ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ದೀರ್ಘಕಾಲದಿಂದ ಭಾರತದಲ್ಲಿ ಬಜಾಜ್ ಸಂಸ್ಥೆಯ ಪಲ್ಸರ್ ದ್ವಿಚಕ್ರ ವಾಹನ ಪ್ರಸಿದ್ಧ ಬ್ರ್ಯಾಂಡ್ ಎಂಬ ಖ್ಯಾತಿ ಪಡೆದುಕೊಂಡಿದೆ. ತನ್ನ ವಿಶಿಷ್ಟ ವಿನ್ಯಾಸ, ಆಕರ್ಷಕ ನೋಟ ಹಾಗು ನವೀನ ರೀತಿಯ ಜಾಹೀರಾತಿನಿಂದ ಎಲ್ಲರನ್ನು ಸೆಳೆದುಕೊಂಡಿದೆ.

By Girish

ಕಳೆದ ಸೆಪ್ಟೆಂಬರ್ ತಿಂಗಳೊಂದರಲ್ಲೇ ಬಜಾಜ್ ಸಂಸ್ಥೆ, ಹೆಚ್ಚು ಕಡಿಮೆ 1,12,075 ಪಲ್ಸರ್ ಬೈಕುಗಳನ್ನು ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡಿದೆ ಎಂದರೆ ಈ ಬೈಕಿನ ಖ್ಯಾತಿಯ ಬಗ್ಗೆ ನೀವೇ ಊಹಿಸಿಕೊಳ್ಳಿ ಓದುಗರೇ... ಯಾಕಪ್ಪ ಈ ಬೈಕನ್ನು ತುಂಬಾ ಜನ ಇಷ್ಟ ಪಡ್ತಾರೆ ? ಎಂಬ ಕುತೂಹಲ ಎಷ್ಟೋ ಜನಕ್ಕೆ ಖಂಡಿತ ಇರುತ್ತದೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಇಷ್ಟೆಲ್ಲಾ ಪೀಠಿಕೆ ನೀಡುವಷ್ಟು ಜನಪ್ರಿಯ ಬ್ರ್ಯಾಂಡ್ ಆಗಿರುವ ಪಲ್ಸರ್ ಬೈಕನ್ನು ಟೋಕಿಯೊ ಆರ್ & ಡಿ ಸಹಯೋಗದೊಂದಿಗೆ ಬಜಾಜ್ ಆಟೊ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗ ಈ ದ್ವಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಿದ್ದು, ಈ ಪಲ್ಸರ್ ಮೋಟಾರ್ ಸೈಕಲ್ ಬಗ್ಗೆ ಹೆಚ್ಚಿನ ಮಾಹಿತಿ ತಿಳ್ಕೊಳೋಣ ಬನ್ನಿ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಪ್ರತಿಯೊಬ್ಬರಿಗೂ ಸಲ್ಲುವ ರೂಪಾಂತರ :

ಹೌದು, ವ್ಯಾಪಕ ಶ್ರೇಣಿಯನ್ನು ಹೊಂದಿರುವುದೇ ಪಲ್ಸರ್ ಬ್ರ್ಯಾಂಡ್‌ಗೆ ಪ್ಲಸ್ ಪಾಯಿಂಟ್ ಎನ್ನಬಹುದು. ಕಡಿಮೆ ಬಜೆಟ್‌‌ನಿಂದ ಹಿಡಿದು ಹೆಚ್ಚಿನ ಬಜೆಟ್‌ವರೆಗೆ ಪಲ್ಸರ್ ಬೈಕುಗಳು ಲಭ್ಯವಿದ್ದು, ನಿಮಗೆ ಬೇಕಾದ ರೂಪಾಂತರವನ್ನು ಆಯ್ದುಕೊಳ್ಳಬಹುದು.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಪಲ್ಸರ್ 135 ಎಲ್ಎಸ್ ನಿಂದ ಹಿಡಿದು ಪಲ್ಸರ್ ಆರ್‍ಎಸ್ 200ವರೆಗೆ ಪಲ್ಸರ್ ಬೈಕ್ ನಿಮಗೆ ಸೇವೆ ಒದಗಿಸಲಿದೆ. ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮೈಲೇಜ್ ನೀಡುವ ಮತ್ತು ವಿಶಿಷ್ಟ ಶೈಲಿಯ ಬೈಕ್ ಬೇಕೆಂದರೆ ಪಲ್ಸರ್ 135 ಎಲ್ಎಸ್ ಬೈಕ್ ಕೊಳ್ಳಲು ಗ್ರಾಹಕರು ಮುಂದಾಗುತ್ತಾರೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಅದೇ ರೀತಿ, ಮಧ್ಯಂತರ ಗ್ರಾಹಕರು ಪಲ್ಸರ್ 150 ಅಥವಾ 180ರ ಆವೃತಿಯನ್ನು ಆಯ್ಕೆ ಮಾಡುತ್ತಾರೆ ಹಾಗು ಬಲಿಷ್ಠ ಎಂಜಿನ್, ಅತ್ಯಾಕರ್ಷಕ ವಿನ್ಯಾಸ ಮತ್ತು ಮೈಲೇಜ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಇರುವವರು ಉನ್ನತ ಆವೃತಿಯ ಬೈಕನ್ನು ಆಯ್ದುಕೊಳ್ಳುತ್ತಾರೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ವೈಶಿಷ್ಟ್ಯಗಳು :

