ಜೈಲರ್ ಹಿಟ್, ನಿರ್ಮಾಪಕರಿಂದ ದುಬಾರಿ ಗಿಫ್ಟ್: ಆದ್ರೂ ಸಾಮಾನ್ಯ ಸ್ಕಾರ್ಪಿಯೋದಲ್ಲಿ ರಜಿನಿ ಓಡಾಟ

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಅವರ ಖ್ಯಾತಿ ತಮಿಳಿಗೆ ಸೀಮಿತವಾಗಿಲ್ಲ. ತಲೈವಾ ರಜನಿಕಾಂತ್ ಅವರಿಗೆ ಭಾರತದ್ಯಾಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲೂ ಹಲವು ಟಾಪ್ ಹೀರೋಗಳ ಜೊತೆ ಮಲ್ಟಿಸ್ಟಾರರ್ ಸಿನಿಮಾ ಮಾಡಿ ಇಂಡಿಯನ್ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.

ನಟ ರಜನಿಕಾಂತ್ ಅವರ 170ನೇ ಚಿತ್ರದ ಶೂಟಿಂಗ್ ತಾಮಿಳುನಾಡಿನ ನೆಲ್ಲೈ ಜಿಲ್ಲೆಯ ಪನಗುಡಿಯಲ್ಲಿ ನಡೆಯುತ್ತಿದೆ. ನಟ ರಜನಿಕಾಂತ್ ತಮ್ಮ ಸ್ಕಾರ್ಪಿಯೋದಲ್ಲಿ ಚಿತ್ರೀಕರಣಕ್ಕೆ ಬಂದಿದ್ದರು. ಬಿಎಂಡಬ್ಲ್ಯು ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಅವರು ಈ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೈಲರ್ ಚಿತ್ರದ ದೊಡ್ಡ ಯಶಸ್ಸಿನ ನಂತರ ನಟ ರಜನಿಕಾಂತ್ ಪ್ರಸ್ತುತ ಜೈ ಭೀಮ್ ಚಿತ್ರವನ್ನು ನಿರ್ದೇಶಿಸಿದ ಜ್ಞಾನವೇಲ್ ನಿರ್ದೇಶನದ ಹೊಸ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

Superstar Rajinikanth

ಇದಕ್ಕಾಗಿ ಚಿತ್ರದ ಎಲ್ಲಾ ಪೂಜೆ ಕಾರ್ಯಕ್ರಮ ಕಳೆದ ವಾರ ನಡೆದಿತ್ತು. ಸಿನಿಮಾದ ಚಿತ್ರೀಕರಣ ಸದ್ಯ ನೆಲ್ಲಿ ಜಿಲ್ಲೆಯ ಪನಗುಡಿಯಲ್ಲಿ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಕೇರಳದ ತಿರುವನಂತಪುರಂನಲ್ಲಿ ಆರಂಭವಾಗಿದ್ದರೆ, ಮುಂದಿನ ಹಂತದ ಚಿತ್ರೀಕರಣ ಸದ್ಯ ಪನಗುಡಿಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ಇಂದು ಬೆಳಗ್ಗೆ ಮಹೀಂದ್ರಾದ ಸ್ಕಾರ್ಪಿಯೋ ಎನ್ ( Mahindra Scorpio N) ಕಾರ್‌ನಲ್ಲಿರುವ ಶೂಟಿಂಗ್ ಸ್ಪಾಟ್‌ಗೆ ನಟ ರಜನಿಕಾಂತ್ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು.

