ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

By Manoj Bk

ಕಾರಿನ ಎಕ್ಸಾಸ್ಟ್ ಪೈಪ್ ನಿಂದ ಹೊಗೆ ಹೊರ ಬರುವುದು ಸಹಜ ಪ್ರಕ್ರಿಯೆಯಾಗಿದೆ. ಹೊಗೆ ವಾಹನಗಳ ಇಂಧನ ದಹನದ ಒಂದು ಉಪ ಉತ್ಪನ್ನವಾಗಿದೆ. ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದರೆ ಮಾತ್ರ ಹೊಗೆ ಬರುವುದಿಲ್ಲ. ಸಾಮಾನ್ಯ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಚಾಲನೆ ಮಾಡಿದರೆ ನಿರ್ದಿಷ್ಟ ಪ್ರಮಾಣದಲ್ಲಿ ಹೊಗೆ ಹೊರ ಬರುತ್ತದೆ. ಒಂದು ವೇಳೆ ಕಾರು ಹೆಚ್ಚು ಹೊಗೆಯನ್ನು ಹೊರಸೂಸಿದರೆ, ಅದು ಒಳ್ಳೆಯ ಸಂಕೇತವಲ್ಲ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಅದರಲ್ಲೂ ಎಕ್ಸಾಸ್ಟ್ ಪೈಪ್ ನಿಂದ ಹೊರ ಬರುವ ಹೊಗೆ ಬೇರೆ ಬೇರೆ ಬಣ್ಣಗಳಲ್ಲಿ ಕಾಣಿಸಿಕೊಂಡರೆ ಕಾರಿನಲ್ಲಿ ಸಮಸ್ಯೆ ಇದೆ ಎಂದರ್ಥ. ಕಾರುಗಳು ಕಪ್ಪು ಬಣ್ಣದಲ್ಲಿ ಮಾತ್ರವಲ್ಲದೆ ಬಿಳಿ ಹಾಗೂ ನೀಲಿ ಬಣ್ಣಗಳಲ್ಲಿಯೂ ಹೊಗೆಯನ್ನು ಹೊರಸೂಸುತ್ತವೆ. ಕಾರಿನಿಂದ ಹೊರ ಬರುವ ಹೊಗೆಯ ಬಣ್ಣದ ಮೂಲಕ ಕಾರಿನಲ್ಲಿ ಏನು ಸಮಸ್ಯೆಯಾಗಿದೆ ಎಂಬುದನ್ನು ಊಹಿಸಬಹುದು. ಆದರೆ ಹಲವರಿಗೆ ಈ ಸಂಗತಿಗಳು ತಿಳಿದಿಲ್ಲ. ಈ ಲೇಖನದಲ್ಲಿ ಕಾರಿನ ನಿಷ್ಕಾಸ ಪೈಪ್ ನಿಂದ ಹೊರ ಬರುವ ವಿವಿಧ ಬಗೆಯ ಹೊಗೆಗಳ ಬಗ್ಗೆ ತಿಳಿದು ಕೊಳ್ಳೋಣ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಡೀಸೆಲ್ ಎಂಜಿನ್ ಕಾರಿನ ಎಕ್ಸಾಸ್ಟ್ ಪೈಪ್ ನಿಂದ ಕಪ್ಪು ಹೊಗೆ ಹೊರ ಬಂದರೆ:

ಸಾಮಾನ್ಯವಾಗಿ ಎಕ್ಸಾಸ್ಟ್ ಪೈಪ್ ನಿಂದ ಕಪ್ಪು ಹೊಗೆ ಬಂದರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಮೀರಿದ ಯಾವುದೇ ಸಮಸ್ಯೆ ಇದ್ದರೂ, ಅದನ್ನು ಸುಲಭವಾಗಿ ಸರಿ ಪಡಿಸಬಹುದು. ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳು ಕಪ್ಪು ಹೊಗೆ ಉತ್ಪಾದಿಸುವುದು ಸಾಮಾನ್ಯ ಸಂಗತಿ. ಕಳೆದ ಕೆಲವು ವರ್ಷಗಳವರೆಗೆ ಡೀಸೆಲ್ ಕಾರುಗಳ ಎಕ್ಸಾಸ್ಟ್ ಸಿಸ್ಟಂನಿಂದ ಕಪ್ಪು ಹೊಗೆ ಹೊರ ಬರುವುದು ಸಹಜವಾಗಿತ್ತು.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಆದರೆ ಇತ್ತೀಚಿಗೆ ಬಿಡುಗಡೆಯಾಗುವ ಡೀಸೆಲ್ ಕಾರುಗಳಲ್ಲಿ, ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ (ಡಿಪಿಎಫ್) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಡಿಪಿಎಫ್ ಕಾರಿನಿಂದ ಹೊರ ಹೋಗುವ ಹೊಗೆ ಕಣಗಳನ್ನು ಸೆರೆಹಿಡಿಯುತ್ತದೆ. ಇದರಿಂದ ಎಕ್ಸಾಸ್ಟ್ ಪೈಪ್ ಮೂಲಕ ಶುದ್ಧವಾದ ಹೊಗೆ ಹೊರಬರುತ್ತದೆ. ಹಾಗಾಗಿ ಡೀಸೆಲ್ ಎಂಜಿನ್ ಇರುವ ಕಾರುಗಳಿಂದ ಹೊಗೆ ಬಂದರೆ, ಕಾರು ಮಾಲೀಕರು ಚಿಂತಿಸಬೇಕಾಗಿಲ್ಲ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಒಂದು ವೇಳೆ ಡೀಸೆಲ್ ಎಂಜಿನ್ ಕಾರಿನಿಂದ ನಿರಂತರವಾಗಿ ಕಪ್ಪು ಹೊಗೆ ಹೊರಬರುತ್ತಿದ್ದರೆ ಏನಾದರೂ ಸಮಸ್ಯೆಗಳಿರುವ ಸಾಧ್ಯತೆಗಳಿರುತ್ತವೆ. ಫ್ಯೂಯಲ್ ಇಂಜೆಕ್ಟರ್ ಹಾಳಾದರೆ ಹೀಗಾಗುತ್ತದೆ. ಅತಿಯಾದ ಬಳಕೆಯಿಂದಾಗಿ, ಫ್ಯೂಯಲ್ ಇಂಜೆಕ್ಟರ್ ಹಾಳಾಗುತ್ತದೆ. ಅಥವಾ ಡಿಪಿಎಫ್ ಗಳಲ್ಲಿ ಸಮಸ್ಯೆಗಳಿರಬಹುದು. ಡೀಸೆಲ್ ಎಂಜಿನ್ ಅಳವಡಿಸಿರುವ ಕಾರುಗಳಿಂದ ಕಪ್ಪು ಹೊಗೆ ಹೊರಬರುತ್ತಲೇ ಇದ್ದರೆ, ಕಾರ್ ಅನ್ನು ಸರ್ವೀಸ್ ಸೆಂಟರಿಗೆ ಕೊಂಡೊಯ್ಯುವ ಸಮಯ ಬಂದಿದೆ ಎಂದರ್ಥ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಪೆಟ್ರೋಲ್ ಎಂಜಿನ್ ಕಾರಿನ ಎಕ್ಸಾಸ್ಟ್ ಪೈಪ್ ನಿಂದ ಕಪ್ಪು ಹೊಗೆ ಹೊರೆ ಬಂದರೆ

ಡೀಸೆಲ್ ಎಂಜಿನ್ ಕಾರುಗಳಂತೆ, ಪೆಟ್ರೋಲ್ ಎಂಜಿನ್ ಕಾರುಗಳಲ್ಲಿಯೂ ಕಪ್ಪು ಹೊಗೆಯನ್ನು ನಿರೀಕ್ಷಿಸಬಹುದು. ಅದರಲ್ಲೂ ವಿಶೇಷವಾಗಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಕಾರ್ ಅನ್ನು ಚಾಲನೆ ಮಾಡಿದರೆ ಕಪ್ಪು ಹೊಗೆ ಬರುವ ಸಾಧ್ಯತೆಗಳು ಹೆಚ್ಚು. ಒಂದು ವೇಳೆ ನಿರಂತರ ಕಪ್ಪು ಹೊಗೆ ಬರುತ್ತಿದ್ದರೆ ಟರ್ಬೋಚಾರ್ಜರ್‌ನಲ್ಲಿ ಏನೋ ಸಮಸ್ಯೆಯಾಗಿದೆ ಎಂದರ್ಥ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಅಥವಾ ಎಂಜಿನ್‌ನಲ್ಲಿ ಸಮಸ್ಯೆಗಳಿರಬಹುದು. ಒಂದು ವೇಳೆ ಪೆಟ್ರೋಲ್ ಎಂಜಿನ್ ಕಾರುಗಳಿಂದ ನಿರಂತರ ಕಪ್ಪು ಹೊಗೆ ಬರುತ್ತಿದ್ದರೆ ತಕ್ಷಣವೇ ಕಾರ್ ಅನ್ನು ಸರ್ವೀಸ್ ಸೆಂಟರ್'ಗೆ ಕೊಂಡೊಯ್ಯಿರಿ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಎಕ್ಸಾಸ್ಟ್ ಪೈಪ್ ನಿಂದ ನೀಲಿ ಹೊಗೆ ಹೊರ ಬಂದರೆ:

ಡೀಸೆಲ್ ಅಥವಾ ಪೆಟ್ರೋಲ್ ಎರಡೂ ಕಾರುಗಳು ನೀಲಿ ಬಣ್ಣದ ಹೊಗೆಯನ್ನು ಹೊರಸೂಸುವ ಸಾಧ್ಯತೆಗಳಿರುತ್ತವೆ. ಕಾರಿನ ಎಕ್ಸಾಸ್ಟ್ ಪೈಪ್ ನಿಂದ ನೀಲಿ ಹೊಗೆ ಹೊರ ಬಂದರೆ ಅಥವಾ ಎಣ್ಣೆ ಸುಡುವಂತಹ ವಾಸನೆ ಬಂದರೆ, ತಕ್ಷಣ ಕಾರನ್ನು ಸರ್ವೀಸ್ ಸೆಂಟರ್'ಗೆ ಕೊಂಡೊಯ್ಯಿರಿ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಕಾರಿನ ಎಂಜಿನ್‌ ಆಯಿಲ್ ಸಿಸ್ಟಂನಲ್ಲಿ ಸಮಸ್ಯೆಗಳಿದ್ದರೆ ಹೊಗೆಯು ನೀಲಿ ಬಣ್ಣದಲ್ಲಿ ಹೊರ ಬರುತ್ತದೆ. ಕೆಲವೊಮ್ಮೆ ಸ್ವಾಭಾವಿಕವಾಗಿ ಸಂಭವಿಸುವ ಸವಕಳಿಯಿಂದಲೂ ಹೀಗಾಗುತ್ತದೆ. ಇದರಿಂದ ಕಾರು ಹೋದ ಸ್ಥಳದಲ್ಲೆಲ್ಲಾ ಎಂಜಿನ್ ಆಯಿಲ್ ಸೋರಿಕೆಯಾಗುವ ಸಾಧ್ಯತೆಗಳಿವೆ. ತಕ್ಷಣವೇ ಈ ಸಮಸ್ಯೆಯನ್ನು ಸರಿ ಪಡಿಸದಿದ್ದರೆ ಮತ್ತಷ್ಟು ಅನಗತ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಎಕ್ಸಾಸ್ಟ್ ಪೈಪ್ ನಿಂದ ಬಿಳಿ ಹೊಗೆ ಹೊರ ಬಂದರೆ:

ಕಾರಿನ ಎಕ್ಸಾಸ್ಟ್ ಪೈಪ್ ನಿಂದ ಬಿಳಿ ಹೊಗೆ ಹೊಯರ ಬಂದರೆ ಹೆಚ್ಚಿನ ಗಮನ ನೀಡಿ. ದೊಡ್ಡ ಪ್ರಮಾಣದ ಬಿಳಿ ಹೊಗೆ ನಿರಂತರವಾಗಿ ಹೊರಸೂಸುತ್ತಿದ್ದರೆ, ಸಮಸ್ಯೆ ಇದೆ ಎಂದರ್ಥ. ಬಿಳಿ ಹೊಗೆ ಹೊರಬಂದರೆ, ಅದು ಎಂಜಿನ್ ಆಯಿಲ್'ಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು. ಕೆಲವೊಮ್ಮೆ ಬಿಳಿ ಹೊಗೆಯು ಸ್ವಲ್ಪ ನೀಲಿ ಛಾಯೆಯನ್ನು ಹೊಂದಿರಬಹುದು.

ಕಾರುಗಳ ಎಕ್ಸಾಸ್ಟ್ ಪೈಪ್'ಗಳಿಂದ ವಿವಿಧ ಬಣ್ಣದ ಹೊಗೆಗಳು ಹೊರ ಬರಲು ಕಾರಣಗಳಿವು

ಕಾರಿನ ಎಕ್ಸಾಸ್ಟ್ ಪೈಪ್ ನಿಂದ ಬಿಳಿ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ತಕ್ಷಣವೇ ಸಮಸ್ಯೆಯನ್ನು ಸರಿಪಡಿಸಿ. ಇಲ್ಲವಾದರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು, ನಿಯಮಿತವಾಗಿ ಕಾರುಗಳನ್ನು ಸರ್ವೀಸ್ ಮಾಡಿಸಿ. ಕಾರಿನ ಎಂಜಿನ್ ಆಯಿಲ್ ಹಾಗೂ ಕೂಲೆಂಟ್ ಲೆವೆಲ್ ಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ. ಇವುಗಳು ಅತಿಯಾದ ಹೊಗೆ ಹೊರಸೂಸುವಿಕೆಯಂತಹ ಸಮಸ್ಯೆಗಳನ್ನು ತಡೆಯುತ್ತವೆ.

Most Read Articles

Kannada
English summary
Reasons for different color smokes coming from exhaust pipe details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X