ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಹಿಂದೆ ರೈತರು ಭೂಮಿಯನ್ನು ಉಳುಮೆ ಮಾಡಲು ಹಸುಗಳನ್ನು ಬಳಸುತ್ತಿದ್ದರು. ಆದರೆ ಇದಕ್ಕೆ ಹೆಚ್ಚು ಶ್ರಮ ಹಾಗೂ ಸಮಯದ ಅಗತ್ಯವಿತ್ತು. ಹಸುಗಳ ಜಾಗಕ್ಕೆ ಬಂದಿರುವ ಟ್ರಾಕ್ಟರ್'ಗಳು ಭೂಮಿ ಉಳುಮೆ ಮಾಡುವ ಕೆಲಸವನ್ನು ಸರಳಗೊಳಿಸಿವೆ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಟ್ರಾಕ್ಟರುಗಳಲ್ಲಿರುವ ವಿಶೇಷತೆ ಬಗ್ಗೆ ಜನರಿಗೆ ಸಾಕಷ್ಟು ತಿಳಿದಿರಬಹುದು. ಆದರೆ ಟ್ರಾಕ್ಟರುಗಳ ಟಯರ್‌ಗಳ ಒಳಗೆ ನೀರನ್ನು ಏಕೆ ಸುರಿಯಲಾಗುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ವಾಸ್ತವವಾಗಿ ಟ್ರಾಕ್ಟರ್ ಟಯರ್‌ಗಳಲ್ಲಿ ನೀರು ತುಂಬಲಾಗುತ್ತದೆ ಎಂಬುದೇ ಹಲವರಿಗೆ ತಿಳಿದಿಲ್ಲ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಟ್ರಾಕ್ಟರ್ ಟಯರ್‌ಗಳ ಒಳಭಾಗದಲ್ಲಿ ನೀರನ್ನು ಏಕೆ ತುಂಬಲಾಗುತ್ತದೆ, ಎಷ್ಟು ನೀರು ತುಂಬಬೇಕು, ಇದರಿಂದಾಗುವ ಪ್ರಯೋಜನಗಳೇನು ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಟಯರ್‌ಗಳ ತೂಕವನ್ನು ಹೆಚ್ಚಿಸಲು ನೀರನ್ನು ಬಳಸಲಾಗುತ್ತದೆ. ಇದು ಟಯರ್‌ಗಳು ಜಾರುವುದನ್ನು ತಡೆಯುತ್ತದೆ. ನೀರು ತುಂಬುವುದರಿಂದ ಟ್ರಾಕ್ಟರ್ ಟಯರ್‌ಗಳ ಜೀವಿತಾವಧಿ ಹೆಚ್ಚಾಗುತ್ತದೆ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಒರಟು ಭೂಪ್ರದೇಶದಲ್ಲಿ ಬಳಸುವುದರಿಂದ ಟ್ರಾಕ್ಟರ್ ಟಯರ್‌ಗಳು ತ್ವರಿತವಾಗಿ ಹಾನಿಗೊಳಗಾಗುತ್ತವೆ. ನೀರು ತುಂಬುವುದರಿಂದ ಟ್ರಾಕ್ಟರ್ ಟಯರ್‌ಗಳು ಹೆಚ್ಚು ಕಾಲ ಬಾಳಿಕೆ ಬರುವುದರ ಜೊತೆಗೆ ಹೆಚ್ಚು ಸಮಯ ಕಾರ್ಯನಿರ್ವಹಿಸುತ್ತವೆ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಟ್ರಾಕ್ಟರ್ ಟಯರ್‌ಗಳಲ್ಲಿ ನೀರನ್ನು ತುಂಬುವಾಗ ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ ಕೊಳವೆಯೊಳಗಿನ 75%ನಷ್ಟು ಜಾಗವನ್ನು ಮಾತ್ರ ನೀರಿನಿಂದ ತುಂಬಿಸಬೇಕು. ಉಳಿದ ಜಾಗವನ್ನು ಗಾಳಿಯಿಂದ ತುಂಬಿಸಬೇಕು.