ಸೂಪರ್‌ಸ್ಟಾರ್ ರಜನಿಕಾಂತ್ ಬರುತ್ತಿದ್ದಾರೆ ಎಂದು ತಿಳಿದ ಆ ಭಾಗದ ಜನರು ಅವರನ್ನು ನೋಡಲು ಮುಗಿಬಿದ್ದರು. ಬರುವಾಗ ಕಾರು ನಿಲ್ಲಿಸಿ ಕಾರಿನ ವೀಂಡೋ ತೆರೆದು ಅಭಿಮಾನಿಗಳಿಗೆ ಕೈ ಬಿಸಿ ಸಂತಸ ವ್ಯಕ್ತಪಡಿಸಿದರು. ಇದನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ರಜನಿ ಅಭಿಮಾನಿಗಳಲ್ಲಿ ಅವರ ಸ್ಕಾರ್ಪಿಯೋ ಎನ್ ಕಾರಿನ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

Superstar Rajinikanth

ರಜನಿ ಬಳಿ ಬಿಎಂಡಬ್ಲ್ಯು ಕಾರು ಇದ್ದರೂ ಸ್ಕಾರ್ಪಿಯೋ ಕಾರಿನಲ್ಲಿ ಚಿತ್ರೀಕರಣಕ್ಕೆ ಬಂದಿದ್ದಾರೆ. ಈ ಬಗ್ಗೆ ಜನರು ಆಶ್ಚರ್ಯದಿಂದ ಮಾತನಾಡುತ್ತಿದ್ದಾರೆ. ರಜನಿಕಾಂತ್ ಈ ಸ್ಕಾರ್ಪಿಯೋದಲ್ಲಿ ಚಿತ್ರೀಕರಣಕ್ಕೆ ಬಂದಿದ್ದಕ್ಕೆ ಕಾರಣವಿದೆ. ಇದನ್ನು ತಿಳಿಯಲು ಮೊದಲು ನಾವು ಈ ಸ್ಕಾರ್ಪಿಯೋ ಕಾರಿನ ಬಗ್ಗೆ ತಿಳಿದುಕೊಳ್ಳಬೇಕು.ಸ್ಕಾರ್ಪಿಯೋ ಕಾರು ಬಹಳ ಹಿಂದಿನಿಂದಲೂ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ.

ಈ ಕಾರು ಆಫ್ ರೋಡ್ ಕಾರು ಆಗಿದ್ದರೂ, ಇದು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರು ಪ್ರಸ್ತುತ ಈ ಕಾರನ್ನು ಶೂಟಿಂಗ್‌ಗೆ ಬಳಸುತ್ತಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ, ಬಿಡುಗಡೆಯಾದಾಗಿನಿಂದಲೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದರಿಂದ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ.

Superstar Rajinikanth

ಮಹೀಂದ್ರಾ ಸ್ಕಾರ್ಪಿಯೋ ಎನ್ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. ಮತ್ತೊಂದು ಪವರ್‌ಟ್ರೇನ್ ಆಯ್ಕೆ ಬಗ್ಗೆ ಮಾತನಾಡುವುದರೆ, 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಈ ಸ್ಕಾರ್ಪಿಯೋ ಎನ್, 172 bhp ಗರಿಷ್ಠ ಪವರ್ ಹಾಗೂ 370 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, 6 ಸ್ವೀಡ್ ಅಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆ ಹೊಂದಿರುವ ಕಾರು, 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಮಹೀಂದ್ರಾ ಸ್ಕಾರ್ಪಿಯೋ ಎನ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

ಇದರೊಂದಿಗೆ ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್‍ಯುವಿಯ ಡೀಸೆಲ್ ಎಂಜಿನ್‌ಗೆ ಸಂಬಂಧಿಸಿದಂತೆ, ಈ ಕಾರು 20198 ಸಿಸಿ ಎಂಜಿನ್ ಅನ್ನು ಹೊಂದಿದೆ. ಇದು 130.07 bhp ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್‌ಗೆ ಸಂಬಂಧಿಸಿದಂತೆ, 1997cc ಎಂಜಿನ್ 200 bhp ಪವರ್ ಮತ್ತು 370 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Tuesday, October 10, 2023, 17:17 [IST]
English summary
Rajinikanth arrived shooting spot in mahindra scorpio n suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+