ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

Posted By:

ವಾಹನಗಳಿಂದ ಹೊರಸೂಸುವ ವಿಷಾಣು ಹೊಗೆಯಿಂದಾಗಿ ವಾತಾವರಣ ಕಲುಷಿತಗೊಳ್ಳುತ್ತಿದೆ. ವಿಶೇಷವಾಗಿಯೂ ನಗರ ಪ್ರದೇಶಗಳಲ್ಲಿ ಇದು ಹೆಚ್ಚಿನ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.

ಇನ್ನೊಂದೆಡೆ ಭವಿಷ್ಯದ ವಾಹನಗಳನ್ನು ರೂಪಿಸುವುದರಲ್ಲಿ ಕಾರ್ಯ ಮಗ್ನವಾಗಿರುವ ವಾಹನ ತಯಾರಕ ಸಂಸ್ಥೆಗಳು ಪರಿಸರ ಸ್ನೇಹಿ ವಾಹನಗಳನ್ನು ರಚಿಸುವುದರಲ್ಲಿ ಗಮನ ಕೇಂದ್ರಿತವಾಗಿದೆ.

ಈ ಪಟ್ಟಿಗೆ ಸೇರಿರುವ ಇನ್ನೊಂದು ಆಕರ್ಷಕ ವಿದ್ಯುತ್ ಚಾಲಿತ 'ಕ್ವಾಡ್' ವಾಹನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಮುಖವಾಗಿ ಪ್ರಕೃತಿ ಇಷ್ಟಪಡುವ ಯುವ ಪೀಳಿಗೆಯ ದೃಷ್ಟಿಕೋನದಲ್ಲಿ ರಚಿಸಲಾಗಿದ್ದು, ನಗರ ಪ್ರದೇಶದ ಸಾರಿಗೆ ಸಮಸ್ಯೆಗಳಿಗೆ ಪರಿಹಾರವಾಗಲಿದೆ.

To Follow DriveSpark On Facebook, Click The Like Button
ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ಕ್ವಾಡ್ ಒಂದು ಮಾಲಿನ್ಯ ರಹಿತ ಎಕಾನಾಮಿಕಲ್ ಎಲೆಕ್ಟ್ರಿಕ್ ವಾಹನವಾಗಿದೆ. ಇದು ಪರಿಸರ ಜೀವನಶೈಲಿ ಇಷ್ಟಪಡುವವರನ್ನು ಉತ್ತಮ ಅನುಭವ ನೀಡಲಿದೆ.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ಜನರು ತಾವು ಬಳಸುವ ವಾಹನದ ರೀತಿಯನ್ನು ಬದಲಾಯಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ. ಈ ಮೂಲಕ ಜನರನ್ನು ಸ್ವಯಂ ಸಮರ್ಥನೀಯವೆಂದು ಬಿಂಬಿಸುವ ಪ್ರಯತ್ನ ಮಾಡಲಾಗುವುದು.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ಇದು ನಾಲ್ಕು 750ಎಎಂಪಿ ಬ್ಯಾಟರಿಗಳಿಂದ ನಡೆಸಲ್ಪಡುವ ಒಂದು ಚಾಸೀಸ್ ಆರೋಹಿತವಾದ 48 ವಾಟ್ ವಿದ್ಯುತ್ ಮೋಟಾರ್‌ನಿಂದ ಚಲಿಸುತ್ತದೆ.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ಹಾಗೆಯೇ ಬಾಹ್ಯ ಚಾರ್ಜರ್ ಸಿಸ್ಟಂ ಹೊಂದಿರುವ ಕ್ವಾಡ್, ಸುರಕ್ಷಿತ ಚಾರ್ಜ್ ವ್ಯವಸ್ಥೆಯನ್ನು ಹೊಂದಿದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಮನೆಯಲ್ಲಿಯೇ ಬ್ಯಾಟರಿ ರಿಚಾರ್ಜ್ ಮಾಡಿಸಬಹುದಾಗಿದೆ.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

220v ಅಥವಾ 110v ಪವರ್ ಔಟ್ಲೆಟ್‌ನಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿಸಲು ಅನುಕ್ರಮವಾಗಿ 6ರಿಂದ 8 ತಾಸುಗಳು ತಗಲುತ್ತದೆ.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ವಿದ್ಯುನ್ಮಾನವಾಗಿ ಚಾರ್ಜಿಂಗ್ ಸಿಸ್ಟಂ ಹೊಂದಿರುವ ಹೊರತಾಗಿಯೂ ಪ್ರಸ್ತುತ ವಾಹನ ಪ್ರತ್ಯೇಕ ಎಮರ್ಜನ್ಸಿ ರಿಚಾರ್ಜ್ ಸಿಸ್ಟಂವೊಂದನ್ನು ಸಹ ಹೊಂದಿದ್ದು, ಇದು ಸೋಲರ್ ಪ್ಯಾನೆಲ್‌ನಿಂದ ನಿಯಂತ್ರಿಸಲ್ಪಟ್ಟಿದೆ. ನೀವಿದನ್ನು ಬ್ಯಾಕಪ್ ಪವರ್ ಆಗಿ ಬಳಕೆ ಮಾಡಬಹುದು.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ಕ್ವಾಡ್ ಎಲೆಕ್ಟ್ರಿಕ್ ವಾಹನದ ಇನ್ನೊಂದು ಪ್ರಮುಖ ಅಂಶವೆಂದರೆ ಇದರ ಚಾಸೀಸ್ ಹಾಗೂ ಇತರ ಪರಿಕರಗಳನ್ನು ಮರುಬಳಕೆ ಮಾಡಬಹುದಾಗಿದೆ. ಈ ಮೂಲಕ ಇ- ತ್ಯಾಜ್ಯವನ್ನು ತಡೆಗಟ್ಟಬಹುದು.

ಪರಿಸರ ಸ್ನೇಹಿ ಯುವ ಪೀಳಿಗೆಗೊಂದು ವಿದ್ಯುತ್ ವಾಹನ

ಡಿಜಿಟಲ್ ಡಿಸ್‌ಪ್ಲೇ, ಚಾರ್ಜ್ ಇಂಡಿಕೇಟರ್, ಎಚ್ಚರಿಕಾ ಲೈಟ್ ಹಾಗೂ ಎಲ್‌ಇಡಿ ಲೈಟಿಂಗ್ ಸಿಸ್ಟಂ ಇತರ ಪ್ರಮುಖ ಅಂಶಗಳಾಗಿದೆ.

English summary
Quad is a four wheeled electric vehicle that is designed for urban transportation as well as off-road voyages. It runs on a chassis-mounted 48v electric motor powered by four 750amp batteries.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark