ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಅಪಹರಣಕ್ಕೊಳಗಾದ ಮಗುವನ್ನು ರಕ್ಷಿಸಲು ಭಾರತದಲ್ಲಿ ಮೊದಲ ಬಾರಿಗೆ ರೈಲನ್ನು ನಿಲ್ಲಿಸದೆ ಚಾಲನೆ ಮಾಡಲಾಗಿದೆ. ಮಗುವನ್ನು ರಕ್ಷಿಸಲು ರಾಪ್ಟಿಸಾಗರ್ ಎಕ್ಸ್‌ಪ್ರೆಸ್ ರೈಲು ಮಧ್ಯಪ್ರದೇಶದ ಲಲಿತಪುರದಿಂದ ಭೋಪಾಲ್ ವರೆಗೆ ತಡೆರಹಿತವಾಗಿ ಚಲಿಸಿದೆ.

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಮಗುವನ್ನು ಅಪಹರಿಸಿದ ವ್ಯಕ್ತಿಯನ್ನು ಬಂಧಿಸಿ ರೈಲ್ವೆ ಭದ್ರತಾ ಪಡೆಯ ಜೈಲಿನಲ್ಲಿರಿಸಲಾಗಿದೆ. ಅಪಹರಣಕ್ಕೊಳಗಾಗಿದ್ದ 3 ವರ್ಷದ ಮಗು ಸುರಕ್ಷಿತವಾಗಿ ಆತನ ಪೋಷಕರ ಮಡಿಲು ಸೇರಿದೆ ಎಂದು ವರದಿಗಳು ತಿಳಿಸಿವೆ. ಮಗು ತನ್ನ ಹೆತ್ತವರೊಂದಿಗೆ ಲಲಿತಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿದ್ದಾನೆ.

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಮಗುವನ್ನು ಅಪಹರಿಸಲಾಗಿದೆ ಎಂಬುದನ್ನು ಅರಿಯದ ಪೋಷಕರು, ಮಗು ಕಾಣೆಯಾಗಿರಬಹುದೆಂದು ಭಾವಿಸಿ ಇಡೀ ರೈಲು ನಿಲ್ದಾಣದಲ್ಲಿ ಹುಡುಕಿದ್ದಾರೆ. ಆದರೆ, ಮಗು ಪತ್ತೆಯಾಗಿಲ್ಲ. ನಂತರ ಮಗು ನಾಪತ್ತೆಯಾಗಿರುವ ಬಗ್ಗೆ ಲಲಿತಪುರ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣದಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹೆಣ್ಣು ಮಗುವನ್ನು ಅಪಹರಿಸಿ ರಾಪ್ಟಿಸಾಗರ್ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಪತ್ತೆಯಾಗಿದೆ. ಕೂಡಲೇ ರೈಲ್ವೆ ಪೊಲೀಸರು ಭೋಪಾಲ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ನಂತರ ರೈಲು ಚಾಲಕನನ್ನು ಸಂಪರ್ಕಿಸಿ ರೈಲನ್ನು ಭೋಪಾಲ್ ವರೆಗೆ ಎಲ್ಲಿಯೂ ನಿಲ್ಲಿಸದಂತೆ ತಿಳಿಸಿದ್ದಾರೆ. ರೈಲು ಚಾಲಕ ಸಹ ಎಲ್ಲಿಯೂ ರೈಲು ನಿಲ್ಲಿಸದೇ ಚಾಲನೆ ಮಾಡಿದ್ದಾರೆ. ಈ ವೇಳೆ ಬೇರೆ ರೈಲುಗಳನ್ನು ಮುಂಚಿತವಾಗಿ ನಿಲ್ಲಿಸಿ, ರಾಪ್ಟಿ ಸಾಗರ್ ರೈಲಿಗಾಗಿ ಎಲ್ಲಾ ಸಂಕೇತಗಳನ್ನು ಮುಕ್ತವಾಗಿರಸಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ರೈಲು ಎಲ್ಲಿಯೂ ನಿಲ್ಲದೆ ಭೋಪಾಲ್ ತಲುಪಿತು. ಅಲ್ಲಿ ರೈಲ್ವೆ ಪೊಲೀಸರು ಅಪಹರಣಕಾರನು ತಪ್ಪಿಸಿಕೊಳ್ಳದಂತೆ ತಡೆಯಲು ಗಸ್ತು ತಿರುಗುತ್ತಿದ್ದರು. ಅಪಹರಣಕಾರನು ರೈಲು ನಿಲ್ಲುತ್ತಿದ್ದಂತೆ ರೈಲಿನಿಂದ ಇಳಿದು ಆತುರಾತುರವಾಗಿ ಹೋಗುತ್ತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಮಗುವನ್ನು ರಕ್ಷಿಸಿದ್ದಾರೆ.

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಭಾರತೀಯ ರೈಲ್ವೆಯು ಇದೇ ಮೊದಲ ಬಾರಿಗೆ ಅಪಹರಣಕ್ಕೊಳಗಾದ ಮಗುವನ್ನು ರಕ್ಷಿಸಿದೆ. ಲಾಲ್ಟಿಪುರ-ಭೋಪಾಲ್ ನಡುವೆ ಸಂಚರಿಸುವ ರಾಪ್ಟಿಸಾಗರ್ ಎಕ್ಸ್‌ಪ್ರೆಸ್ ರೈಲು ಮಧ್ಯದಲ್ಲಿ ಯಾವುದೇ ರೈಲ್ವೆ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಈ ಎರಡು ರೈಲ್ವೆ ನಿಲ್ದಾಣಗಳ ನಡುವೆ ಸುಮಾರು 201 ಕಿ.ಮೀ ದೂರವಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಕೆಲವೊಮ್ಮೆ ಕ್ರಾಸಿಂಗ್ ಗಾಗಿ ರಾಪ್ಟಿಸಾಗರ್ ರೈಲನ್ನು ನಿಲ್ಲಿಸಲಾಗುತ್ತದೆ. ಈ ವೇಳೆ ಅಪಹರಣಕಾರನು ತಪ್ಪಿಸಿಕೊಳ್ಳುವ ಸಾಧ್ಯತೆಗಳಿದ್ದವು. ಈ ಕಾರಣಕ್ಕೆ ಉಳಿದ ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರೈಲ್ವೆ ಇಲಾಖೆಯ ಈ ಕ್ರಮದಿಂದಾಗಿ ಅಪಹರಣಕಾರನು ಸಿಕ್ಕಿ ಬಿದ್ದಿದ್ದಾನೆ.

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ವಿಶೇಷವೆಂದರೆ ಅಪಹರಣಕ್ಕೊಳಗಾದ ಮೂರೇ ಗಂಟೆಗಳಲ್ಲಿ ಮೂರು ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ. ಲಲಿತಪುರದಿಂದ ಭೋಪಾಲ್‌ಗೆ ಸಾಗಲು ರಾಪ್ಟಿಸಾಗರ್ ರೈಲಿಗೆ ಸುಮಾರು 3.15 ಗಂಟೆ ಬೇಕಾಗುತ್ತದೆ. ಆದರೆ ಮಗುವನ್ನು ರಕ್ಷಿಸಲು ಈ ರೈಲು ವೇಗವಾಗಿ ಸಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲು ಸೇರುವಂತೆ ಮಾಡಿದ ಕಾರಣಕ್ಕೆ ಸಾರ್ವಜನಿಕರು ರೈಲ್ವೆ ಪೊಲೀಸರನ್ನು ಹಾಗೂ ರೈಲು ಚಾಲಕನನ್ನು ಅಭಿನಂದಿಸಿದ್ದಾರೆ. ರಾಪ್ಟಿಸಾಗರ್ ಎಕ್ಸ್‌ಪ್ರೆಸ್ ರೈಲು ಉತ್ತರ ಪ್ರದೇಶದ ಗೋರಖ್‌ಪುರದಿಂದ ಕೇರಳದ ತಿರುವನಂತಪುರಂಗೆ 3,253 ಕಿಲೋಮೀಟರ್ ಗಳವರೆಗೆ ಸಾಗುತ್ತದೆ.

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಅಪಹರಣಕಾರನು ಮಗುವನ್ನು ರೈಲಿನ ಮೂಲಕ ಅಪಹರಣ ಮಾಡಲು ಮುಂದಾಗಿದ್ದ. ಆದರೆ ರೈಲ್ವೆ ಪೊಲೀಸರ ತಕ್ಷಣದ ಕ್ರಮಗಳಿಂದ ಅವನ ಪ್ರಯತ್ನ ವಿಫಲವಾಗಿದೆ. ಈ ಘಟನೆಯು ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ದು ನಿರ್ಲಕ್ಷ ವಹಿಸುವ ಪೋಷಕರಿಗೆ ಪಾಠವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೂರು ವರ್ಷದ ಮಗುವಿಗಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ರೈಲ್ವೆ ಪೊಲೀಸರು

ಈ ಬಗ್ಗೆ ಹಲವು ಬಾರಿ ಜಾಗೃತಿ ಮೂಡಿಸಲಾಗಿದ್ದರೂ ಯಾರೂ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದಾಗಿ ಈ ರೀತಿಯ ದುಷ್ಕೃತ್ಯಗಳು ಪದೇ ಪದೇ ನಡೆಯುತ್ತಿವೆ.

Most Read Articles

Kannada
English summary
Railway police rescues kidnapped baby within three hours. Read in Kannada.
Story first published: Tuesday, October 27, 2020, 17:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X