ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಕಾರು, ಬೈಕ್‌ಗಳಲ್ಲಿ ಸೈಲೆನ್ಸರ್‌ಗಳನ್ನು ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ. ಟ್ರಕ್‌ಗಳಲ್ಲಿ ಸೈಲೆನ್ಸರ್‌ಗಳನ್ನು ಕೆಳಭಾಗದಲ್ಲಿ ಅಳವಡಿಸಲಾಗಿರುತ್ತದೆ. ಆದರೆ ಟ್ರಾಕ್ಟರ್‌ನಲ್ಲಿರುವ ಸೈಲೆನ್ಸರ್‌ಗಳನ್ನು ಟ್ರಾಕ್ಟರ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿರುತ್ತದೆ.

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಯಾವ ಕಾರಣಕ್ಕೆ ಟ್ರಾಕ್ಟರ್‌ಗಳ ಮೇಲ್ಭಾಗದಲ್ಲಿ ಸೈಲೆನ್ಸರ್ ಅಳವಡಿಸಲಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಟ್ರ್ಯಾಕ್ಟರ್‌ಗಳನ್ನು ಇಂದಿಗೂ ಭಾರತದ ಪ್ರತಿಯೊಂದು ಹಳ್ಳಿಗಳಲ್ಲಿ ಬಳಸಲಾಗುತ್ತದೆ. ಟ್ರಾಕ್ಟರ್ ಭಾರತದ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕ ಮಾದರಿಗಳಲ್ಲಿ ಟ್ರಾಕ್ಟರುಗಳು ಬಿಡುಗಡೆಯಾಗುತ್ತಿದ್ದರೂ ಸೈಲೆನ್ಸರ್‌ಗಳು ಮಾತ್ರ ಟ್ರ್ಯಾಕ್ಟರ್‌ಗಳ ಮೇಲ್ಭಾಗದಲ್ಲಿಯೇ ಇರುತ್ತವೆ. ಇದಕ್ಕೆ ಹಲವಾರು ಕಾರಣಗಳಿವೆ

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಮೊದಲ ಕಾರಣವೆಂದರೆ ಟ್ರಾಕ್ಟರ್ ಆರಾಮದಾಯಕವಾದ ವಾಹನವಲ್ಲ. ಇದನ್ನು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಎಲ್ಲಾ ಜನರಿಗೆ ತಲುಪಿಸುವುದು ಅವಶ್ಯಕವಾಗಿದೆ. ಈ ಕಾರಣಕ್ಕೆ ಅದರ ಬೆಲೆಯನ್ನು ಕಡಿಮೆ ಇಡಬೇಕಾಗುತ್ತದೆ. ಎಂಜಿನ್ ಮುಂದೆ ಇರುವಾಗ ಸೈಲೆನ್ಸರ್ ಅನ್ನು ಹಿಂದೆ ಇಟ್ಟರೆ ಖರ್ಚು ಹೆಚ್ಚಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಟ್ರ್ಯಾಕ್ಟರ್‌ಗಳಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಮೆಕ್ಯಾನಿಕ್ ಟ್ರ್ಯಾಕ್ಟರ್‌ಗಳ ಮೇಲಿನಿಂದ ಕೆಲಸ ನಿರ್ವಹಿಸುತ್ತಾನೆ. ಜ್ಯಾಕ್ ಬಳಸಿ ಟ್ರ್ಯಾಕ್ಟರ್‌ಗಳನ್ನು ಮೇಲಕ್ಕೆ ಎತ್ತುವ ಅವಶ್ಯಕತೆ ಇರುವುದಿಲ್ಲ. ಇದರ ಜೊತೆಗೆ ಸೈಲೆನ್ಸರ್ ಅನ್ನು ಹಿಂಭಾಗದಲ್ಲಿ ಅಳವಡಿಸಿದರೆ, ಚಾಲಕ ಹಾಗೂ ಟ್ರ್ಯಾಕ್ಟರ್‌ನಲ್ಲಿರುವವರ ಮೇಲೆ ಬಿಸಿ ಗಾಳಿ ಬರುತ್ತದೆ.

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಮತ್ತೊಂದು ಪ್ರಮುಖ ಕಾರಣವೆಂದರೆ, ಟ್ರ್ಯಾಕ್ಟರ್‌ಗಳನ್ನು ಹೊಲ, ಗದ್ದೆ, ಜಮೀನು, ಬೆಟ್ಟ, ಕಂದರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಒಂದು ವೇಳೆ ಸೈಲೆನ್ಸರ್ ಅನ್ನು ಕೆಳಕ್ಕೆ ಅಳವಡಿಸಿದರೆ ಈ ಪ್ರದೇಶಗಳಲ್ಲಿ ಅದು ಸುಲಭವಾಗಿ ಹಾನಿಗೊಳಗಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಮೂರನೆಯ ಕಾರಣವೆಂದರೆ ಟ್ರ್ಯಾಕ್ಟರ್‌ಗಳಲ್ಲಿ ಟ್ರಾಲಿ ಸೇರಿದಂತೆ ಅನೇಕ ಕೃಷಿ ಸಂಬಂಧಿತ ಉಪಕರಣಗಳನ್ನು ಅಳವಡಿಸಲಾಗುತ್ತದೆ. ಒಂದು ವೇಳೆ ಸೈಲೆನ್ಸರ್ ಗಳನ್ನು ಹಿಂಭಾಗದಲ್ಲಿ ಅಳವಡಿಸಿದರೆ ಅವುಗಳು ಹಾನಿಗೊಳಗಾಗುತ್ತವೆ.

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಹೊಲದಲ್ಲಿ ಉಳುಮೆ, ಬಿತ್ತನೆ ಹಾಗೂ ಕೊಯ್ಲು ಮಾಡುವಾಗ ಸೈಲೆನ್ಸರ್‌ನಿಂದ ಹೊರಹೊಮ್ಮುವ ಹೊಗೆ ಬೆಳೆಯನ್ನು ಕಲುಷಿತಗೊಳಿಸುತ್ತದೆ. ಇದರ ಜೊತೆಗೆ ಒಣ ವಸ್ತುಗಳ ಮೇಲೆ ಸೈಲೆನ್ಸರ್ ನ ಕಿಡಿ ತಗುಲಿ ಬೆಂಕಿಗೆ ಆಹುತಿಯಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಸೈಲೆನ್ಸರ್ ಅನ್ನು ಮುಂಭಾಗದಲ್ಲಿ ಅಳವಡಿಸಲಾಗಿರುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಟ್ರ್ಯಾಕ್ಟರ್‌ಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲೇ ಏಕೀರುತ್ತವೆ ಗೊತ್ತಾ?

ಟ್ರಾಕ್ಟರ್ ಗಳನ್ನು ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಿರುವುದಿಲ್ಲ. ಇದು ಸಾರಿಗೆ ವ್ಯವಸ್ಥೆಯು ಅಲ್ಲ. ಈ ಕಾರಣಕ್ಕೆ ಟ್ರಾಕ್ಟರ್ ನಿಂದ ಉಂಟಾಗುವ ಶಬ್ದದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.

Most Read Articles

Kannada
English summary
Reasons for tractors having silencer in front. Read in Kannada.
Story first published: Thursday, August 27, 2020, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X