ನಟ ಸಂಜಯ್ ದತ್ ಮನೆಗೆ ಬಂದ ಹೊಸ ಅತಿಥಿ... ಸೆಲೆಬ್ರಿಟಿಗಳಿಗೆ ನೆಚ್ಚಿನ ಕಾರಿದು..
ಬಾಲಿವುಡ್ ಸಿನಿಮಾ ರಂಗದಲ್ಲಿರುವ ಸೆಲೆಬ್ರಿಟಿಗಳು ಎಷ್ಟು ಹಣವಂತರೆಂದು ತಿಳಿಯುವುದು ಅವರ ಗ್ಯಾರೇಜ್‌ನಲ್ಲಿರುವ ಐಷಾರಾಮಿ ವಾಹನಗಳನ್ನು ಕಂಡಾಗಲೇ. ಈಗಾಗಲೇ ನಾವು ಬಾಲಿವುಡ್ ಸೆಲೆಬ್ರಿಟಿಗಳ ಕಾರ್ ಮತ್ತು ಬೈಕ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ನೀಡಿದ್ದೆವು. ಇದೀಗ ನಟ ಸಂಜಯ್ ದತ್ ಕೂಡಾ ಮತ್ತೊಂದು ಹೊಸ ಕಾರನ್ನು ಖರೀದಿ ಮಾಡಿದ್ದು, ಈ ಕಾರು ಹೆಚ್ಚು ಕಮ್ಮಿ ಹಲವಾರು ಸೆಲೆಬ್ರಿಟಿಗಳಿಗೆ ಜನಪ್ರಿಯ ಆಯ್ಕೆಯಾಗಿದೆ.

ಬಾಲಿವುಡ್‍ನ ನಟ ಸಂಜಯ್ ದತ್ ಮೊನ್ನೆಯಷ್ಟೆ ಸುಮಾರು ರೂ. 2.33 ಕೋಟಿ ಬೆಲೆಬಾಳುವ ಹೊಸ ರೇಂಜ್ ರೋವರ್ ವೋಗ್ ಲಾಂಗ್ ವ್ಹೀಲ್ ಬೇಸ್ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ರೇಂಜ್ ರೋವರ್ ಸಂಸ್ಥೆಯ ಕಾರುಗಳನ್ನು ಹಲವಾರು ಸೆಲೆಬ್ರಿಟಿಗಳು ಖರೀದಿ ಮಾಡಿದ್ದು, ಇತ್ತೀಚೆಗೆ ನಮ್ಮ ಡಾಲಿ (ಧನಂಜಯ್) ಸಹ ರೇಂಜ್ ರೋವರ್ ಸಂಸ್ಥೆಯ ಕಾರನ್ನು ಖರೀದಿ ಮಾಡಿದ್ದರು.

ಸಂಜಯ್ ದತ್ ಖರೀದಿ ಮಾಡಿರುವ ಈ ಕಾರು ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದ್ದು, ಹಲವಾರು ಐಷಾರಾಮಿ ವೈಶಿಷ್ಟ್ಯತೆ ಮತ್ತು ಇನ್ನಿತರೆ ಸೌಲತ್ತುಗಳನ್ನು ಒಳಗೊಂಡಿದೆ. ಇಷ್ಟೆ ಅಲ್ಲದೇ ಈ ಕಾರು 4.4 ಲೀಟರ್ ಎಸ್‍ಡಿವಿ8, 8 ಸಿಲೆಂಡರ್ ಎಂಜಿನ್ ಸಹಾಯದಿಂದ 335ಬಿಹೆಚ್‍ಪಿ ಮತ್ತು 740ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
Image Courtesy: Yogen Shah

ಸಂಜಯ್ ದತ್‍ನ ಮತ್ತಷ್ಟು ಕಾರು ಮತ್ತು ಬೈಕ್ ಕಲೆಕ್ಷನ್
ಬಿಎಮ್‍ಡಬ್ಲ್ಯೂ 7 ಸಿರೀಸ್
ಕಾರು ಮತ್ತು ಬೈಕ್‍ಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ನಟ ಸಂಜಯ್ ದತ್ ಅವರ ಬಿಳಿ ಹಲವಾರು ಕಾರುಗಳಿದ್ದು, ಬಣ್ಣದ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನು ಖರೀದಿಸಿದ್ದು, ಈ ಕಾರನ್ನು ತನ್ನ ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರಂತೆ. ಉದ್ದವಾದ ವೀಲ್‍ಬೇಸ್ ಆವೃತ್ತಿಯ ಬಿಎಮ್‍ಡಬ್ಲ್ಯೂ 7 ಸಿರೀಸ್ ಕಾರುಗಳು ಭಾರತದಲ್ಲಿ ದೊರೆಯುತ್ತಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ.

ಫೆರಾರಿ 599 ಜಿಟಿಬಿ
ನಟ ಸಂಜಯ್ ದತ್ ಸಿಗ್ನೆಚರ್ ರೆಡ್ ಬಣ್ಣದ ಫೆರಾರಿ 599 ಜಿಟಿಬಿ ಕಾರನ್ನು ಕೂಡ ಖರೀದಿಸಿದ್ದು, ಈ ಕಾರನ್ನು ತಮ್ಮ 'ಫೆರಾರಿ ಕಿ ಸವಾರಿ' ಎಂಬ ಚಿತ್ರದಲ್ಲಿ ಬಳಸಲಾಗಿದೆ. ಇನ್ನು ಈ ಕಾರು 6.0 ಲೀಟರ್ ವಿ12 ಎಂಜಿನ್ ಸಹಾಯದಿಂದ 612 ಬಿಹೆಚ್‍ಪಿ ಮತ್ತು 608ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಆಡಿ ಕ್ಯೂ7
ಆಡಿ ಕ್ಯೂ 7 ನಟ ಸಂಜಯ್ ದತ್‍ನ ದೈನಂದಿನ ಪ್ರಯಾಣದ ಕಾರಾಗಿದ್ದು, ಇದನ್ನು ಆತನ ಪತ್ನಿ ತನ್ನ 57ನೇ ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದರಂತೆ. ಇನ್ನು ಈ ಎಸ್‍ಯುವಿ ಕಾರು 3.0 ಲೀಟರ್ ವಿ6 ಎಂಜಿನ್ ಸಹಾಯದಿಂದ 245ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 7.1 ಸೆಕೆಂಡಿಗೆ 0 ರಿಂದ 100 ಕಿಲೀಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ಆಡಿ ಆರ್8
ನಟ ಸಂಜಯ್ ದತ್ ಕಪ್ಪು ಬಣ್ಣದ ಆಡಿ ಆರ್8 ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದರು. ಇನ್ನು ಈ ಕಾರು 4.2 ಲೀಟರ್ ವಿ8 32 ವೇಲ್ವ್ ಎಂಜಿನ್ ಸಹಾಯದಿಂದ 420ಬಿಹೆಚ್‍ಪಿ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ರೋಲ್ಸ್ ರಾಯ್ಸ್ ಗೋಸ್ಟ್
ನಟ ಸಂಜಯ್ ದತ್ ರೋಲ್ಸ್ ರಾಯ್ಸ್ ಗೋಸ್ಟ್ ಕಾರನ್ನು ಖರೀದಿಸಿದ್ದು, ಆತನ ಪತ್ನಿಗೆ ಉಡುಗೊರೆಯಾಗಿ ಕೊಟ್ಟಿದ್ದಾರಂತೆ. ಮಾರುಕಟ್ಟೆಯಲ್ಲಿ 2.5 ಕೋಟಿಗೆ ಮಾರಾಟಗೊಳ್ಳುತ್ತಿರುವ ಈ ಕಾರು 6.6 ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಏಂಜಿನ್ ಸಹಾಯದಿಂದ 560ಬಿಹೆಚ್‍ಪಿ ಮತ್ತು 780ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಡುಕಾಟಿ ಮಲ್ಟಿಸ್ಟ್ರಾಡ್ 1200
ಬಾಲಿವುಡ್‍ನಲ್ಲಿರುವ ಬೈಕ್ ಪ್ರಿಯರ ನಟರಲ್ಲಿ ಸಂಜಯ್ ದತ್ ಕೂಡ ಒಬ್ಬರು. ಶಾರುಖ್ ಖಾನ್ ಅಭಿನಯದ ರಾ ಒನ್ ಚಿತ್ರದಲ್ಲಿ ಸಂಜಯ್ ದತ್ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದು, ನಟಿಸಿರುವುದಕ್ಕಾಗಿ ಆತ ಯಾವುದೇ ಸಂಭಾವನೆಯನ್ನು ಪಡೆಯಲಿಲ್ಲವಂತೆ. ಹೀಗಾಗಿ ಡುಕಾಟಿ ಮಲ್ಟಿಸ್ಟ್ರಾಡ್ 1200 ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನು ಈ ಬೈಕ್ 1,200ಸಿಸಿ ವಿ-ಟ್ವಿನ್ ಎಂಜಿನ್ ಸಹಾಯದಿಂದ 157 ಬಿಹೆಚ್‍ಪಿ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹಾರ್ಲಿ ಡೇವಿಡ್‍ಸನ್ ಫ್ಯಾಟ್‍ಬಾಯ್
ಹಾರ್ಲಿ ಡೇವಿಡ್‍ಸನ್ ಫ್ಯಾಟ್‍ಬಾಯ್ ಬೈಕ್ ಬಾಲಿವುಡ್‍ನಲ್ಲಿ ಜನಪ್ರಿಯವಾಗಿದ್ದು, ನಟ ಸಂಜಯ್ ದತ್ ನೀಲಿ ಬಣ್ಣದ ಹಾರ್ಲಿ ಡೇವಿಡ್‍ಸನ್ ಫ್ಯಾಟ್‍ಬಾಯ್ ಬೈಕ್ ಅನ್ನು ಪಡೆದುಕೊಂಡಿದ್ದಾರೆ. ಈ ಬೈಕ್ ಅನ್ನು ವರು ಕಿರಿಯವರಾಗಿದ್ದಾಗ ಇದರಲ್ಲೇ ಹಲವಾರು ಬಾರಿ ಅವರ ನೆರೆಹೊರೆಯರಿಗೆ ಕಾಣಿಸಿಕೊಳ್ಳುತಿದ್ದರಂತೆ.


Click it and Unblock the Notifications








