ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಎಸ್‌ಯುವಿ ಖರೀದಿಸಿದ ರ‍್ಯಾಪರ್ ಬಾದ್‌ಶಾ

ರ‍್ಯಾಪ್ ಹಾಡುಗಳಿಗೆ ಹೆಸರುವಾಸಿಯಾಗಿರುವ ಗಾಯಕ ಮತ್ತು ರ‍್ಯಾಪರ್ ಬಾದ್‌ಶಾ ಅವರು ಇತ್ತೀಚೆಗೆ ಐಷಾರಾಮಿ ಎಸ್‍ಯುವಿ ಕಾರನ್ನು ಖರೀದಿಸಿದ್ದಾರೆ. ಇವರು ಖರೀದಿಸಿದ ಐಷಾರಾಮಿ ಎಸ್‍ಯುವಿ ಜನಪ್ರಿಯ ಆಡಿ ಕ್ಯೂ8 ಆಗಿದೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ರ‍್ಯಾಪರ್ ಬಾದ್‌ಶಾ ಪಂಜಾಬಿ ಮತ್ತು ಹರ್ಯಾನ್ವಿ ಸಂಗೀತಕ್ಕೆ ಹೆಸರುವಾಸಿಯಾಗಿದೆ. ಬಾದ್‌ಶಾ ಅವರು ಬಾಲಿವುಡ್ ಹಿಟ್ ಚಲನಚಿತ್ರಗಳಾದ 'ದಂಗಲ್' ಮತ್ತು 'ಗಲ್ಲಿ ಬಾಯ್' ಹಾಡುಗಳನ್ನು ಒಳಗೊಂಡಂತೆ ಬಹು ಹಿಟ್ ಹಾಡುಗಳನ್ನು ನಿರ್ಮಿಸಿದ್ದಾರೆ ಮತ್ತು ಸ್ವತಂತ್ರ ಆಲ್ಬಂಗಳು ಕೂಡ. ಇನ್ನು ಸಂಗೀತ ಕ್ಷೇತ್ರಕ್ಕೆ ಸೇರುವ ಮೊದಲು ಬಾದ್‌ಶಾ ಅವರು ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ರ‍್ಯಾಪರ್ ಯೋ ಯೋ ಹನಿ ಸಿಂಗ್ ಸ್ಥಾಪಿಸಿದ ಮಾಫಿಯಾ ಮುಂಡೀರ್ ಎಂಬ ಸಂಗೀತ ತಂಡದೊಂದಿಗೆ ಅವರು ತಮ್ಮ ಸಂಗೀತ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಬಾದ್‌ಶಾ ಅವರು ಯೋ ಯೋ ಹನಿ ಸಿಂಗ್ ಮತ್ತು ಇತರ ರ‍್ಯಾಪರ್‌ಗಳಾದ ರಫ್ತಾರ್, ಇಕ್ಕಾ ಮತ್ತು ಲಿಲ್ ಗೋಲು ಅವರೊಂದಿಗೂ ಕೆಲಸ ಮಾಡಿದ್ದಾರೆ. ತಂಡದ ಭಾಗವಾಗಿ, ಅವರು ಗೆಟ್ ಅಪ್ ಜವಾನಿ, ಅಂಗ್ರೇಜಿ ಬೀಟ್ ಮತ್ತು ಬ್ರೌನ್ ರ‍್ಯಾಂಗ್‌ನಂತಹ ಹಿಟ್ ಹಾಡುಗಳಲ್ಲಿ ಯೋ ಯೋ ಹನಿ ಸಿಂಗ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಇತ್ತೀಚೆಗೆ ರ‍್ಯಾಪರ್ ಬಾದ್‌ಶಾ ತಮನ್ನಾ ಭಾಟಿಯಾ ಜೊತೆಗೆ ಮಾಡಿರುವ ಹೊಸ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ತಬಾಹಿ ಹೆಸರಿನ ಈ ವೀಡಿಯೋ ಸಾಂಗ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ರ‍್ಯಾಪರ್ ಬಾದ್‌ಶಾ ಸಾಮಾನ್ಯವಾಗಿ ಸೆಲೆಬ್ರಿಟಿ ನಟಿಯರ ಜತೆ ರ‍್ಯಾಪ್‌ ಮ್ಯೂಸಿಕ್‌ ವೀಡಿಯೋಗಳನ್ನು ಪರಿಚಯಿಸುತ್ತಿರುತ್ತಾರೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಜತೆ 'ಟಾಪ್‌ ಟಕ್ಕರ್' ವೀಡಿಯೋ ಸಾಂಗ್‌ ಮಾಡಿದ್ದರು. ಇದು ಸಹ ಸಾಕಷ್ಟು ವೈರಲ್ ಆಗಿತ್ತು.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ರ‍್ಯಾಪರ್ ಬಾದ್‌ಶಾ ಅವರು ಖರೀದಿಸಿದ ಆಡಿ ಕ್ಯೂ8 ಎಸ್‍ಯುವಿ ವಿಶಿಷ್ಟವಾಗಿ ಕಾಣುವ 'ಡ್ರ್ಯಾಗನ್ ಆರೆಂಜ್ ಮೆಟಾಲಿಕ್' ಪೇಂಟ್ ಶೇಡ್ ಅನ್ನು ಹೊಂದಿದೆ., "ಡೈನಾಮಿಕ್, ಸ್ಪೋರ್ಟಿ, ಬಹುಮುಖ, ಈ ಕಾರು ನನ್ನಂತೆಯೇ ಇದೆ. ನಾನು #AudiQ8 ನೊಂದಿಗೆ ನನ್ನ ಪ್ರಯಾಣವನ್ನು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ. #AudiExperienceಗೆ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ..

