ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

By Manoj Bk

ಪ್ರಯಾಣಿಕರು ವಿಮಾನಗಳನ್ನು ಹತ್ತುವ ಮೊದಲು ವಿಮಾನ ನಿಲ್ದಾಣಗಳಲ್ಲಿ ಹಲವು ಚಟುವಟಿಕೆಗಳು ನಡೆಯುತ್ತವೆ. ಎಲ್ಲಾ ಚಟುವಟಿಕೆಗಳು ಪೂರ್ತಿಯಾದ ನಂತರ ವಿಮಾನದ ಕೆಳಗಿನ ಭಾಗದಲ್ಲಿ ಕೋನ್'ನಂತಹ ವಸ್ತುವನ್ನಿಟ್ಟು ಜನರ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಈ ಮೂಲಕ ವಿಮಾನದ ರೆಕ್ಕೆಗಳ ಕೆಳಗೆ ಯಾರೂ ನಡೆಯದಂತೆ ಮಾಡಲಾಗುತ್ತದೆ. ವಿಮಾನಗಳನ್ನು ಹತ್ತುವ ಪ್ರಯಾಣಿಕರಿಗೆ ರೆಕ್ಕೆಗಳ ಕೆಳಗೆ ನಡೆಯಲು ಏಕೆ ಅವಕಾಶ ನೀಡುವುದಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ವಿಮಾನದ ರೆಕ್ಕೆಗಳ ಕೆಳಗೆ ನಡೆಯುವುದನ್ನು ನಿರ್ಬಂಧಿಸಲಾಗುತ್ತದೆ. ಇದಕ್ಕೂ ಮುನ್ನ ವಿಮಾನಗಳಲ್ಲಿ ಎಂಜಿನ್ ಅನ್ನು ಎಲ್ಲಿ ಅಳವಡಿಸಲಾಗಿರುತ್ತದೆ ಎಂಬುದನ್ನು ತಿಳಿದಿರುವುದು ಮುಖ್ಯ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಸದ್ಯಕ್ಕೆ ಹಲವಾರು ರೀತಿಯ ವಿಮಾನಗಳು ಕಾರ್ಯಾಚರಿಸುತ್ತಿವೆ. ಕಮರ್ಷಿಯಲ್ ವಿಮಾನಗಳಲ್ಲಿ ಎಂಜಿನ್ ಅನ್ನು ಸಾಮಾನ್ಯವಾಗಿ ಎರಡು ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಹೆಚ್ಚಿನ ಕಮರ್ಷಿಯಲ್ ವಿಮಾನಗಳಲ್ಲಿ ಎಂಜಿನ್ ಅನ್ನು ರೆಕ್ಕೆಗಳ ಅಡಿಯಲ್ಲಿ ಅಳವಡಿಸಲಾಗಿರುತ್ತದೆ. ರೆಕ್ಕೆಗಳ ಕೆಳಗಿನ ಭಾಗದಲ್ಲಿ ಎಂಜಿನ್ ಇಲ್ಲದಿದ್ದರೆ, ವಿಮಾನಗಳ ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಬಹುತೇಕ ಕಮರ್ಷಿಯಲ್ ವಿಮಾನಗಳಲ್ಲಿ ಈ ಎರಡು ಪ್ರದೇಶಗಳಲ್ಲಿ ಎಂಜಿನ್‌ಗಳನ್ನು ಅಳವಡಿಸಲಾಗಿರುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಪ್ರಯಾಣಿಕರಿಗೆ ರೆಕ್ಕೆಗಳ ಕೆಳಗೆ ನಡೆಯಲು ಏಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ನೋಡುವುದಾದರೆ, ವಿಮಾನದ ಎಂಜಿನ್‌ನ ಸ್ಥಳವನ್ನು ಅತ್ಯಂತ ಅಪಾಯಕಾರಿ ಭಾಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಈ ಭಾಗಕ್ಕೆ ಪ್ರಯಾಣಿಕರಿಂದ ಯಾವುದೇ ತೊಂದರೆಯಾದರೆ ಅದನ್ನು ಸರಿಪಡಿಸಲು ದುಬಾರಿ ವೆಚ್ಚವಾಗುತ್ತದೆ. ವಿಮಾನವು ಇಳಿದ ಹಲವು ಸಮಯದ ನಂತರವೂ ಎಂಜಿನ್ ತುಂಬಾ ಬಿಸಿಯಾಗಿರುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಆ ಸಮಯದಲ್ಲಿ ಎಂಜಿನ್‌ ಬಳಿ ಹೋದರೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಎಂಜಿನ್ ಅಳವಡಿಸಲಾಗಿರುತ್ತದೆ ಎಂಬ ಅಂಶದ ಹೊರತಾಗಿ ಪ್ರಯಾಣಿಕರಿಗೆ ರೆಕ್ಕೆಗಳ ಕೆಳಗೆ ನಡೆಯಲು ಅನುಮತಿ ನಿರಾಕರಿಸುವುದಕ್ಕೆ ಇನ್ನೂ ಹಲವು ಕಾರಣಗಳಿವೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಪ್ರಯಾಣಿಕರು ವಿಮಾನ ಹತ್ತುವ ವೇಳೆಯಲ್ಲಿ ಅಲ್ಲಿರುವ ಸಿಬ್ಬಂದಿ ಲಗೇಜ್ ಲೋಡ್ ಮಾಡುವುದು, ಇಂಧನ ತುಂಬಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ವಿಮಾನಗಳಿಗೆ ಇಂಧನ ತುಂಬಿಸುವಾಗಲು ಹಲವು ರೀತಿಯ ಅಪಾಯಗಳಿವೆ. ಈ ಕಾರಣಕ್ಕೂ ಪ್ರಯಾಣಿಕರಿಗೆ ರೆಕ್ಕೆಗಳ ಕೆಳಗೆ ನಡೆಯಲು ಅವಕಾಶ ನೀಡುವುದಿಲ್ಲ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ವಿಮಾನಗಳಿಗೆ ಇಂಧನ ಟ್ಯಾಂಕ್ ಗಳನ್ನು ರೆಕ್ಕೆಗಳಲ್ಲಿ ಮಾತ್ರ ನೀಡಲಾಗುತ್ತದೆ. ವಿಮಾನಗಳಿಗೆ ಇಂಧನ ತುಂಬಿಸಲು ಹೆಚ್ಚು ಸಮಯ ಬೇಕಾಗುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ದೀರ್ಘ ಪ್ರಯಾಣದ ವಿಮಾನಗಳಿಗೆ ಇಂಧನ ತುಂಬಲು 40 ನಿಮಿಷಗಳು ಬೇಕಾಗುತ್ತವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ರೆಕ್ಕೆಗಳ ಕೆಳಗೆ ನಡೆಯಲು ಅವಕಾಶ ನೀಡುವುದಿಲ್ಲ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ವಿಮಾನದ ಎಡ ರೆಕ್ಕೆಗಳಲ್ಲಿ ಕೆಂಪು ದೀಪವನ್ನು ಅಳವಡಿಸಿದರೆ, ವಿಮಾನದ ಬಲ ಭಾಗದ ರೆಕ್ಕೆಗಳಲ್ಲಿ ಹಸಿರು ದೀಪವನ್ನು ಅಳವಡಿಸಲಾಗುತ್ತದೆ.

ಈ ಕಾರಣಕ್ಕೆ ಪ್ರಯಾಣಿಕರು ವಿಮಾನಗಳ ರೆಕ್ಕೆಗಳ ಕೆಳಗೆ ನಡೆಯುವಂತಿಲ್ಲ

ಇನ್ನು ವಿಮಾನದ ಟೇಲ್ ಬಳಿ ಬಣ್ಣದ ದೀಪವನ್ನು ಅಳವಡಿಸಲಾಗಿರುತ್ತದೆ. ರೆಕ್ಕೆಗಳ ಮೇಲೆ ಕೆಂಪು ಹಾಗೂ ಹಸಿರು ದೀಪಗಳನ್ನು ಬಳಸುವುದಕ್ಕೆ ಮೊದಲ ಕಾರಣವೆಂದರೆ ಈ ದೀಪಗಳಿಂದ ವಿಮಾನಗಳನ್ನು ಸುಲಭವಾಗಿ ನೋಡಬಹುದು.

Most Read Articles

Kannada
English summary
Reasons for not allowing passengers to walk under the wings of an airplane. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X