ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಡಿಫೆಂಡರ್, ಲ್ಯಾಂಡ್ ರೋವರ್‌ ಕಂಪನಿಯ ಹೊಸ ಐಷಾರಾಮಿ ಕಾರು. ಇದು ಎಸ್‌ಯು‌ವಿ ಮಾದರಿಯ ಕಾರು. ಲ್ಯಾಂಡ್ ರೋವರ್ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಡಿಫೆಂಡರ್ ಕಾರಿನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಈ ಹೊಸ ಕಾರನ್ನು ಜನಪ್ರಿಯ ಗಾಯಕರೊಬ್ಬರು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಪಂಜಾಬಿ ಗಾಯಕ ಸತಿಂದರ್ ಸರ್ತಾಜ್ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರ್ ಅನ್ನು ಖರೀದಿಸಿದ್ದಾರೆ. ಈ ಕಾರನ್ನು ಅವರು ತಮ್ಮ ಕನಸಿನ ವಾಹನವೆಂದು ಹೇಳಿದ್ದಾರೆ. ಈ ಬಗ್ಗೆ ಅವರು ಟ್ವಿಟರ್ ಪೇಜ್'ನಲ್ಲಿ ಬರೆದುಕೊಂಡಿದ್ದಾರೆ.

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಗಾಯಕ ಸತಿಂದರ್ ಸರ್ತಾಜ್ ಈಗಾಗಲೇ ಹಳೆಯ ತಲೆಮಾರಿನ ಡಿಫೆಂಡರ್ ಕಾರ್ ಅನ್ನು ಹೊಂದಿದ್ದಾರೆ. ಈಗ ಹೊಸ ಡಿಫೆಂಡರ್ ಕಾರಿನ ಮೇಲಿನ ಉತ್ಸಾಹದಿಂದಾಗಿ ಈ ಕಾರ್ ಅನ್ನು ಖರೀದಿಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಸೆಲೆಬ್ರಿಟಿಗಳು ಲ್ಯಾಂಡ್ ರೋವರ್ ಕಾರುಗಳ ಅಭಿಮಾನಿಯಾಗಿದ್ದಾರೆ. ಇದನ್ನು ದೃಢಿಕರಿಸುವಂತೆ ಈಗಾಗಲೇ ಡಿಫೆಂಡರ್ ಕಾರನ್ನು ಹೊಂದಿದ್ದರೂ ಸಹ ಗಾಯಕ ಸತಿಂದರ್ ಸರ್ತಾಜ್ ಹೊಸ ತಲೆಮಾರಿನ ಡಿಫೆಂಡರ್ ಕಾರ್ ಅನ್ನು ಖರೀದಿಸಿದ್ದಾರೆ.

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿಯನ್ನು ಎಲ್ಇ, ಹೆಚ್ಎಸ್ಇ, ಎಕ್ಸ್-ಡೈನಾಮಿಕ್ ಹೆಚ್ಎಸ್ಇ ಹಾಗೂ ಎಕ್ಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮಾದರಿಗಳು ಬಿಡಿಭಾಗಗಳು ಹಾಗೂ ಫೀಚರ್'ಗಳ ವಿಷಯದಲ್ಲಿ ವಿಭಿನ್ನವಾಗಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಡಿಫೆಂಡರ್ ಎಸ್‌ಯು‌ವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ಡಿಫೆಂಡರ್ ಎಸ್‌ಯು‌ವಿಯು ಮೂರು ಡೋರು ಹಾಗೂ ಐದು ಡೋರುಗಳ ಆವೃತ್ತಿಯಲ್ಲಿ ಲಭ್ಯವಿದೆ.

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ ಎಸ್‌ಯು‌ವಿಯನ್ನು ಭಾರತದಲ್ಲಿ ಹೊಸ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದೆ. ಡಿಫೆಂಡರ್ ಎಸ್‌ಯು‌ವಿಯಲ್ಲಿ 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಹಾಗೂ 6-ಸಿಲಿಂಡರ್ ಟರ್ಬೊ ಡೀಸೆಲ್ ಅಳವಡಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಈ ಎರಡೂ ಎಂಜಿನ್'ಗಳು 3.0 ಲೀಟರ್ ಸಾಮರ್ಥ್ಯವನ್ನು ಹೊಂದಿವೆ. ಇವುಗಳಲ್ಲಿ ಪೆಟ್ರೋಲ್ ಎಂಜಿನ್ 400 ಬಿಹೆಚ್‌ಪಿ ಪವರ್ ಹಾಗೂ 550 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 300 ಬಿಹೆಚ್‌ಪಿ ಪವರ್ ಹಾಗೂ 650 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯು‌ವಿ ಖರೀದಿಸಿದ ಜನಪ್ರಿಯ ಗಾಯಕ

ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯು‌ವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.90 ಲಕ್ಷದಿಂದ ರೂ.1.08 ಕೋಟಿಗಳಾಗಿದೆ. ಡಿಫೆಂಡರ್ 110 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.97.03 ಲಕ್ಷದಿಂದ ರೂ.1.08 ಕೋಟಿಗಳಾಗಿದೆ.

Most Read Articles

Kannada
English summary
Punjabi singer Satinder Sartaaj buys new defender SUV. Read in Kannada.
Story first published: Tuesday, April 6, 2021, 20:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X