ಬಜಾಜ್ ಪಲ್ಸರ್ ಶ್ರೇಣಿಯ ವೈಶಿಷ್ಟ್ಯಗಳ ಪಟ್ಟಿ ಬಹಳಷ್ಟು ಉದ್ದವಿದೆ ಎನ್ನಬಹುದು. ಎಲ್ಲಾ ಪಲ್ಸರ್ ಮಾದರಿಗಳಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್, ಟ್ಯೂಬ್‌ಲೆಸ್ ಟೈರುಗಳು, ಎಂಜಿನ್ ಕಿಲ್ಲ್ ಸ್ವಿಚ್ ಮತ್ತು ಅಲೋಯ್ ಚಕ್ರ ನೋಡಹುದಾಗಿದೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಸ್ವಯಂಚಾಲಿತ ತಿರುವಿನ ಸೂಚಕಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಆಯಿಲ್ ಕೂಲರ್ ಹೊಂದಿವೆ. ಹೆಚ್ಚು ವೈಶಿಷ್ಟ್ಯಗಳ ದೀರ್ಘ ಪಟ್ಟಿಯನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪಲ್ಸರ್ ಬ್ರಾಂಡ್ ಯುವ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಕೊಟ್ಟ ಹಣಕ್ಕೆ ಮೋಸ ಇಲ್ಲ :

ಭಾರತವು 'ಬೆಲೆ ಸೂಕ್ಷ್ಮ' ಮಾರುಕಟ್ಟೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಕೈಗೆಟುಕುವ ಬೆಲೆಯ ವಾಹನಗಳ ಬಗ್ಗೆ ಮಾತ್ರ ನಾವು ಹೆಚ್ಚು ಗಮನ ಹರಿಸುತ್ತೇವೆ ಎನ್ನುವುದು ಸತ್ಯ ಸಂಗತಿ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಪಲ್ಸರ್ ವ್ಯಾಪ್ತಿಯು ವಿಭಿನ್ನವಾಗಿದೆ. ಎಲ್ಲಾ ಪಲ್ಸರ್ ಬ್ರ್ಯಾಂಡಿನ ಮೋಟಾರ್ ಸೈಕಲ್‌ಗಳೂ ಸಹ ಉತ್ತಮ ಶಕ್ತಿ, ಉತ್ತಮ ನೋಟ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದ್ದು, ಕೊಟ್ಟ ಹಣಕ್ಕೆ ಯೋಗ್ಯವಾದ ಸೇವೆ ನೀಡಲಿದೆ ಎನ್ನುವುದು ಪಲ್ಸರ್ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಹೊಸತನಕ್ಕೆ ಮತ್ತೊಂದು ಹೆಸರು ಪಲ್ಸರ್ :

ಮೊದಲ ಬಾರಿಗೆ ಪಲ್ಸರ್ ಬೈಕ್ 2003ರಲ್ಲಿ ಪ್ರಾರಂಭವಾಯಿತು. ಅಲ್ಲಿಂದೀಚೆಗೆ, ಕಂಪನಿಯು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಪಲ್ಸರ್ ಬೈಕಿಗೆ ನೀಡುತ್ತಲೇ ಬಂದಿದೆ. ಹೊಸ ಬಣ್ಣದ ಯೋಜನೆಗಳೊಂದಿಗೆ ಉತ್ಪನ್ನಗಳನ್ನು ಶ್ರೀಮಂತಗೊಳಿಸುತ್ತಿರುವುದು ಈ ಬೈಕಿನ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ಕೊಂಡೈಯುವಂತೆ ಮಾಡಿದೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಅಗ್ಗದ ನಿರ್ವಹಣೆ :

ಬಜಾಜ್ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ, ಬಿಡಿ ಭಾಗಗಳೂ ಸಹ ಬಹಳ ದುಬಾರಿ ಆಗಿರುವುದಿಲ್ಲ. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಸಹ ಸುಲಭವಾಗಿ ಲಭ್ಯವಾಗುವಂತಹ ನಿರ್ವಹಣೆಯನ್ನು ಪಲ್ಸರ್ ಬೈಕ್ ಪಡೆದುಕೊಂಡಿದೆ.

ಎಲ್ರಿಗೂ ಪಲ್ಸರ್ ಬೈಕ್ ಅಂದ್ರೆ ಅಚ್ಚು ಮೆಚ್ಚು... ಯಾಕೆ ಗೊತ್ತೆ ?

ಇಷ್ಟೆಲ್ಲಾ ಕಾರಣಗಳಿದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಲೂ ಸಹ ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠತೆ, ವಿನ್ಯಾಸ ಹಾಗು ಗ್ರಾಹಕ ಸ್ನೇಹಿ ವಿಶೇಷತೆಗಳನ್ನು ಪಡೆದುಕೊಳ್ಳಲಿರುವುದಂತೂ ಖಂಡಿತ.

More from DriveSpark

Article Published On: Wednesday, October 25, 2017, 11:30 [IST]
English summary
The Pulsar has been a renowned brand in India for a long time. The Pulsar brand has come a long way since then and in the month of September, Bajaj sold 1,12,075 units of the Pulsar in the Indian market and export market. It is the highest ever sales of Pulsar in a month. Let’s find out why the Pulsar is so popular
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+