಬದುಕುವಂತಾಗಿದೆ.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಈ ದಿಢೀರ್ ಹೆಚ್ಚಳಕ್ಕೆ ಮುಖ್ಯ ಕಾರಣ ಲಾಕ್‌ಡೌನ್ ನಿಯಮಗಳ ಉಲ್ಲಂಘನೆ. ಲಾಕ್‌ಡೌನ್ ಜಾರಿಯಾದ ನಂತರವೂ ಜನರು ವಿನಾಕಾರಣ ಓಡಾಡುತ್ತಿದ್ದರು. ಮಾಸ್ಕ್ ಹಾಗೂ ಗ್ಲೌಸ್‌ಗಳಂತಹ ಯಾವುದೇ ರಕ್ಷಣಾತ್ಮಕ ಕ್ರಮಗಳನ್ನು ಧರಿಸದೆ ಜನ ಓಡಾಡುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೆ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ. ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಬಾರಿಯ ಲಾಕ್‌ಡೌನ್‌ನಲ್ಲಿ ಕೆಲ ವಿನಾಯಿತಿಗಳನ್ನು ನೀಡಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಕೆಲ ಉದ್ಯಮ ಹಾಗೂ ಕಂಪನಿಗಳಿಗೆ ವಿವಿಧ ರೀತಿಯ ರಕ್ಷಣಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಬೇಕಾಬಿಟ್ಟಿಯಾಗಿ ಸುತ್ತಾಡುತ್ತಿರುವ ಜನರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಅಗತ್ಯ ಕಾರ್ಯಗಳನ್ನು ಹೊರತುಪಡಿಸಿ ವಿನಾಕಾರಣ ಹೊರಗೆ ಸುತ್ತಾಡುವ ಸಾರ್ವಜನಿಕರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಲಾಠಿ ರುಚಿಯನ್ನು ಸಹ ತೋರಿಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ತಾಯಿ, ಮಗನ ಮೇಲೆ ಪೊಲೀಸರು ವಿಭಿನ್ನ ಕ್ರಮ ಕೈಗೊಂಡಿದ್ದಾರೆ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಹೊರಬಂದಿದ್ದ ಯುವಕ ಹಾಗೂ ಆತನ ತಾಯಿಗೆ ಹಾರ ಹಾಕಿ ಕೈ ಮುಗಿದು ಗೌರವ ಸಲ್ಲಿಸುತ್ತಿರುವ ದೃಶ್ಯಗಳನ್ನು ಈ ವೀಡಿಯೊದಲ್ಲಿ ಕಾಣಬಹುದು.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಅವರಿಬ್ಬರು ದಿನಸಿ ಖರೀದಿಸಲು ಹೊರ ಬಂದಿದ್ದರು. ದಿನಸಿ ಖರೀದಿ ಅಗತ್ಯ ವಸ್ತುಗಳಲ್ಲಿ ಬರುತ್ತದೆಯಲ್ಲವೇ ಎಂಬ ಪ್ರಶ್ನೆ ಉದ್ಬವಿಸುವುದು ಸಹಜ. ಆದರೆ ಅವರಿಬ್ಬರು ಸೇರಿ ಖರೀದಿಸಿರುವ ದಿನಸಿಯ ಬಗ್ಗೆ ಪ್ರಶ್ನೆ ಎದುರಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ತಾಯಿ, ಮಗ ಇಬ್ಬರೂ ಹೊರಗೆ ಹೋಗಿ ಅಲ್ಪ ಪ್ರಮಾಣದ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿದ್ದಾರೆ. ಇದನ್ನು ಒಬ್ಬ ವ್ಯಕ್ತಿಯೇ ಖರೀದಿಸಬಹುದಿತ್ತು. ಇದಕ್ಕೆ ಇಬ್ಬರು ವ್ಯಕ್ತಿಗಳ ಅಗತ್ಯವಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ತಾಯಿ, ಮಗನ ಮೇಲೆ ಈ ವಿನೂತನ ಕ್ರಮವನ್ನು ಕೈಗೊಂಡಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಯುವಕನು ಹೊರಬಂದಾಗ ಮೂಗು ಹಾಗೂ ಬಾಯಿಯನ್ನು ಕೈಯಿಂದ ಮುಚ್ಚಿಕೊಂಡಿದ್ದಾನೆ. ಆತನ ತಾಯಿ ಮಾಸ್ಕ್ ಧರಿಸಿರಲಿಲ್ಲ. ಪೊಲೀಸರನ್ನು ಕಂಡ ನಂತರ ಆತ ಕರ್ಚೀಫ್‌ ಕಟ್ಟಿಕೊಂಡಿದ್ದಾನೆ. ಆತನ ತಾಯಿ ಸಹ ಶಾಲು ಹೊದ್ದು ಕೊಂಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ದ್ವಿಚಕ್ರ ವಾಹನದಲ್ಲಿ ಕೇವಲ ಒಬ್ಬರು ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಆದರೆ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಲಾಗಿದೆ.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಆದರೆ ತಾಯಿ-ಮಗ ಈ ನಿಯಮಗಳನ್ನೆಲ್ಲಾ ಉಲ್ಲಂಘಿಸಿ ದಿನಸಿ ಖರೀದಿಸಲು ಹೋಗಿದ್ದರು. ಈ ಕಾರಣಕ್ಕೆ ಅವರನ್ನು ತಡೆದ ಪೊಲೀಸರು ತಾಯಿ, ಮಗನಿಗೆ ಹಾರ ಹಾಕಿ, ಕೈ ಮುಗಿದಿದ್ದಾರೆ. ಈ ಗೌರವವನ್ನು ಅಗೌರವವೆಂದೇ ಪರಿಗಣಿಸಲಾಗುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಅಂದ ಹಾಗೆ ಈ ಘಟನೆ ನಡೆದಿರುವುದು ಪಂಜಾಬ್‌ನ ಪಟಿಯಾಲದಲ್ಲಿ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಪೊಲೀಸರು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವವರಿಂದ ನೃತ್ಯ, ಹಾಡು ಹಾಗೂ ಬಸ್ಕಿ ಹೊಡೆಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ತಾಯಿ, ಮಗನ ಮೇಲೆ ವಿನೂತನ ಕ್ರಮ ಕೈಗೊಂಡ ಪೊಲೀಸರು..!

ಇದರ ಜೊತೆಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು, ದಂಡ ವಿಧಿಸಲಾಗುತ್ತಿದೆ. ಈಗ ಪಂಜಾಬ್ ಪೊಲೀಸರು ನಿಯಮ ಉಲ್ಲಂಘಿಸಿದ ತಾಯಿ, ಮಗನಿಗೆ ಹಾರ ಹಾಕಿ ಕೈ ಮುಗಿಯುವ ಮೂಲಕ ವಿಭಿನ್ನ ರೀತಿಯ ಕ್ರಮ ಕೈಗೊಂಡಿದ್ದಾರೆ.

Article Published On: Wednesday, May 6, 2020, 13:15 [IST]
English summary
Punjab cops garlanded Mother Son duo for violating lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+