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಈ ಆಡಿ ಕ್ಯೂ8 ಕೂಪ್-ಎಸ್‍ಯುವಿ ಭಾರತದಲ್ಲಿ ಜರ್ಮನ್ ಬ್ರಾಂಡ್‌ನ ಪ್ರಮುಖ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ, 1.38 ಕೋಟಿಯಾಗಿದೆ. ಈ ಕ್ಯೂ8 ಆಡಿ ಇಂಡಿಯಾದ ಎಸ್‍ಯುವಿ ಲೈನ್‌ಅಪ್‌ನಲ್ಲಿ ಆಡಿ ಕ್ಯೂ7 ನ ಮೇಲ್ಭಾಗದಲ್ಲಿದೆ ಮತ್ತು ಕ್ಯೂ7 ಗಿಂತ ಅಗಲವಾಗಿದೆ,

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಕ್ಯೂ7 ಎಸ್‍ಯುವಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ಸ್‍‍ಗಳನ್ನು ಹೊಂದಿದೆ. ಹೊಸ ಕ್ಯೂ8 ಮುಂಭಾಗದಲ್ಲಿ ಆಕರ್ಷಕ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಇದರ ಸುತ್ತಲೂ ಸಿಲ್ವರ್ ಅಸೆಂಟ್‍ಗಳನ್ನು ಅಳವಡಿಸಲಾಗಿದೆ. ಇನ್ನೂ ಪೂರ್ಣ ಪ್ರಮಾಣದ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಬ್ರ್ಯಾಂಡ್‍‍ನ ಮ್ಯಾಟ್ರಿಕ್ಸ್ ಎಲ್‍ಇಡಿ ಯುನಿ‍‍ಟ್‍ಗಳಿವೆ. ಜೊತೆಗೆ 21 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಆಡಿ ಕ್ಯೂ8 ಎಸ್‍ಯು‍ವಿಯು 3.0 ಬಿಎಸ್-6 ಟಿಎಫ್‍‍ಎಸ್‍ಐ 48 ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 340 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಕಂಪನಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಅನ್ನು ಅಳವಡಿಸಲಾಗಿದೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಈ ಕ್ಯೂ 8 ಎಸ್‍ಯುವಿಯು ಕೇವಲ 5.9 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಕ್ಯೂ8 ಎಸ್‍‍ಯುವಿಯು ಗಂಟೆಗೆ 250 ಕಿ.ಮೀ ಸ್ಪೀಡ್‍‍ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಯೂ8 ಎಸ್‍‍ಯು‍ವಿಯು ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ರೇರ್ ವೀವ್ ಮಿರರ್, ಡಿಜಿಟಲ್ ಕಂಪಾಸ್, ಪನಾರೋಮಿಕ್ ಸನ್‍‍ರೂಫ್, ಹೊಂದಾಣಿಕೆ ಮಾಡಬಹುದಾದ ಪವರ್ ಫ್ರಂಟ್ ಸೀಟ್‍ಗಳನ್ನು ಹೊಂದಿದೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಇನ್ನೂ ಇನ್ಫೋಟೇನ್‍‍ಮೆಂಟ್ ಮೋಡ್‍‍ಗಳಲ್ಲಿ ಕಾರ್ಯನಿರ್ವಹಿಸುವ 12.3 ಇಂಚಿನ ಡಿಜಿ‍‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನಿತರ ಅತ್ಯಾಧುನಿಕ ಫೀಚರ್ಸ್‍‍ಗಳನ್ನು ಒಳಗೊಂಡಿದೆ. ಈ ಆಡಿ ಕ್ಯೂ8ನಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಆರು - ಏರ್‍‍ಬ್ಯಾಗ್‍‍ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಬಿಎಸ್ ನೊಂದಿಗೆ ಇಬಿಡಿ, ಟಯರ್ ಫ್ರಶರ್ ಮ್ಯಾನೇಜ್‍‍ಮೆಂಟ್ ಸಿಸ್ಟಂ, ಎಲೆಕ್ಟ್ರೊ ಮ್ಯಾಗ್ನೆಟಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೋವರ್ ಆಂಕರ್‍‍ಗಳನ್ನು ಅಳವಡಿಸಲಾಗಿದೆ.

ರೂ.1.38 ಕೋಟಿ ಮೌಲ್ಯದ ಆಡಿ ಕ್ಯೂ8 ಐಷಾರಾಮಿ ಎಸ್‌ಯುವಿ ರ‍್ಯಾಪರ್ ಬಾದ್‌ಶಾ

ಆಡಿ ಕಾರುಗಳಿಗೆ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳು ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಇಈ ಆಡಿ ಕ್ಯೂ8 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್, ಪೋರ್ಷೆ ಕೇನ್, ಬಿಎಂಡಬ್ಲ್ಯು ಎಕ್ಸ್ 7 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

Article Published On: Tuesday, May 10, 2022, 10:28 [IST]
English summary
Rapper badshah buys new audi q8 luxury suv price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+