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಟಯರ್‌ಗಳನ್ನು ನೀರಿನಿಂದ ತುಂಬಿಸುವ ಮೂಲಕ ಟ್ರ್ಯಾಕ್ಟರ್‌ಗೆ ಸ್ಥಿರತೆ ಒದಗಿಸಲಾಗುತ್ತದೆ. ಟ್ರಾಕ್ಟರಿಗೆ ಸ್ಥಿರತೆಯನ್ನು ಒದಗಿಸಲು ಹಲವಾರು ವಿಧಾನಗಳಿವೆ. ಇವುಗಳಲ್ಲಿ ಟಯರ್‌ಗಳನ್ನು ನೀರಿನಿಂದ ತುಂಬಿಸುವುದು ಸರಳ ವಿಧಾನವಾಗಿದ್ದು, ವೆಚ್ಚವೂ ಕಡಿಮೆಯಾಗಿದೆ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಟಯರ್‌ಗಳನ್ನು ನೀರಿನಿಂದ ತುಂಬಿಸುವುದರಿಂದ ಟ್ರ್ಯಾಕ್ಟರ್‌ನ ತೂಕ ಹೆಚ್ಚಾಗುವುದರ ಜೊತೆಗೆ ಟಯರ್‌ಗಳ ಹಿಡಿತ ಸುಧಾರಿಸುತ್ತದೆ. ಟಯರ್‌ಗಳು ಜಾರಿಬೀಳುವುದನ್ನು ತಪ್ಪಿಸುವುದರಿಂದ ಮಣ್ಣಿನ ಹಾನಿ ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಜೊತೆಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕೆಲವು ದೇಶಗಳಲ್ಲಿ ಟ್ರಾಕ್ಟರ್ ಟಯರ್‌ಗಳಲ್ಲಿನ ನೀರಿನ ಬದಲು ಕ್ಯಾಲ್ಸಿಯಂ ಕ್ಲೋರೈಡ್ದ್ರಾವಣವನ್ನು ಬಳಸಲಾಗುತ್ತದೆ. ಶೀತ ವಾತಾವರಣವಿರುವ ದೇಶಗಳಲ್ಲಿ ಟಯರ್‌ಗಳಲ್ಲಿ ನೀರನ್ನು ಸುಲಭವಾಗಿ ತುಂಬಲು ಸಾಧ್ಯವಿಲ್ಲ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ತಾಪಮಾನವು ತುಂಬಾ ಕಡಿಮೆಯಾಗಿರುವುದರಿಂದ ಟಯರ್‌ಗಳ ಒಳಗೆ ನೀರು ಹೆಪ್ಪುಗಟ್ಟುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಶೀತ ವಾತಾವರಣ ಹೊಂದಿರುವ ದೇಶಗಳಲ್ಲಿ ನೀರಿನ ಬದಲು ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣವನ್ನು ಬಳಸಲಾಗುತ್ತದೆ. ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣವನ್ನು ಬಳಸುವುದಕ್ಕೆ ಹಲವಾರು ಕಾರಣಗಳಿವೆ.

ಟ್ರಾಕ್ಟರುಗಳ ಟಯರ್‌ಗಳಲ್ಲಿ ನೀರು ತುಂಬಲು ಪ್ರಮುಖ ಕಾರಣಗಳಿವು

ಕಡಿಮೆ ತಾಪಮಾನದ ಕಾರಣಕ್ಕೆ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣವು ಟಯರ್‌ಗಳ ಒಳಗೆ ಹೆಪ್ಪುಗಟ್ಟುವುದಿಲ್ಲ ಎಂಬುದು ಪ್ರಮುಖ ಕಾರಣವಾಗಿದೆ. ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣವು ನೀರಿಗಿಂತ 30% ಹೆಚ್ಚು ತೂಗುತ್ತದೆ. ಇದರಿಂದ ಟಯರ್ ಅಥವಾ ಟ್ಯೂಬ್‌ಗೆ ಯಾವುದೇ ಹಾನಿಯುಂಟಾಗುವುದಿಲ್ಲವೆಂಬುದು ಮತ್ತೊಂದು ಕಾರಣವಾಗಿದೆ.

Most Read Articles

Kannada
English summary
Reasons for filling water and calcium chloride in tractor tyres. Read in Kannada.
Story first published: Friday, July 2, 2021, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X